ಯಕ್ಷಗಾನದ ಶ್ರೇಷ್ಠ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ನವತ್ಯಬ್ದ ಸಮಾರಂಭ ಅಕ್ಟೋಬರ್ 14, 2021ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊಂಡಿದ್ದು ಸಮಾಪನ ಸಮಾರಂಭವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ನವೆಂಬರ್ 14, 2021 ಭಾನುವಾರದಂದು ಸಂಪನ್ನಗೊಳ್ಳಲಿದೆ.

ಅಂದು ಪೂರ್ವಾಹ್ನ 9 ಗಂಟೆಗೆ ಐಶ್ವರ್ಯಾ ಮಣಿಕರ್ಣಿಕಾ ಇವರಿಂದ ವೀಣಾವಾದನ. ಬೆಳಗ್ಗೆ 10 ಗಂಟೆಗೆ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ. ಅಭ್ಯಾಗತರಾಗಿ ಪೆರವೋಡಿ ನಾರಾಯಣ ಹಾಸ್ಯಗಾರ, ಡಾ. ಪಿ. ಎಸ್. ಎಡಪಡಿತ್ತಾಯ, ಡಾ. ಎಚ್. ಎಸ್. ಬಲ್ಲಾಳ್ ಪಾಲ್ಗೊಳ್ಳಲಿರುವರು.
11 ಗಂಟೆಗೆ ಆಚಾರ್ಯ ಡಾ. ಪಪ್ಪು ವೇಣುಗೋಪಾಲ ರಾವ್ ಅವರಿಂದ ವಿದ್ವತ್ ಗೋಷ್ಠಿ. 12ಗಂಟೆಗೆ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸೂರ್ಯನಾರಾಯಣ ಭಟ್ ಪಿ. ಎಸ್., ಭೋಜರಾಜ ವಾಮಂಜೂರು, ಕೃಷ್ಣಪ್ರಕಾಶ ಉಳಿತ್ತಾಯ, ಶಶಿಕಾಂತ ಶೆಟ್ಟಿ, ಅಮ್ಮುಂಜೆ ಮೋಹನ ಕುಮಾರ್ ಮತ್ತು ಪಟ್ಲ ಸತೀಶ್ ಶೆಟ್ಟಿ ಇವರಿಂದ ಕೋಳ್ಯೂರರಿಗೆ ನುಡಿ ಗೌರವ.
ಕೋಳ್ಯೂರು ರಾಮಚಂದ್ರ ರಾಯರ ಅಭಿನಯದ ಯೂಟ್ಯೂಬ್ ವೀಡಿಯೊ ಡ್ರೀಮ್ಸ್ ಮಂಗಳೂರು ಅವರ ಯೂಟ್ಯೂಬ್ ಚಾನೆಲಿನಲ್ಲಿ ನೋಡಿ
ಅಪರಾಹ್ನ 2 ಗಂಟೆಗೆ ರಾಜೇಂದ್ರ ಕಾರಂತ ಹಾಗೂ ಮಂಜುಳಾ ಸುಬ್ರಹ್ಮಣ್ಯ ಇವರಿಂದ ಆತ್ಮಕಥನ ವಾಚನ. 2.30 ರಿಂದ ಉಭಯ ತಿಟ್ಟುಗಳ 90 ಕ್ಕೂ ಮೇಲ್ಪಟ್ಟು ಸ್ತ್ರೀ ವೇಷಧಾರಿಗಳಿಗೆ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ಸಂಮಾನ. ಅಪರಾಹ್ನ 4 ಗಂಟೆಗೆ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರಿಗೆ ಅಭಿನಂದನೆ.
ಡಾ. ಪದ್ಮಾ ಸುಬ್ರಹ್ಮಣ್ಯಮ್ ಮತ್ತು ಡಾ. ಕಲಾಮಂಡಲಂ ಗೋಪಿ ಇವರು ಆನ್‌ಲೈನ್ ನಲ್ಲಿ ಶುಭಾಶಂಸನೆ ಗೈಯ್ಯಲಿರುವರು. ಎ. ಪಿ. ಮಾಲತಿ, ಅರುವ ಕೊರಗಪ್ಪ ಶೆಟ್ಟಿ, ಮಂಟಪ ಪ್ರಭಾಕರ ಉಪಾಧ್ಯ, ಲಕ್ಷ್ಮೀಶ ತೋಳ್ಪಾಡಿಯವರು ಅಭಿನಂದನಾ ಮಾತುಗಳನ್ನಾಡಲಿರುವರು. ಸಂಜೆ 6.30 ರಿಂದ ಕೇರಳದ ಕಲಾಮಂಡಲಮ್ ತಂಡದಿಂದ ಕಥಕಳಿ ಕಲಾ ಪ್ರದರ್ಶನ ಗೌರವ ಆಖ್ಯಾನ : ಕೃಷ್ಣ ಕುಚೇಲ ವೃತ್ತಮ್.
ಈ ಎಲ್ಲಾ ಕಾರ್ಯಕ್ರಮಗಳಿಗೆ, ಕಲಾಸಕ್ತರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಳ್ಯೂರು ಕುಟುಂಬದ ಪರವಾಗಿ ಅವರ ಪುತ್ರ ಕೆ. ಶ್ರೀಧರ ರಾವ್ ಆದರದ ಸ್ವಾಗತ ಕೋರಿದ್ದಾರೆ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

