Friday, November 22, 2024
Homeವ್ಯಕ್ತಿ ವಿಶೇಷಮಹನೀಯರ ಮಹಾ ನುಡಿ - ಭಾಗ 1 (ಶೇಣಿ ಗೋಪಾಲಕೃಷ್ಣ ಭಟ್)

ಮಹನೀಯರ ಮಹಾ ನುಡಿ – ಭಾಗ 1 (ಶೇಣಿ ಗೋಪಾಲಕೃಷ್ಣ ಭಟ್)

(ಶ್ರೀ ಶೇಣಿ ಗೋಪಾಲಕೃಷ್ಣ ಭಟ್ – ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ “ಸುಧಾ ಕಲಶ” ದಲ್ಲಿ- 1988)


“ದೇವ, ದಾನವ ಮಾನವಾದಿ ವೇಷ ವಿಧಾನಗಳಲ್ಲಿ ಯಕ್ಷಗಾನಿಗಳು ಅನುಸರಿಸಿ ಬಂದ ರೀತಿ ಅದ್ಭುತ ರಮ್ಯವಾದುದು. ಪ್ರಪಂಚದ ಯಾವ ಕಲಾವಿದನಿಗೂ ಹೊಳೆಯದ ವರ್ಣ ವಿಭಜನೆ, ವೇಷ ಭೂಷಣಗಳ ಕಲ್ಪನೆ ಇಲ್ಲಿದೆ. ಇದನ್ನು ಮರೆತು ಗಣಪತಿಯ ಕಲ್ಪನೆಯಲ್ಲಿ ಕಪಿಯನ್ನು ಸೃಷ್ಟಿಸುವ ಸಾಹಸವು ಅಸಹನೀಯವೂ ಅಸಹ್ಯವೂ ಆಗಬಹುದು. ಸುಧಾರಣೆಯೆಂದರೆ ಬುಡವನ್ನು ಕತ್ತರಿಸದೆ, ಅಗತ್ಯವಿಲ್ಲದ ಶಾಖೆಯನ್ನು ಮಾತ್ರ ಕತ್ತರಿಸುವುದೆಂಬ ಕರ್ಷಕ ಬುದ್ಧಿಯಿದ್ದರೆ ಮಾತ್ರ ಕಲೆಯನ್ನು ಆಕರ್ಷಕವಾಗಿ ಉಳಿಸಿ ಬೆಳೆಸಬಹುದೆಂದು ಕಲಾವಿದರೂ ಕಲಾಭಿಮಾನಿಗಳೂ ನಂಬಿಕೆಯುಳ್ಳವರಾಗಬೇಕು. ನಾಟ್ಯಾಭಿನಯಾದಿ ಚಲನೆಗಳಲ್ಲಿ ಪಾತ್ರಾಭಿವ್ಯಕ್ತಿಯೇ ಮುಖ್ಯವಾಗಿರಬೇಕಲ್ಲದೆ, ಪದಾಭಿನಯವೋ, ಪದ್ಯಾಭಿನಯವೋ ಪ್ರಧಾನವಲ್ಲ. ಪಾತ್ರಾಭಿನಯವೇ ಸ್ಥಾಯಿಯಲ್ಲದೆ ಸಂಚಾರೀಭಾವಗಳಲ್ಲಿ – ಮುಖ್ಯಾಂಶಕ್ಕೆ ಧಕ್ಕೆಯಾಗುವ ಯಾವ ಅಂಶಗಳನ್ನೂ ಗಮನಿಸಬಾರದು. ರಾವಣನ ರೋಷಾವೇಷಕ್ಕೂ ರಾಮನದಕ್ಕೂ ಏಕತಾನತೆ ಸಲ್ಲದು. ಎಲ್ಲಾ ಪಾತ್ರಗಳಿಗೂ ಈ ನಿರ್ಣಯವು ಬಾಧಕವಾಗಿರಬೇಕು. ಯಕ್ಷಗಾನ ನಾಟ್ಯವನ್ನು ಬಲ್ಲವರಿಗೆ ಇದು ಅರ್ಥವಾಗುವ ವಿಷಯವಾಗಿದೆ. ಈ ಸಾಮರಸ್ಯದಿಂದಲೇ ಯಕ್ಷಗಾನವು ತನ್ನತನವನ್ನು ಉಳಿಸಿಕೊಂಡು ಸಂತುಷ್ಟವಾಗಿದೆ. ಹಾಗಾಗಿ ಈ ಕಲೆಗೆ ಈ ಕಲೆಯೇ ಉಪಮೆಯಾಗಿದೆ”.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments