ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾಗಿರುವ ಪ್ರಕರಣ ಹೀಗೆಯೇ ಎಂದು ಯಾರೂ ಊಹಿಸಬಹುದಾದರೂ ಅಧಿಕೃತ ಮಾಹಿತಿಗಾಗಿ ನಾಳೆ ಸೋಮವಾರದ ವರೆಗೆ ಕಾಯಬೇಕಾಗಿದೆ.
ಸದ್ಯ ಅರಬ್ ದೇಶ ಕತಾರ್ ನಲ್ಲಿ ಆಕೆಯ ಸ್ನೇಹಿತ ಶಾರುಖ್‌ನ ಸ್ನೇಹಿತನ ಜೊತೆಯಲ್ಲಿ ಇದ್ದಾಳೆ ಎಂದು ಊಹಿಸಲಾದ ಚೈತ್ರಾ ಅಲ್ಲಿಂದ ಸೋಮವಾರ ಭಾರತೀಯ ರಾಯಭಾರಿ ಕಚೇರಿ ಮೂಲಕ ಸೋಮವಾರ ಮಂಗಳೂರು ಪೊಲೀಸ್ ಕಮಿಷನರ್‌ಗೆ ಆಕೆ ಇರುವ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಶನಿವಾರ ಮತ್ತು ಭಾನುವಾರ ರಾಯಭಾರ ಕಚೇರಿಗೆ ರಜೆ ಇರುವುದರಿಂದ ಸೋಮವಾರ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ತೆರಳಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್‌ಗೆ ಲಿಖಿತ ಹೇಳಿಕೆ ನೀಡುವ ಸಾಧ್ಯತೆ ಇದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ನಾಪತ್ತೆಯಾಗಿದ್ದ ಹಾಗೂ ಬೆಂಗಳೂರಿಗೆ ಹೋಗಿದ್ದ ಚೈತ್ರಾಳ ಸಂಪರ್ಕದಲ್ಲಿದ್ದ ಪುತ್ತೂರಿನ ಶಾರುಖ್ ಬೆಂಗಳೂರಿಗೆ ತೆರಳಿ ಚೈತ್ರಾಳನ್ನು ಗೋವಾಕ್ಕೆ ಕರೆದುಕೊಂಡು ಹೋದ.. ಕಣ್ಣೂರಿನ ಶಾರುಖ್ ಸ್ನೇಹಿತ ಚೈತ್ರಾ ಮತ್ತು ಶಾರುಖ್ ಮಧ್ಯಪ್ರದೇಶದಲ್ಲಿ ಉಳಿಯಲು ವ್ಯವಸ್ಥೆ ಮಾಡಿದ. ಶಾರುಖ್ ಅವರ ಹತ್ತಿರದ ಸಂಬಂಧಿ ಕತಾರ್‌ನಲ್ಲಿ ನೆಲೆಸಿರುವ ಯುವಕ ಚೈತ್ರಾಗೆ ವಿಸಿಟಿಂಗ್ ವೀಸಾ ಮತ್ತು ವಿಮಾನ ಟಿಕೆಟ್ ಕಳುಹಿಸಿದ. ಅಲ್ಲಿಂದ ದೆಹಲಿ ಮೂಲಕ ಚೈತ್ರಾಳನ್ನು ಕತಾರ್ ಗೆ ಕಳುಹಿಸಿದ ಶಾರುಖ್ ವಾಪಸಾದ. ಈಗ ಚೈತ್ರಾ ಪ್ರಸ್ತುತ ಕತಾರ್ ನಲ್ಲಿ ಇದ್ದಾಳೆ ಎಂದು ನಂಬಲಾಗಿದೆ,
ಕತಾರ್ ಪೋಲೀಸರಿಗೆ ಚೈತ್ರಾ ತಾನು ಸ್ವಯಂಪ್ರೇರಿತ ನಿರ್ಗಮನದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಶನಿವಾರ ಮತ್ತು ಭಾನುವಾರ ರಜೆ ಇರುವುದರಿಂದ ಸೋಮವಾರ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ತೆರಳಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್‌ಗೆ ಹೇಳುತ್ತಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ
ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾಗಿರುವ ಶಾರುಖ್ ವಿದೇಶಕ್ಕೆ ತೆರಳಲು ಆಗುವುದಿಲ್ಲ. ಈಗಾಗಲೇ ಮಧ್ಯಪ್ರದೇಶದಲ್ಲಿ ಶಾರುಖ್ ಅವರನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಚೈತ್ರಾ ಹೇಳಿಕೆ ನೀಡುವ ಮೊದಲೇ ಶಾರುಖ್ ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂಬುದು ನಿಜವಾಗಿದ್ದರೆ ಅದು ತನಿಖಾ ಲೋಪವಾಗುತ್ತದೆ. ಯಾಕೆಂದರೆ ಇಡೀ ಪ್ರಕರಣದಲ್ಲಿ ಶಾರುಖ್ ನ ಪಾತ್ರ ಇದೆ ಎನ್ನುವುದು ಪೊಲೀಸರಿಗೆ ತಿಳಿಯದ ವಿಚಾರವಲ್ಲ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

