Thursday, May 9, 2024
Homeಭರತನಾಟ್ಯಮನಮೋಹಕ ಕೂಚಿಪೂಡಿ ನೃತ್ಯ - Kuchipudi, a beauty of dance

ಮನಮೋಹಕ ಕೂಚಿಪೂಡಿ ನೃತ್ಯ – Kuchipudi, a beauty of dance

ಕೂಚಿಪೂಡಿ ಎಂಬುದು ಒಂದು ಊರಿನ ಹೆಸರು. ಅವಿಭಜಿತ ಆಂಧ್ರಪ್ರದೇಶ ರಾಜ್ಯದ ಶಾಸ್ತ್ರೀಯ ನೃತ್ಯಪದ್ಧತಿಯಾದ  ಕೂಚಿಪೂಡಿ  ನೃತ್ಯವು ಭರತನಾಟ್ಯವನ್ನು ಹೋಲುವ ಒಂದು ಉತ್ತಮ ಶಾಸ್ತ್ರೀಯ ನೃತ್ಯ ಕಲೆಯಾಗಿದೆ.  ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯತೆಯನ್ನು ಪಡೆದಿದೆ.  

ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ತೀರದ ಕೃಷ್ಣಾ ಜಿಲ್ಲೆಯ ದಿವಿ ತಾಲೂಕಿನ ಗ್ರಾಮದ ಹೆಸರು  ಕೂಚಿಪೂಡಿ . ಆ ಗ್ರಾಮದಲ್ಲಿರುವ ಬ್ರಾಹ್ಮಣ ಸಮುದಾಯ ಈ ನೃತ್ಯವನ್ನು ಅಭ್ಯಸಿಸಿ ಪ್ರದರ್ಶಿಸುತ್ತಿದ್ದುದರಿಂದ ಈ ನಾಟ್ಯಕಲೆಗೆ ಈ ಹೆಸರು ಬಂತು ಎಂದು ಚರಿತ್ರೆಯಿಂದ ತಿಳಿದುಬರುತ್ತದೆ. 

ಈ ನೃತ್ಯವು ಸಂಪೂರ್ಣವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅವಲಂಬಿಸಿದೆ. ಭರತನಾಟ್ಯದ ಹೋಲಿಕೆಯನ್ನು ಪಡೆದಿದ್ದರೂ ತನ್ನದೇ ಆದ ಹಲವು ಅಂಶಗಳನ್ನು  ಕೂಚಿಪೂಡಿ  ನೃತ್ಯ ಒಳಗೊಂಡಿದೆ. ಎರಡೂ ತರಹದ ನೃತ್ಯಗಳಿಗೆ ಸಂಬಂಧಿತ ವಸ್ತ್ರವಿನ್ಯಾಸಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ.

ಸಾಮಾನ್ಯವಾಗಿ, ಭರತನಾಟ್ಯಂ ಉಡುಪುಗಳಿಗೆ ವಿವಿಧ ಉದ್ದನೆಯ ಮೂರು ಮಡಿಕೆಗಳಿರುತ್ತವೆ. ಕೂಚಿಪೂಡಿ ನೃತ್ಯದಲ್ಲಿ, ಕೇವಲ ಒಂದೇ ಮಡಿಕೆಯಿದ್ದು, ಭರತನಾಟ್ಯ ಉಡುಪಿನ ಮೂರು ಮಡಿಕೆಗಳಲ್ಲಿ ಅತಿಯುದ್ದದ ಮಡಿಕೆಗಿಂತಲೂ ಉದ್ದವಾಗಿರುತ್ತದೆ.   ಕೂಚಿಪುಡಿ ಮತ್ತು ಭರತನಾಟ್ಯ ಹೆಜ್ಜೆಗಳ ನಡುವಿನ ಬೇರೆ-ಬೇರೆ ಶೈಲಿಗಳಲ್ಲದೆ, ಕೂಚಿಪೂಡಿಯಲ್ಲಿಯೇ ಅಪೂರ್ವವಾದ ಹಲವು ವಿಶಿಷ್ಟ ನೃತ್ಯರೂಪಗಳಿವೆ.

ಹಾವಭಾವಗಳುಳ್ಳ ಭಾಮ ಕಲಾಪಂ ನೃತ್ಯ-ನಾಟಕದಲ್ಲಿ ಕೃಷ್ಣನ ರಾಣಿ ಸತ್ಯಭಾಮಾಳ ಪಾತ್ರವನ್ನು ನೃತ್ಯಕಲಾವಿದರು ಅಮೋಘವಾಗಿ ಚಿತ್ರಿಸುತ್ತಾರೆ. ಅದರ ವೀಡಿಯೊ ಲಿಂಕ್ ಇಲ್ಲಿದೆ. 

ಭರತನಾಟ್ಯ, ಕೂಚಿಪೂಡಿ ಮತ್ತು ಒಡಿಸ್ಸಿ ನೃತ್ಯಗಳ ಹೋಲಿಕೆಯ ವೀಡಿಯೊ ಲಿಂಕ್ 

ಭರತನಾಟ್ಯ ಮತ್ತು ಕೂಚಿಪೂಡಿ ನೃತ್ಯಗಳ ಹೋಲಿಕೆಯ ವೀಡಿಯೊ ಲಿಂಕ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments