Saturday, May 4, 2024
Home Blog

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ವಿಶೇಷ ಸಾಧನೆ

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್: ವಿದ್ಯಾಭಾರತಿ ಕರ್ನಾಟಕ:

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ:

ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಅಭಿಜ್ಞಾ ಶಾಂಭವಿ ಎಸ್.ಜಿ.ಎಫ್.ಐಗೆ ಆಯ್ಕೆ

ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯು ದಿನಾಂಕ ಒಕ್ಟೋಬರ್ 28,29, 30 ರಂದು ಮಧ್ಯಪ್ರದೇಶದ ದೇವಾಸ್‍ನಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ:(14ರ ವಯೋಮಾನದ) ಅಭಿಜ್ಞಾ ಶಾಂಭವಿ, 6ನೇ ತರಗತಿ(ಶ್ರೀ ಸುಧೀರ್ ಮತ್ತು ಶ್ರೀಮತಿ ಲತಾ ದಂಪತಿ ಪುತ್ರಿ) –ಪ್ರಥಮ ಸ್ಥಾನ ದೊಂದಿಗೆ ಚಿನ್ನ ಪದಕ, ಮಹತಿ, 6ನೇ ತರಗತಿ(ಶ್ರೀ ಶಿವರಂಜನ್.ಎಂ ಮತ್ತು ಶ್ರೀಮತಿ ಲಾವಣ್ಯ ಭಟ್ ದಂಪತಿ ಪುತ್ರಿ)- ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾಳೆ.

ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ.ಎಂ.ಭಟ್, 10ನೇ ತರಗತಿ(ಶ್ರೀ ರವಿನಾರಾಯಣ.ಎಂ ಮತ್ತು ಶ್ರೀಮತಿ ಶರಾವತಿ ದಂಪತಿ ಪುತ್ರ) – ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾನೆ.

ಪ್ರಥಮ ಸ್ಥಾನ ಪಡೆದ ಅಭಿಜ್ಞಾ ಶಾಂಭವಿ ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿದ ಡಾ.ಬಿ.ಯಸ್. ರಾವ್

0

ಕೆ.ಯಂ.ಸಿ.ಹಾಸ್ಪಿಟಲ್ ಅತ್ತಾವರ ಮಂಗಳೂರು ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಜನಪ್ರಿಯ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು. ಗಡಿನಾಡು ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ.ಯಸ್. ರಾವ್ ಅವರು ದೀಪಬೆಳಗಿಸಿ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರ ನಡೆಸುತ್ತಿರುವ ಕೆ.ಯಂ.ಸಿ.ಯವರ ಕಾರ್ಯ ಸ್ತುತ್ಯರ್ಹ ವೆಂದರು.

ಸಾಂಸ್ಕೃತಿಕ ವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಪ್ರತಿಷ್ಠಾನ ತನ್ನ ಸಾಂಸ್ಕೃತಿಕ ಕ್ಷೇತ್ರದ ಹೊರತಾದ ಚಟುವಟಿಕೆ ಮೆಚ್ಚುವಂತಹದು. ಈ ಹಿಂದೆ ಕೊವಿಡ್ ಸಮಯದಲ್ಲೂ ಪ್ರತಿಷ್ಠಾನವು ಕೊರೋನಾ ಯಕ್ಷಗಾನದ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರರಾದುದನ್ನು ನೆನಪಿಸಿದರು.


ಕೆ.ಯಂ.ಸಿ.ಯ ಕ್ಯಾನ್ಸರ್ ತಜ್ಞ ವ್ಯೆದ್ಯರಾದ ಡಾ.ಅಭಿಷೇಕ್ ಕೃಷ್ಣ ಅವರು ಕ್ಯಾನ್ಸರ್ ಕುರಿತಾದ ಮಾಹಿತಿ ನೀಡಿದರು. ನಾಗರಿಕರು ದುಶ್ಟಟ ದಿಂದ ಮುಕ್ತರಾಗಿ , ಹಿತ ಮಿತವಾದ ಆಹಾರ ಸೇವನೆ ಯಿಂದ ಆರೋಗ್ಯ ವಂತರಾಗಿರಿ. ಕ್ಯಾನ್ಸರ್ ರೋಗಿಗಳು ಭಯ ಪಡ ಬೇಕಾಗಿಲ್ಲ. ಈಗ ರೋಗ ಲಕ್ಷಣಗಳು ಯಾವ ಹಂತದಲ್ಲಿದ್ದರೂ ಈಗ ಗುಣಪಡಿಸಬಹುದು.


ಕೆ.ಯಂ. ಸಿ.ಯ ಶಿಬಿರದ ಸಂಘಟಕ ಉದಯ ಭಟ್ ರವರು ಈ ಹಿಂದೆ ನಡೆಸಿದ ಹಲವು ಶಿಬಿರ,ಅದರಿಂದ ನಾಗರಿಕರಿಗಾದ ಪ್ರಯೋಜನಗಳು ವಿವರಿಸಿದರು. ಮಣಿಪಾಲ ಕೆ.ಯಂ. ಸಿ.ಯ ನೇತ್ರ ತಜ್ಞೆ ಡಾ.ಶೈಲಜಾ, ಮಂಗಳೂರಿನ ಡಾ. ನಾರಾಯಣ ಮಧೂರು. ಡಾ.ರಾಜಾರಾಮ ದೇವಕಾನ, ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ಅಧ್ಯಕ್ಷರಾದ ಶ್ರೀ ವಾಸುದೇವ ಕಾರಂತ ಉಪಸ್ಥತರಿದ್ದರು.


ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ವತಿಯಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ ಬೃಹತ್ ಮೊತ್ತದ ಪಾತ್ರೆ ಸಾಮಗ್ರಿಗಳನ್ನು ಬಳಗದ ಸದಸ್ಯರು ಜತೆ ಗೂಡಿ ಡಾ.ಬಿ.ಯಸ್. ರಾವ್ ಮುಖಾಂತರ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಗೆ ಹಸ್ತಾಂತರಿಸಿದರು. ರಾಮಕೃಷ್ಣ ಮಯ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀ ಜಗದೀಶ ಕೆ.ಕೂಡ್ಲು ಇವರು ನಿರೂಪಿಸಿ, ಶ್ರೀ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ವಂದಿಸಿದರು. ಆ ಬಳಿಕ ಪ್ರಸಿದ್ದ ವೈದ್ಯರುಗಳಿಂದ 335 ಕ್ಕೂ ಹೆಚ್ಚು ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಉಚಿತ ಕನ್ನಡಕ ಹಾಗು ಔಷದಗಳನ್ನು ನೀಡಲಾಯಿತು.

ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!

ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!

ಹೌದು. ಹಾಗಾದರೆ ಪ್ರಾಣದ ಮರ್ಮವನು ಅರಿತು ನಾವು ಹೋರಾಟ ನಡೆಸೋಣ ಎಂದು ರಾವಣ ಜಟಾಯುವಿನಲ್ಲಿ ಹೇಳಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು.

ಆದರೆ ನಿಜವಾದ ಕಾರಣ ಏನು? ರಾವಣ ಜಟಾಯುವಿನಲ್ಲಿ ಯಾಕೆ ಆ ರೀತಿ ಹೇಳಿದ. ವಾಸ್ತವವಾಗಿ ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇರುತ್ತದೆ ಎಂದು ರಾವಣ ತಿಳಿಯದವನೇ? ಖಂಡಿತಾ ಅಲ್ಲ. ಹಾಗೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಅಲ್ಲ.

ನಿಜವಾಗಿ ನೋಡಿದರೆ ರಾವಣ ಮಹಾಜ್ಞಾನಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಶಾಸ್ತ್ರ ಪಾರಂಗತನಾದ ರಾವಣನಿಗೆ ಜಟಾಯುವಿನಲ್ಲಿ ಸುಳ್ಳು ಹೇಳುವ ಅಥವಾ ಹಕ್ಕಿಗಳ ಪ್ರಾಣ ಇರುವುದು ರೆಕ್ಕೆಗಳಲ್ಲಿ ಎಂಬುದು ತಿಳಿಯದವನಂತೆ ನಟಿಸುವ ಅಗತ್ಯ ಯಾಕೆ ಬಂತು ಎಂಬುದು ನಿಗೂಢ ಸಂಗತಿಯೇನಲ್ಲ!

ರಾಮಾಯಣದ ಈ ಭಾಗ ಯಕ್ಷಗಾನದ ತಾಳಮದ್ದಳೆಯ ಒಂದು ರಸವತ್ತಾದ ಚರ್ಚೆಯ ಭಾಗ. ಕೆಲವೊಮ್ಮೆ ಜಟಾಯು ಪಾತ್ರಧಾರಿ ರಾವಣವ ಪಾತ್ರಧಾರಿಯೊಡನೆ “ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇದೆ ಎನ್ನುವ ವಿಚಾರ ತಿಳಿಯದಷ್ಟು ಹೆಡ್ಡ ನೀನು” ಎಂದು ಕೆಣಕುತ್ತಾರೆ.

ಅದಕ್ಕೆ ರಾವಣ ಪಾತ್ರಧಾರಿ “ನೀನು ಎಲ್ಲ ಹಕ್ಕಿಯಂತಲ್ಲ, ನಿನ್ನಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ ಇರುವುದರಿಂದಲೇ ನಿನ್ನ ಪ್ರಾಣದ ಮೂಲದ ಬಗ್ಗೆ ಕೇಳಿದೆ” ಎಂದು ತನ್ನನ್ನು (ರಾವಣನನ್ನು) ಸಮರ್ಥಿಸಿಕೊಳ್ಳುತ್ತಾರೆ.

ಆದರೆ ರಾವಣನು ಜಟಾಯುವಿನಲ್ಲಿ ಪ್ರಾಣದ ಮೂಲದ ಬಗ್ಗೆ ಕೇಳಲು ಬೇರೆಯೇ ಆದ ಕಾರಣವಿದೆ. ಆತನಿಗೆ ಜಟಾಯುವಿನ ಪ್ರಾಣ ಇರುವುದು ರೆಕ್ಕೆಯಲ್ಲಿ ಎಂದು ಖಚಿತವಾಗಿ ಗೊತ್ತಿತ್ತು.

ಆದರೂ ಈ ರೀತಿಯ ನಾಟಕ ಯಾಕೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಕೆಲವರಿಗಾದರೂ ಇದರ ಕಾರಣದ ಬಗ್ಗೆ ಅರಿವಿರಬಹುದು. ಆದರೆ ನಿಜವಾದ ಕಾರಣ ಏನು? ಇದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಬರಹ: ಯಕ್ಷಚಿಂತಕ

ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ

ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ (60) ಅವ ದಿನಾಂಕ 01.05.2024)ರಂದು ಆಟ ಮುಗಿಸಿ ಚೌಕಿಯಲ್ಲಿ ಕುಕ್ಕಿತ್ತಾಯ ವೇಷ ಕಳಚುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.

ತಮ್ಮ 18ನೇ ವರ್ಷದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ ಅವರು ಸುದೀರ್ಘ 42 ವರ್ಷ ಧರ್ಮಸ್ಥಳ ಮೇಳದಲ್ಲೇ ಸೇವೆ ಸಲ್ಲಿಸಿದ್ದರು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡುತ್ತಿದ್ದರು. ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ ಗಂಗಾಧರರು ಹಾಸ್ಯದಿಂದ ಹಿಡಿದು ರಾಜನ ವರೆಗೆ ಎಲ್ಲಾ ತರದ ವೇಷವನ್ನು ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. .

ಆಪದ್ಬಾಂಧವ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

ಶ್ರೀ ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಎಷ್ಟು ವೇಷಗಳನ್ನೂ ಮಾಡಬಲ್ಲವರಾಗಿದ್ದರು. ಯಾವ ವೇಷವನ್ನೂ ಮಾಡಬಲ್ಲರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ.

ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸುತ್ತಿದ್ದರು. ಇಂತಹ ಕಲಾವಿದರು ಸಿದ್ಧರಾಗುವುದು ಬಹಳ ಅಪರೂಪ. ಮೇಳಕ್ಕೆ ಇವರಂತಹ ಕಲಾವಿದರು ಅನಿವಾರ್ಯ, ಹಿರಿಯ ಕಲಾವಿದನಾದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಸಂಗದ ಸಣ್ಣಪುಟ್ಟ ಪಾತ್ರ ಗಳನ್ನು ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಗಂಗಾಧರರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 40ಕ್ಕೂ ಹೆಚ್ಚಿನ ವರ್ಷಗಳಿಂದ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದ ಹಿರಿಮೆಗೆ ಪಾತ್ರರಾದವರು ಶ್ರೀ ಗಂಗಾಧರರು.

1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ ಅಪ್ಪಟ ಯಕ್ಷಗಾನಾಭಿಮಾನಿ.

ಯಕ್ಷಗಾನ ಕಲೆಯ ಬಗೆಗೆ ಇವರಿಗಿರುವ ಆಸಕ್ತಿಯನ್ನು ಗಮನಿಸಿದವರು ಖ್ಯಾತ ಕಲಾವಿದ ಕುಂಬಳೆ ಶ್ರೀಧರ ರಾಯರು. ಬಾಲಕ ಗಂಗಾಧರನನ್ನು ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಕರೆದೊಯ್ದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಗಂಗಾಧರ ಅವರು ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.

ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾಗಿ ಪೂರ್ವರಂಗದಲ್ಲಿ ಬಾಲಗೋಪಾಲನಾಗಿ, ಮುಖ್ಯ ಸ್ತ್ರೀವೇಷಧಾರಿಯೂ, ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಬಂದವರು ಪುತ್ತೂರು ಗಂಗಾಧರ ಜೋಗಿಯವರು.

ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮಾಲತಿ ಪಾತ್ರ (ಕುಂಬಳೆ ಸುಂದರ ರಾಯರು ಮತ್ತು ಕೆ. ಗೋವಿಂದ ಭಟ್ಟರು ನಿರ್ವಹಿಸಿದ ಗೋವಿಂದ ದೀಕ್ಷಿತನ ಪಾತ್ರದ ಜತೆ) ಅಲ್ಲದೆ ಅನೇಕ ಸ್ತ್ರೀಪಾತ್ರಗಳಲ್ಲಿ ಇವರು ಮಿಂಚಿದರು. ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿದ ಇವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಕರಗತ ವಾಗಿತ್ತು. ಆಡು ಮುಟ್ಟದ ಸೊಪ್ಪಿಲ್ಲ ಗಂಗಾಧರ ಅವರು ಮಾಡದ ಪಾತ್ರಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು.

ಕಡತೋಕಾ ಮಂಜುನಾಥ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳರು, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್ಟರು, ಕುಂಬಳೆ ಶ್ರೀಧರ ರಾಯರು, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರು, ಉಬರಡ್ಕ ಉಮೇಶ ಶೆಟ್ಟಿ, ತಾರಾನಾಥ ಬಲ್ಯಾಯ, ವಸಂತ ಗೌಡರಂತಹ ಕಲಾವಿದರು ಮಾರ್ಗದರ್ಶನ ನೀಡಿದರು. ಎಂದು ಹೇಳುತ್ತಿದ್ದ ಗಂಗಾಧರ ಜೋಗಿಯವರು ಕಿರಿಯ ಕಲಾವಿದರ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹವನ್ನೂ ಮರೆಯದೆ ನೆನಪಿಸುತ್ತಿದ್ದವರು.

ದೆಹಲಿ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುದಾಭಿ ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 25 ವರ್ಷಗಳಿಂದ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಅವರು ಭಾಗವಹಿಸಿರುತ್ತಾರೆ.

ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಇವರನ್ನು ಡಾ| ವೀರೇಂದ್ರ ಹೆಗಡೆಯವರು ಸನ್ಮಾನಿಸಿದ್ದಾರೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಗಂಗಾಧರ ಅವರು ಗೌರವಿಸಲ್ಪಟ್ಟಿದ್ದಾರೆ.

ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಯಕ್ಷಾಭಿಮಾನಿಗಳೆಲ್ಲರ ಪ್ರಾರ್ಥನೆ.

ಮಾಹಿತಿ; ರವಿಶಂಕರ್ ವಳಕ್ಕುಂಜ

T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ

ಜೂನ್ 1 ರಿಂದ ಪ್ರಾರಂಭವಾಗುವ. T20 ವಿಶ್ವಕಪ್ 2024: ಟೂರ್ನಮೆಂಟ್‌ಗೆ ರೋಹಿತ್ ಶರ್ಮಾ ಅವರು ನಾಯಕ ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುತ್ತಾರೆ.

ರೋಹಿತ್ ಶರ್ಮಾ 15 ಜನರ T20 ವಿಶ್ವಕಪ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಹಾರ್ದಿಕ್ ಪಾಂಡ್ಯ ಅದರ ಉಪನಾಯಕರಾಗಿರುತ್ತಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (BCCI) ಮಂಗಳವಾರ, ಏಪ್ರಿಲ್ 30 ರಂದು ಹೇಳಿಕೆಯಲ್ಲಿ ತಿಳಿಸಿದೆ.

ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಅದ್ಭುತ IPL ಯಶಸ್ಸಿಗೆ ಆಯ್ಕೆಯ ಬಹುಮಾನ ನೀಡಲಾಗಿದೆ. ಆದರೆ ತಂಡದಲ್ಲಿ ಕೆ.ಎಲ್ ರಾಹುಲ್ ಗೆ ಸ್ಥಾನ ನೀಡಲಾಗಿಲ್ಲ.

ನಿರೀಕ್ಷೆಯಂತೆ ವಿರಾಟ್ ಕೊಹ್ಲಿ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ 15 ಜನರ ತಂಡವನ್ನು ಆಯ್ಕೆ ಮಾಡಲಾಯಿತು. ಐಪಿಎಲ್‌ನಲ್ಲಿ ಸ್ಪರ್ಧಾತ್ಮಕ ಕ್ರಮಕ್ಕೆ ವೀರೋಚಿತ ಹಿಂದಿರುಗಿದ ನಂತರ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರನ್ನು T20I ತಂಡದಲ್ಲಿ ಸೇರಿಸಲಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ಸಿ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್. ರಿಷಬ್ ಪಂತ್ (wk), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ (vc), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್. ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು: ಶುಭಮನ್ ಗಿಲ್, ರಿಮ್ಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್

ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನವನ್ನು ಪ್ರಾರಂಭಿಸುತ್ತದೆ. ನಂತರ ಅವರು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತದೆ.

ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಬಡಗು ತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಇವರು,ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆ ಗೈದಿದ್ದರು.

ತಮ್ಮ ಸುಮಧುರ ಕಂಠ,ಪರಂಪರೆಯ ಶೈಲಿ,ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ‌ ಅವರಿಗೆ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ ನೀಡಿ ಗೌರವಿಸಿತ್ತು.

ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.ಇಂದು ಸಂಜೆ ಕಿರಿಮಂಜೇಶ್ವರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ

ಯು. ಶ್ರೀಧರ್ ಅವರು ಬರೆದ ‘ಉಡುಪಿ ಪರ್ಯಾಯವೂ, ಮಟ್ಟಿ (ವಾದಿರಾಜ) ಗುಳ್ಳವೂ ಮತ್ತು ಇತರ ಆಯ್ದ ಲೇಖನಗಳು’ ಪುಸ್ತಕ ಎಪ್ರಿಲ್ 21ರಂದು ಲೋಕಾರ್ಪಣೆ ಗೊಂಡಿತು.

ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಕೃತಿ ಬಿಡುಗಡೆ ಮಾಡಿ ಯು. ಶ್ರೀಧರರು ಇಳಿ ವಯಸ್ಸಿನಲ್ಲೂ ಮಾಡುತ್ತಿರುವ ಸಾಹಿತ್ಯ ಮತ್ತು ಸಾಮಾಜಿಕ ಕೆಲಸಗಳನ್ನು ಮೆಚ್ಚಿಕೊಂಡರು. 

ವರ್ಷದ ಹಿಂದೆ ಗತಿಸಿದ ತಮ್ಮ ಪತ್ನಿ ಸುಗುಣಾಳ ನೆನಪಿಗೆ ಈ ಕೃತಿಯನ್ನು ಸಮರ್ಪಿಸಿದ ಲೇಖಕರು ಮಾರಾಟದಿಂದ ಬಂದ ಹಣವನ್ನು ವಿದ್ಯಾಪೋಷಕ್ ಗೆ ನೀಡುವುದಾಗಿ ಹೇಳಿದರು.

ಇದು ಈ ಲೇಖಕರ ಹತ್ತನೆಯ ಕೃತಿಯಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಯು. ಹರಿಶ್ಚಂದ್ರ, ರವಿ .ಎಂ ಅಮೀನ್, ನಾರಾಯಣ ಎಂ. ಹೆಗಡೆ, ಡಾ. ವಿರೂಪಾಕ್ಷ ದೇವರುಮನೆ, ಎಚ್. ಎನ್. ವೆಂಕಟೇಶ್  ಉಪಸ್ಥಿತರಿದ್ದರು.

ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ

ಕೊಂಡದಕುಳಿ ಅವರಿಗೆ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿ ಪ್ರದಾನ.

ಇಂದು (23.04.2024) ಪಲಿಮಾರಿನಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಪಲಿಮಾರು ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯ ಶ್ರೀಪಾದರ ಹೆಸರಿನಲ್ಲಿ ಪ್ರತೀವರ್ಷ ಕೊಡಮಾಡುವ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿಯನ್ನು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಪ್ರದಾನ ಮಾಡಿದರು.

ಈ ಪ್ರಶಸ್ತಿನ 50,000/- ನಗದು ಪುರಸ್ಕಾರಗಳನ್ನೊಳಗೊಂಡಿದೆ. ಶ್ರೀ ಕಾಣ ಯೂರು, ಶ್ರೀ ಸೋದೆ, ಶ್ರೀ ಭೀಮನಕಟ್ಟೆ ಹಾಗೂ ಪಲಿಮಾರು ಕಿರಿಯ ಶ್ರೀಪಾದಂಗಳವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಶ್ರೀಗಳು ಎರಡು ದಶಕಗಳ ಹಿಂದೆ ಕೊಂಡದಕುಳಿಯವರು ನಿರ್ವಹಿಸಿದ ಹನುಮಂತನ ಪಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಇಂತಹ ಶ್ರೇಷ್ಠ ಕಲಾವಿದ ಇನ್ನಷ್ಟು ಸಮಯ ರಂಗದಲ್ಲಿ ಪಾತ್ರನಿರ್ವಹಿಸುವಂತಾಗಲಿ ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಪ್ರಶಸ್ತಿ ಸ್ವೀಕರಿಸಿದ ಕೊಂಡದಕುಳಿಯವರು ಈ ದಿನ ನನ್ನ ಪಾಲಿಗೆ ಸಂತಸದ ಕ್ಷಣ, ಕಲಾವಿದನಾದವನು ಅಧ್ಯಯನಶೀಲನಾಗಿರಬೇಕು. ಕಲಾವಿದರು ತಪಸ್ವಿಗಳು ಎಂದು ಪೇಜಾವರ ವಿಶ್ವೇಶ ತೀರ್ಥರು ಹೇಳಿದ ಮಾತನ್ನು ನೆನಪಿಸಿಕೊಂಡರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕೊಂಡದಕುಳಿಯವರ ಪತ್ನಿ ಚೇತನಾ ಹೆಗಡೆ, ಯಕ್ಷಗಾನ ಕಲಾರಂಗದ ಅದ್ಯಕ್ಷ ಎಂ. ಗಂಗಾಧರ ರಾವ್, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು

ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿ: ಪ್ರಶ್ನಿಸಿದ ಮಹಿಳಾ ಟಿಟಿಇ ಮೇಲೆ ಹಲ್ಲೆ – ವ್ಯಕ್ತಿಯ ಬಂಧನ

ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಿದ್ದನ್ನು ಪ್ರಶ್ನಿಸಿದ ಮಹಿಳಾ ಟಿಟಿಇ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.

ತಿರುವನಂತಪುರಂನಿಂದ ಚೆನ್ನೈಗೆ ಹೊರಟಿದ್ದ ಚೆನ್ನೈ ಮೇಲ್ ಕೊಲ್ಲಂ ನಿಲ್ದಾಣವನ್ನು ದಾಟಿದಾಗ ಈ ಘಟನೆ ನಡೆದಿದೆ. ಆರೋಪಿಗಳು ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಯಾರೋ ದೂರು ನೀಡಿದ್ದರಿಂದ ಟಿಟಿಇ ಬಂದು ವಿಚಾರಿಸಿದಾಗ ಹಲ್ಲೆ ನಡೆದಿದೆ.

ಕಂಪಾರ್ಟ್‌ಮೆಂಟ್‌ನಿಂದ ಹೊರಬರಲು ಕೇಳಿದರೂ ಒಪ್ಪದ ಪ್ರಯಾಣಿಕರು ಟಿಟಿಇ ಜತೆ ಮಾತಿನ ಚಕಮಕಿ ನಡೆಸಿದರು.

ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಟಿಟಿಇ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದರು. ಆರ್‌ಪಿಎಫ್ ಕಾಯಂಕುಲಂಗೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬರ್ತ್ ಡೇ ಕೇಕ್‌ನಲ್ಲಿ ಕೃತಕ ಸಿಹಿಕಾರಕ ಪತ್ತೆ: ಪಂಜಾಬ್ ಹುಡುಗಿಯ ಸಾವಿಗೆ ಕಾರಣವಾದ ಕೇಕ್: ಅಧಿಕೃತ ಮಾಹಿತಿ – ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್

10 ವರ್ಷದ ಪಂಜಾಬ್ ಬಾಲಕಿಯ ಸಾವಿಗೆ ಸಂಬಂಧಿಸಿದ ಕೇಕ್ ಅನ್ನು ಹೆಚ್ಚಿನ ಸಾಂದ್ರತೆಯ ಕೃತಕ ಸಿಹಿಕಾರಕದಿಂದ ಬೇಯಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮಾರ್ಚ್ 24 ರಂದು, ಹುಡುಗಿಯ ಹುಟ್ಟುಹಬ್ಬದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಚಾಕೊಲೇಟ್ ಕೇಕ್ ಅನ್ನು ತಿಂದ ನಂತರ ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು

ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಮತ್ತು ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಲಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ ವಿಜಯ್ ಜಿಂದಾಲ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಸಣ್ಣ ಪ್ರಮಾಣದ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದರೆ ಅದು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗಬಹುದು.

ಸದ್ಯದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.

ವೀಡಿಯೊದಲ್ಲಿ, ಮಾನ್ವಿ ತನ್ನ ಸಾವಿಗೆ ಕೆಲವೇ ಗಂಟೆಗಳ ಮೊದಲು ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಅವಳು ಕೇಕ್ ಕತ್ತರಿಸಿದ ಕೆಲವೇ ಗಂಟೆಗಳ ನಂತರ, ಅವಳ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು.

ಚುನಾವಣೆಗೂ ಮುನ್ನವೇ ಲೋಕಸಭೆಯಲ್ಲಿ ಖಾತೆ ತೆರೆದ ಬಿಜೆಪಿ: ಸೂರತ್ ನಲ್ಲಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ – ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ


ಬಿಜೆಪಿಯ ಸೂರತ್ ಲೋಕಸಭಾ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಈಗ ಕಣದಿಂದ ಹೊರಗುಳಿದಿದ್ದಾರೆ.

ಇದೀಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದೆ. ಗುಜರಾತ್‌ನ ಸೂರತ್ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಗೆದ್ದಿದ್ದಾರೆ ಏಕೆಂದರೆ ಅವರ ಎಲ್ಲಾ ವಿರೋಧಿಗಳು ಈಗ ಕಣದಿಂದ ಹೊರಗುಳಿದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯ ಅರ್ಜಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದರೆ, ಉಳಿದ ಎಂಟು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರು ಚುನಾವಣಾಧಿಕಾರಿಯ ಮುಂದೆ ತಮ್ಮ ಮೂವರು ಪ್ರಸ್ತಾಪಗಳಲ್ಲಿ ಒಬ್ಬರನ್ನು ಸಹ ಹಾಜರುಪಡಿಸಲು ಸಾಧ್ಯವಾಗಲಿಲ್ಲ, ನಂತರ ಅವರ ನಾಮಪತ್ರವನ್ನು ರದ್ದುಗೊಳಿಸಲಾಯಿತು.

ಕುಂಭಣಿ ಅವರ ನಾಮಪತ್ರದಲ್ಲಿ ಮೂವರು ಪ್ರಸ್ತಾವಕರ ಸಹಿಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಬಿಜೆಪಿ ಪ್ರಶ್ನೆ ಎತ್ತಿತ್ತು.

ಸೂರತ್‌ನಿಂದ ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವೂ ಅಸಿಂಧುಗೊಂಡಿದ್ದು, ನಗರದಲ್ಲಿ ಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷವನ್ನು ಹೊರಕ್ಕೆ ತಳ್ಳಿದೆ.

ಚುನಾವಣಾಧಿಕಾರಿ ಸೌರಭ್ ಪಾರ್ಧಿ ಅವರು ತಮ್ಮ ಆದೇಶದಲ್ಲಿ, ಕುಂಭಣಿ ಮತ್ತು ಪಡಸಾಲ ಅವರು ಸಲ್ಲಿಸಿದ ನಾಲ್ಕು ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಏಕೆಂದರೆ ಮೊದಲ ನೋಟದಲ್ಲಿ, ಪ್ರಸ್ತಾಪಿಸಿದವರ ಸಹಿಗಳಲ್ಲಿ ವ್ಯತ್ಯಾಸಗಳು ಕಂಡುಬಂದವು ಮತ್ತು ಅವು ನಿಜವೆಂದು ತೋರಲಿಲ್ಲ.

ಪ್ರಾಸಂಗಿಕವಾಗಿ, ಕುಂಭನಿಯ ಮೂವರು ಪ್ರತಿಪಾದಕರು ಅವನ ಸಂಬಂಧಿಕರಾಗಿದ್ದರು.

ಪ್ರತಿಪಾದಕರ ವಾದದ ನಂತರ ಚುನಾವಣಾಧಿಕಾರಿ ನೀಲೇಶ್ ಕುಂಭಾಣಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ಒಂದು ದಿನದ ಕಾಲಾವಕಾಶ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯು ತನ್ನ ವಕೀಲರೊಂದಿಗೆ ಚುನಾವಣಾಧಿಕಾರಿಯ ಬಳಿಗೆ ಬಂದರು, ಆದರೆ ಅವರ ಮೂವರು ಪ್ರಸ್ತಾಪಗಳಲ್ಲಿ ಯಾರೂ ಬರಲಿಲ್ಲ.

ಆಡಳಿತಾರೂಢ ಬಿಜೆಪಿ ಫೌಲ್ ಪ್ಲೇ ಎಂದು ಆರೋಪಿಸಿದ ಕಾಂಗ್ರೆಸ್, ಸರ್ಕಾರದ ಬೆದರಿಕೆಗೆ ಎಲ್ಲರೂ ಹೆದರುತ್ತಿದ್ದಾರೆ ಎಂದು ಆರೋಪಿಸಿದೆ.

ಪ್ರೀತಿ ನಿರಾಕರಣೆ: ಹುಬ್ಬಳ್ಳಿಯ ಹಿಂದೂ ವಿದ್ಯಾರ್ಥಿನಿಯ ಭೀಕರ ಕೊಲೆ – ಏಳಕ್ಕೂ ಹೆಚ್ಚು ಬಾರಿ ಇರಿದು ಕೊಂದ ಸಹಪಾಠಿ

ಕರ್ನಾಟಕದ ಹುಬ್ಬಳ್ಳಿಯಲ್ಲಿ ಓದುತ್ತಿದ್ದ ಕಾಲೇಜಿನ ಹಳೆ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಏಳು ಬಾರಿ ಇರಿದ ಪರಿಣಾಮ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ಸಾವನ್ನಪ್ಪಿದ್ದಾಳೆ. ಆಕೆಯ ಕೊಲೆಗಾರನನ್ನು ಬಂಧಿಸಲಾಗಿದೆ. ಅವನ ಪ್ರೀತಿಯ ಪ್ರಸ್ತಾಪವನ್ನು ಅವಳು ತಿರಸ್ಕರಿಸಿದ್ದರಿಂದ ಅವನು ಕೊಲೆಯನ್ನು ನಡೆಸಿದ್ದಾನೆಂದು ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿ ಭೂಮರಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಆಕೆಗೆ ಕೊಲೆಗಾರ ಫಯಾಜ್‌ನ ಪರಿಚಯವಿತ್ತು. ಅವನು ಕಾಲೇಜಿನಲ್ಲಿ ಅವಳ‌ ಸಹಪಾಠಿಯಾಗಿದ್ದ, ಆದರೆ ನಂತರ ಕಾಲೇಜು ಬಿಟ್ಟಿದ್ದ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನೇಹಾ ಕ್ಯಾಂಪಸ್‌ನೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಫಯಾಜ್ ಎದುರಾದ. ಸಿಸಿಟಿವಿ ದೃಶ್ಯಾವಳಿಗಳು ಫಯಾಜ್ ಆಕೆಯ ಮೇಲೆ ದಾಳಿ ಮಾಡುವ ಮೊದಲು ಅವರ ನಡುವೆ ವಾಗ್ವಾದ ನಡೆದಿರುವುದನ್ನು ತೋರಿಸುತ್ತದೆ. ಮೊದಲ ಬಾರಿಗೆ ಇರಿದ ನಂತರ ನೇಹಾ ನೆಲಕ್ಕೆ ಬೀಳುತ್ತಾಳೆ ಮತ್ತು ಫಯಾಜ್ ಅವಳಿಗೆ ಕನಿಷ್ಠ ಆರು ಬಾರಿ ಚಾಕುವಿನಿಂದ ಇರಿಯುತ್ತಾನೆ.

ಕೆಲವು ವಿದ್ಯಾರ್ಥಿಗಳು ಆತನನ್ನು ಹಿಂಬಾಲಿಸಿದಾಗ ಫಯಾಜ್ ಅಲ್ಲಿಂದ ಓಡುತ್ತಾನೆ.

ಕೂಡಲೇ ನೇಹಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ಆರೋಪಿ ಪರಾರಿಯಾಗಿದ್ದ, ಆದರೆ ನಾವು ಅವನನ್ನು 90 ನಿಮಿಷಗಳಲ್ಲಿ ಬಂಧಿಸಿದ್ದೇವೆ. ನೇಹಾ ಮತ್ತು ಆರೋಪಿಗಳು ಒಬ್ಬರಿಗೊಬ್ಬರು ತಿಳಿದಿದ್ದರು ಮತ್ತು ಒಟ್ಟಿಗೆ ಓದುತ್ತಿದ್ದರು ಎಂದು ಇತರ ವಿದ್ಯಾರ್ಥಿಗಳು ನಮಗೆ ತಿಳಿಸಿದ್ದಾರೆ. ಆರೋಪಿಯ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ,” ಎಂದು ಅವರು ಹೇಳಿದರು.

ಕಿಕ್ಕಿರಿದು ತುಂಬಿದ ಬಸ್ ಗೆ ಕೇವಲ ಒಳ ಉಡುಪಿನಲ್ಲಿ ಹತ್ತಿದ ಯುವತಿ – ಜನರ ಆಕ್ರೋಶ – ವೀಡಿಯೋ ನೋಡಿ


ದೆಹಲಿಯಲ್ಲಿ ಕಿಕ್ಕಿರಿದ ಬಸ್‌ನಲ್ಲಿ ಮಹಿಳೆಯೊಬ್ಬರು ಒಳ ಉಡುಪು ಧರಿಸಿ ಪ್ರಯಾಣಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಳಉಡುಪು ಧರಿಸಿದ್ದ ಮಹಿಳೆಯೊಬ್ಬರು ಕಿಕ್ಕಿರಿದು ತುಂಬಿದ್ದ ವಾಹನವನ್ನು ಹತ್ತಿದ ಕಾರಣ ದೆಹಲಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆಘಾತಕ್ಕೊಳಗಾಗಿದ್ದಾರೆ. ಈ ದೃಶ್ಯಾವಳಿಯ 12 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ಒಳ ಉಡುಪು ಧರಿಸಿದ್ದ ಮಹಿಳೆ ಬಸ್ ಹತ್ತಿದಳು ಮತ್ತು ಬಾಗಿಲಿನ ಬಳಿ ನಿಂತಿರುವುದು ಕಂಡುಬಂದಿದೆ. ಆಕೆಯ ಉಪಸ್ಥಿತಿಯಿಂದ ಕೆರಳಿದ, ಆಕೆಯ ಬಳಿ ನಿಂತಿದ್ದ ಇನ್ನೊಬ್ಬ ಮಹಿಳಾ ಪ್ರಯಾಣಿಕರು ಅಲ್ಲಿಂದ ಹೊರಟುಹೋದರು.

ತರುವಾಯ, ಒಬ್ಬ ಪ್ರಯಾಣಿಕನು ಸಹ ತನ್ನ ಸೀಟನ್ನು ಬಿಟ್ಟು ಮಹಿಳೆಯ ಕಡೆಗೆ ಅಶ್ಲೀಲ ಸನ್ನೆ ಮಾಡಿದ ನಂತರ ಅಲ್ಲಿಂದ ದೂರ ಹೋದನು.

X (ಹಿಂದೆ ಟ್ವಿಟ್ಟರ್) ನಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಿಳೆಯ ಅನುಚಿತ ವರ್ತನೆಗಾಗಿ ಆಕ್ರೋಶ ವ್ಯಕ್ತಪಡಿಸಿದರು. “ವೀಡಿಯೊ ರೆಕಾರ್ಡ್ ಮಾಡುವ ಬದಲು, ಪ್ರಯಾಣಿಕರು ಆಕೆಯನ್ನು ಬಸ್ಸಿನಿಂದ ಹೊರಹಾಕಬೇಕಿತ್ತು” ಎಂದು ಬಳಕೆದಾರರು ಹೇಳಿದ್ದಾರೆ.

ಇನ್ನೂ ಹಲವರು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.