ಸೆಪ್ಟಂಬರ್ 3 ಮತ್ತು 4 (ಅಷ್ಟಮಿ) ಹಾಗೂ ಸೆಪ್ಟೆಂಬರ್ 6 ಮತ್ತು 7 (ಏಕಾದಶಿ)ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸಗಳನ್ನು ಮಾಡಲಾಗಿದೆ.

ಭಕ್ತಾದಿಗಳು ಈ ಬಗ್ಗೆ ಸೂಚನೆಗಳನ್ನು ನೀಡುವ ಪ್ರಕಟಣೆಯನ್ನು ಹೊರಡಿಸಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಿನಾಂಕ 03.09.2026 ಮತ್ತು ದಿನಾಂಕ 04.09.2026ರಂದು ಹಾಗೂ ದಿನಾಂಕ 06.09.2026 ದಶಮಿ, ದಿನಾಂಕ 07.09.2026 ಏಕಾದಶಿಯ ದಿನಗಳಲ್ಲಿ ಸರ್ಪಸಂಸ್ಕಾರ ಸೇವೆಯು ನಡೆಯುವುದಿಲ್ಲ ಎಂದು ದೇವಸ್ಥಾನದ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಲ್ಲದೆ ದಿನಾಂಕ 04.09.2026ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಾಗೂ ದಿನಾಂಕ 07.09.2026ರಂದು ಏಕಾದಶಿಯ ಪ್ರಯುಕ್ತ ಆಶ್ಲೇಷ ಬಲಿ, ನಾಗಪ್ರತಿಷ್ಟೆ ಹಾಗೂ ಮಹಾಭಿಷೇಕ ಸೇವೆಗಳು ನಡೆಯುವುದಿಲ್ಲ.
ಮಹಾಪೂಜೆ, ಶೇಷಸೇವೆ, ಅಭಿಷೇಕಗಳು, ಅರ್ಚನೆ ಸೇವೆಗಳು ಮತ್ತು ದರ್ಶನ ಎಂದಿನಂತೆ ನಡೆಯಲಿದೆ. ಭಕ್ತಾದಿಗಳು ಈ ವ್ಯತ್ಯಾಸವನ್ನು ಗಮನಿಸಿ ಸಹಕರಿಸಬೇಕಾಗಿ ದೇವಸ್ಥಾನದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

