ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ ಮಾಡಲಾಗಿದೆ. ಈ ಸಂಬಂಧವಾಗಿ ಅವರೊಂದಿಗೆ ವಾಸಿಸುತ್ತಿದ್ದ ಯುವತಿಯೊಬ್ಬಳನ್ನು ಬಂಧಿಸಲಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಕೇರಳ ಮೂಲದ ಯುವತಿಯರನ್ನು ಅವರ ಸ್ನೇಹಿತೆಯೊಬ್ಬರು ಹತ್ಯೆ ಮಾಡಿದ್ದಾರೆ. ಮೃತರನ್ನು ತ್ರಿಶೂರ್ ಮೂಲದ ಅಂಜನಾ ಮತ್ತು ಚಿಂಗವನಂನ ಮತ್ತೊಬ್ಬ ಮಹಿಳೆ ಎಂದು ಗುರುತಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಅನಿಲಾ ಎಂಬ ಅವರೀರ್ವರ ಸ್ನೇಹಿತೆಯನ್ನು ಬಂಧಿಸಲಾಗಿದೆ. ಈ ಮೂವರು ಮಹಿಳೆಯರ ಕುಟುಂಬಗಳು ಒಂದೇ ಅಪಾರ್ಟ್ಮೆಂಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದವು.
ಅಂಜನಾ ಅವರ ಸಂಬಂಧಿಕರಿಗೆ ನಿನ್ನೆ ರಾತ್ರಿ ಈ ಸಾವಿನ ವಿಷಯ ತಿಳಿದುಬಂದಿದೆ.
ಫ್ಲಾಟ್ ಒಳಗಿನ ಒಂದು ಕೋಣೆಯಲ್ಲಿ ಚಿಂಗವನಂ ಮೂಲದ ಯುವತಿಯೊಬ್ಬರನ್ನು ಕೊಂದ ನಂತರ, ಹಂತಕಿಯು ಅಂಜನಾಳನ್ನು ಕೆಳಗೆ ಕರೆಸಿ ಆಕೆಯನ್ನೂ ಹತ್ಯೆಗೈದಳೆಂದು ವರದಿಗಳು ತಿಳಿಸುತ್ತವೆ.
ಅಂಜನಾಳ ಪತಿ ಕೆಲಸದ ನಿಮಿತ್ತ ಹೊರಗಿದ್ದಾಗ ಈ ಘಟನೆ ನಡೆದಿದೆ. ಈ ಕೊಲೆಗಳ ಹಿಂದಿನ ಉದ್ದೇಶವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನಮ್ಮ WhatsApp Channel ನ್ನು ಸೇರಲು ಈ ಲಿಂಕ್ ಬಳಸಿ

