ಕರಾವಳಿಯ ಬಡಗುತಿಟ್ಟಿನಲ್ಲಿ ಯಕ್ಷಗಾನ ಕೇವಲ ಗಂಡುಕಲೆಯೆಂಬತ್ತಿದ್ದ ಅಂದಿನ ಕಾಲದಲ್ಲಿ “ಅಕ್ಕಣಿಯಮ್ಮ”ರವರು ಬೆಂಗಳೂರಿನಲ್ಲಿ 1980 ರಲ್ಲಿ ಯಕ್ಷಗಾನ ಇತಿಹಾಸದಲ್ಲೇ “ಮೊದಲ ಮಹಿಳಾ ಯಕ್ಷಗಾನ” ತಂಡವನ್ನು ಕಟ್ಟಿದವರು ಮತ್ತು ಮಹಿಳಾ ಯಕ್ಷಗಾನವನ್ನು ಆಯೋಜಿಸಿದವರು, ಅಕ್ಕಣಿಯಮ್ಮನವರು ಕಾರ್ಕಡದ ಹೆಸರಾಂತ ನಾಗ ಪಾತ್ರಿಗಳಾಗಿದ್ದ “ಬೋಳಪ್ಪಯ್ಯ”ರ ಪಕ್ಕದ ಮನೆಯ ಅದ್ಯಾಪಕರಾಗಿದ್ದ ನಾಗಪ್ಪ ಉಪಾಧ್ಯರ ಮಗಳಾಗಿದ್ದು, ಕೋಟ ನರಸಿಂಹ ಉರಾಳರೊಂದಿಗೆ ಮದುವೆಯಾಗಿದ್ದರು, ನಂತರ ಬಹಳ ಎಳೆವೆಯಲ್ಲೇ ಪತಿಯನ್ನು ಕಳೆದುಕೊಂಡು ತಂದೆಯ ಮನೆಯಲ್ಲಿದ್ದು ಅಲ್ಲಿಂದ ಬೆಂಗಳೂರಿಗೆ ವಲಸೆ ಬಂದವರು.
ಯಕ್ಷಗಾನದಲ್ಲಿ ಅಂದಿನ ಮೇರು ಕಲಾವಿದರಾದ ಹಾರಾಡಿ ರಾಮ ಗಾಣಿಗ, ಹಾರಾಡಿ ಕೃಷ್ಣ ಗಾಣಿಗ ,ಚಿಟ್ಟಾಣಿಯವರ ಅಭಿಮಾನಿಯಾಗಿದ್ದು, ಚಿಕ್ಕಂದಿನಿಂದಲೇ ವಿಪರೀತ ಆಸಕ್ತಿ ಇದ್ದುದರಿಂದ ಯಕ್ಷಗಾನದಲ್ಲಿ ಏನಾದರೂ ಹೊಸತನ ಸಾಧಿಸಬೇಕೆಂಬ ಅಭಿಲಾಷೆ ಹೊಂದಿದ್ದರು, ಅಂದಿನ ಕಾಲದಲ್ಲಿ ಯಕ್ಷಗಾನವೆಂದರೆ ಅದು ಕೇವಲ ಗಂಡುಕಲೆ ಎಂಬಂತಿದ್ದ ಸಾಮಾಜಿಕ ಜೀವನದಲ್ಲಿ ಅದರಲ್ಲೂ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದನ ಹೆಣ್ಣು ಮಕ್ಕಳು ರಂಗಸ್ಥಳದಲ್ಲಿ ಕುಣಿಯುವುದೆಂದರೆ ಏನೋ ಒಂದು ಅಪವಾದವೆಂಬಂತೆ ಕಾಣುತಿದ್ದ ಅಂದಿನ ಕಾಲಘಟ್ಟದಲ್ಲಿ, ಬೆಂಗಳೂರಿನಲ್ಲಿ 1979ರಲ್ಲಿ ಕಪಿಲಾ ಥಿಯೇಟರ್ ನ ಎದುರಿನ ರಾಮಕೃಷ್ಣ ಲಂಚ್ ಹೋಂ ನ ಮೊದಲಮಹಡಿಯಲ್ಲಿ ಊರಿನ ಹಾಗು ಬೆಂಗಳೂರಿನ ಆಸಕ್ತ ಮಹಿಳಾ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ , ಆಯ್ಕೆ ಮಾಡಿದ ವಿಧ್ಯಾರ್ಥಿನಿಯರು/ ಮಹಿಳಾ ಕಲಾವಿದೆರಿಗೆ ಯಕ್ಷಗಾನ ಗುರುಗಳಾದ ಶ್ರೀಯುತ. ಕೆ. ಸದಾನಂದ ಐತಾಳರಿಂದ ಉತ್ಕೃಷ್ಟಮಟ್ಟದ ತರಬೇತಿ ನೀಡಿ ಗುಣಮಟ್ಟದ ಪ್ರದರ್ಶನವನ್ನು ನೀಡುತ್ತಿದ್ದರು.
ಅಕ್ಕಣಿಯಮ್ಮನವರು ಯಕ್ಷಗಾನದಲ್ಲಿ ಪಾತ್ರ ಮಾಡಿದ್ದು ತೀರಾ ಅಪರೂಪ ಅವರ 1979 ರ ಮೊದಲ ಬ್ಯಾಚ್ ನಲ್ಲಿ ಮಿಸ್ ಇಂಡಿಯಾ ರೇಖಾ ಹಂದೆಯವರು ರಾಣಿ ಶಶಿಪ್ರಭೆ ಪಾತ್ರ ಮಾಡುತ್ತಿದ್ದರು . ಸ್ಥಳೀಯವಾಗಿ “ಅಕ್ಕಣಿಯಮ್ಮನ ಮೇಳ” ಎಂದೇ ಆಡುಮಾತಿನಲ್ಲಿ ಪ್ರಸಿದ್ದಿಯಾಗಿತ್ತು. 1983ರಲ್ಲಿ ಸಾಲಿಗ್ರಾಮದ ಕಾರ್ಕಡದಲ್ಲಿ 10 ಭಾರಿ ಟಿಕೇಟು ಪ್ರದರ್ಶನ ಆಯೋಜಿಸಿ ಭರ್ಜರಿ ಹೌಸ್ ಫುಲ್ ಕಲೆಕ್ಷನ್ ಗಳಿಸಿದ್ದರು. ನಂತರ ಹಲವಾರು ಕಡೆ ವಿಶೇಷ ಯಕ್ಷಗಾನ ಆಯೋಜನೆಯಲ್ಲಿ ಮೊದಲು ಅತಿಥಿ ಮಹಿಳಾ ಯಕ್ಷಕಲಾವಿದರಿಂದ ನಂತರ ಮೇಳದ ಕಲಾವಿದರಿಂದ ಪ್ರದರ್ಶನವಿರುತಿತ್ತು.
1983-84ರಲ್ಲಿ ಶ್ರೀ ಅಮೃತೇಶ್ವರೀ ಮೇಳಕ್ಕೆ ಅತಿಥಿಕಲಾವಿದರಾಗಿ ಇವರ ತಂಡದ ಸದಸ್ಯರು ಭಾಗವಹಿಸುತ್ತಿದ್ದರು ಅವರಲ್ಲಿ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಹೆಂಡತಿ ಸುಜಾತ ಧಾರೇಶ್ವರರೂ ಕೂಡಾ ಒಬ್ಬರು. 1982ರಲ್ಲಿ ಮುಂಬಯಿಯಲ್ಲಿ ಪ್ರದರ್ಶನನೀಡಿದ್ದರು. ನಂತರ ಚೆನೈಯಲ್ಲೂ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದರು. ಶಿರಸಿ, ಸಿದ್ದಪುರ, ಕುಮುಟ, ಹೊನ್ನಾವರ, ಉಡುಪಿ, ಕುಂದಾಪುರ, ಮಂಗಳೂರು, ಕಾಸರಗೋಡು ಕಡೆಗಳಲ್ಲಿಯೂ ಪ್ರದರ್ಶನ ನೀಡೀದ್ದರು. 1990ರಲ್ಲಿ ಅಕ್ಕಣಿಯಮ್ಮನ ಮರಣಾನಂತರ ಇವರ ತಂಡ ನಿಂತುಹೋಯಿತು.
ಸಂಗ್ರಹ: ಪ್ರವೀಣ್ ಡಿ. ಕಟೀಲ್
ಮಾಹಿತಿ: ಗುರು ಶ್ರಿಯುತ ಸದಾನಂದ ಐತಾಳ, ಸುಜಾತ ಧಾರೇಶ್ವರ.
ಚಿತ್ರಕೃಪೆ : ಎಸ್. ಗಣಪತಿ ಪೈ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions