
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ವತಿಯಿಂದ ಸುಬೋಧ ಪ್ರೌಢ ಶಾಲೆ, ಪಾಣಾಜೆ ಇಲ್ಲಿ ನಡೆದ ಪುತ್ತೂರು ವೃತ್ತ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಆಂಗಿಕಾ ಶೆಟ್ಟಿ (ರಾಜ್ ಕುಮಾರ್ ಶೆಟ್ಟಿ, ಸ್ವಸ್ತಿಕಾ. ಆರ್.ಶೆಟ್ಟಿ ದಂಪತಿ ಪುತ್ರಿ) ಭರತನಾಟ್ಯದಲ್ಲಿ ಪ್ರಥಮ, 10ನೇ ತರಗತಿಯ ತನ್ವಿ ಶೆಣೈ ( ವಿಶ್ವಾಸ್ ಶೆಣೈ, ಶಾಂತೇರಿ ಶೆಣೈ ದಂಪತಿ ಪುತ್ರಿ)
ಇಂಗ್ಲಿಷ್ ಭಾಷಣದಲ್ಲಿ ಪ್ರಥಮ, 10ನೇ ತರಗತಿಯ ಸಾನ್ವಿ ಕಜೆ (ಡಾ. ಚರಣ್ ಕಜೆ, ಡಾ.ರಮ್ಯಾ ಕಜೆ ದಂಪತಿ ಪುತ್ರಿ) ಗಝಲ್ ನಲ್ಲಿ ಪ್ರಥಮ, 10ನೇ ತರಗತಿಯ ಶರಣ್ (ಸೀತಾರಾಮ ರೈ, ಸವಿತಾ ರೈ ದಂಪತಿ ಪುತ್ರ) ಹಾಸ್ಯದಲ್ಲಿ ಪ್ರಥಮ, 10ನೇ ತರಗತಿಯ ಧನುಷ್ ರಾಮ್(ದಿನೇಶ್ ಪ್ರಸನ್ನ , ಉಮಾ.ಡಿ. ಪ್ರಸನ್ನ ದಂಪತಿ ಪುತ್ರ) ಮತ್ತು ಹಿಮಾನಿ (ಚಿದಾನಂದ, ಶೋಭಾ ದಂಪತಿ ಪುತ್ರಿ) ಇವರ ತಂಡ ರಸಪ್ರಶ್ನೆಯಲ್ಲಿ ಪ್ರಥಮ, 9ನೇ ತರಗತಿಯ ಅಮೋಘಕೃಷ್ಣ (ಬಾಲಕೃಷ್ಣ ಭಟ್, ಸುಮಿತ್ರಾ ಭಟ್ ದಂಪತಿ ಪುತ್ರ) ಜನಪದಗೀತೆಯಲ್ಲಿ ಪ್ರಥಮ,
10ನೇ ತರಗತಿಯ ಅರ್ಚನಾ ಕಿಣಿ (ಹರೀಶ್ ಕಿಣಿ, ವಿನಯಾ ಕಿಣಿ ದಂಪತಿ ಪುತ್ರಿ) ಸಂಸ್ಕೃತ ಭಾಷಣದಲ್ಲಿ ದ್ವಿತೀಯ, 10ನೇ ತರಗತಿಯ ಪೂರ್ವಿ ರೈ (ಅರುಣ್ ಪ್ರಕಾಶ್ ರೈ, ಸವಿತಾ ರೈ ದಂಪತಿ ಪುತ್ರಿ) ಕನ್ನಡ ಭಾಷಣದಲ್ಲಿ ದ್ವಿತೀಯ, 10ನೇ ತರಗತಿಯ ತೇಜ ಚಿನ್ಮಯ ಹೊಳ್ಳ (ಹರೀಶ್ ಹೊಳ್ಳ, ಸುಚಿತ್ರಾ ಹೊಳ್ಳ ದಂಪತಿ ಪುತ್ರ)ಭಾವಗೀತೆಯಲ್ಲಿ ದ್ವಿತೀಯ,
10ನೇ ತರಗತಿಯ ಧಾತ್ರಿ (ದಿನೇಶ್, ಪದ್ಮಲಕ್ಷ್ಮೀ ದಂಪತಿ ಪುತ್ರಿ) ಸಾಮಾನ್ಯ ಕನ್ನಡ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ. ಮಾತ್ರವಲ್ಲದೇ, ಶಾಲಾ ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

