Wednesday, May 8, 2024
Homeಯಕ್ಷಗಾನಕೋಳ್ಯೂರು ರಾಮಚಂದ್ರ ರಾಯರಿಗೆ ಕೀರಿಕ್ಕಾಡು ಪ್ರಶಸ್ತಿ

ಕೋಳ್ಯೂರು ರಾಮಚಂದ್ರ ರಾಯರಿಗೆ ಕೀರಿಕ್ಕಾಡು ಪ್ರಶಸ್ತಿ

ಯಕ್ಷಗಾನದ ಮಹಾನ್ ಸಾಧಕ ಗುರು ಪ್ರಸಂಗಕರ್ತೃ ಅರ್ಥಧಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣಾರ್ಥ ಕೊಡಲಾಗುತ್ತಿರುವ 2022ರ ಸಾಲಿನ ಕೀರಿಕ್ಕಾಡು ಪ್ರಶಸ್ತಿಗೆ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರು ಆಯ್ಕೆಯಾಗಿದ್ದಾರೆ.

ಕೋಳ್ಯೂರು ಎಂಬ ಹೆಸರಿನಿಂದಲೇ ಯಕ್ಷಗಾನ ವಲಯದಲ್ಲಿ ಮನೆಮಾತಾಗಿ ನೆಲೆನಿಂತಿರುವ ರಾಮಚಂದ್ರ ರಾಯರು ಸುದೀರ್ಘ ಕಾಲ ಶ್ರೇಷ್ಠ ಪಾತ್ರಧಾರಿಯಾಗಿ ರಂಗದಲ್ಲಿ ಮೆರೆದವರು. ಕೂಟಗಳಲ್ಲಿಯೂ ಭಾಗವಹಿಸಿದವರು.

‘90ರ ತಾರುಣ್ಯ’ದಲ್ಲಿ ಈಗಲೂ ಗರತಿಯ ವೇಷದಲ್ಲಿ ಸಾರ್ಥಕ್ಯವನ್ನು ತಂದುಕೊಡಬಲ್ಲ ಕಲಾವಂತಿಕೆಯನ್ನು ಹೊಂದಿದವರು. ಅವರ ಪರಿಪಕ್ವವೂ ಮೌಲಿಕವೂ ಆದ ಸಾಧನೆಯನ್ನು ಪರಿಗಣಿಸಿ ಕೀರಿಕ್ಕಾಡು ಪ್ರಶಸ್ತಿಯನ್ನು ಪ್ರದಾನ ಮಾಡಿ ದಿನಾಂಕ 25-12-2022 ಆದಿತ್ಯವಾರ ನಡೆಯಲಿರುವ 78ನೆಯ ವಾರ್ಷಿಕೋತ್ಸವದಂದು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು ಎಂದು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ರಮಾನಂದ ಬನಾರಿ ಮಂಜೇಶ್ವರ, ಅಧ್ಯಕ್ಷರು, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ, ಅಂಚೆ: ಪಂಜಿಕಲ್ಲು 671543, ಕಾಸರಗೋಡು ಜಿಲ್ಲೆ ಮೊಬೈಲ್: 9446297226

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments