2021-22ನೆ ಸಾಲಿನ ಅಂತಾ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ.
8ನೇ ತರಗತಿಯ ಚಿನ್ಮಯಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರು ಅಂತಾ ರಾಷ್ಟ್ರೀಯ ಇಂಗ್ಲಿಷ್, ಸಾಮಾನ್ಯಜ್ಞಾನ, ಗಣಿತ, ಸಮಾಜ ಅಧ್ಯಯನ ಹಾಗೂ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿರುವ ಅತ್ಯುತ್ತ ರ‍್ಯಾಂಕ್‌ಗಾಗಿ ನೀಡಲ್ಪಡುವ ವಿಶೇಷ ಬಹುಮಾನ ಗಿಫ್ಟ್ ವೋಚರ್ ಮತ್ತು ಅಕಾಡೆಮಿಕ್ ಎಕ್ಸ್ಲೆನ್ಸಿ ಅವಾರ್ಡ್ ಗಳನ್ನು ಪಡೆದಿರುತ್ತಾರೆ.
5ನೇ ತರಗತಿಯ ನೇಶ ಕಾವ್ಯ ಮುಗೇರ್(ರಮೇಶ್ ಮುಗೇರ್ ರಾವ್ ಮತ್ತು ಕೃಪಾರಾಣಿ.ಎಸ್ ದಂಪತಿಗಳ ಪುತ್ರಿ) , 3ನೇ ತರಗತಿಯ ಶಶಾಂಕ್.ಟಿ.ಆರ್(ಟಿ.ಎಸ್.ರಘುರಾಮ ಮತ್ತು ದೀಪ್ತಿ.ಆರ್.ಭಟ್ ದಂಪತಿಗಳ ಪುತ್ರ), 7ನೇ ತರಗತಿಯ ಯತಿನ್ ಬಿ.ಎಸ್(ಶೇಷಪ್ಪಗೌಡ.ಎಚ್ ಮತ್ತು ಹೇಮಾವತಿ.ಜಿ ದಂಪತಿಗಳ ಪುತ್ರಿ), 2ನೇ ತರಗತಿಯ ತನ್ವಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತುಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಇವರುಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ.
ಕಳೆದ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಾದ ಆತ್ಮೀಯ.ಎಂ.ಕಶ್ಯಪ್, ಶಿವಚೇತನ್ ಹಳಮನಿ, ಅಭೀಜ್ಞ.ಆರ್, ರಾಮಮೋಹನ ಮತ್ತು ಪಂಕಜ್ ಭಟ್ ಇವರು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು