ಗಾಯನ ಲೋಕದ ದೊರೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮಿ ಅವರು ಅಭಿನಯಿಸಿದ್ದ ಜನಪ್ರಿಯ ತೆಲುಗು ಚಿತ್ರ ‘ಮಿಥುನಂ’ ಕನ್ನಡಕ್ಕೆ ಶೀಘ್ರದಲ್ಲೇ ಡಬ್ ಆಗಲಿದೆ.

ತೆಲುಗು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದ ಸಿನಿಮಾ ಈಗಲೂ ಆಂಧ್ರದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮನೆಮಾತಾಗಿತ್ತು. ವಯಸ್ಸಾದ ದಂಪತಿಗಳ ನಡುವಿನ ವಾತ್ಸಲ್ಯಭರಿತ ಪ್ರೇಮಕಥೆ ಇದಾಗಿದ್ದು ಎಸ್.ಪಿ.ಬಿ ಮತ್ತು ಲಕ್ಷ್ಮಿ ಅದ್ಭುತವಾಗಿ, ಲವಲವಿಕೆ ಹಾಗೂ ಮುಗ್ಧತೆಯಿಂದ ನಟಿಸಿದ್ದಾರೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES


2012ರಲ್ಲಿ ಈ ತೆಲುಗು ಚಿತ್ರ ತೆರೆಕಂಡು ಯಶಸ್ವಿ ಚಿತ್ರವಾಗಿ ಗುರುತಿಸಲ್ಪಟ್ಟಿತ್ತು. ಶ್ರೀರಮಣ ಅವರ ತೆಲುಗು ಕಾದಂಬರಿ ‘ಮಿಥುನಂ’ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು.

‘ಮಿಥುನಂ’ ಸಿನಿಮಾಕ್ಕೆ ನಾಲ್ಕು ರಾಜ್ಯಪ್ರಶಸ್ತಿಗಳೂ ದೊರಕಿತ್ತು. ಈ ಸಿನಿಮಾದ ಸುಂದರವಾದ ಹಾಡಿನ ವೀಡೀಯೋ ಲಿಂಕ್ ಕೆಳಗಡೆ ಇದೆ.