ಯಕ್ಷಲೋಕದ ತಾರೆ ಮಿನುಗಿ ಮರೆಯಾಯ್ತೇನು
ಸುತ್ತ ಪಸರಿಸಿದ ಬೆಳಕೆಲ್ಲ ತಿಮಿರವಾಗಿ
ದಶಕಗಳ ಕಾಲದಲಿ ಯಕ್ಷಲೋಕದಿ ಮೆರೆದ
ಅಗ್ರಗಣಿ ಪದ್ಯಾಣ ಗಣಪಣ್ಣ ಕಾಣದಾಗಿ.
ಭೌತಿಕದ ಈ ದೇಹ ತೊರೆದು ಸಾಗಿದರೇನು
ಶಾಶ್ವತದ ಸ್ಥಾನ ಜನರಮಾನಸದಲ್ಲಿ
ಅಪ್ರತಿಮ ಭಾಗವತರೆಂದು ಕೊಂಡಾಡುತಲಿ
ಗುಣಗಾನ ಗೈಯುತಿರೆ ಲೋಗರಿಲ್ಲಿ.
ಸಾಧನೆಯ ಮಾಡಿಹರು ಸನ್ಮಾನ ಪಡೆದಿಹರು
ಒಂದಲ್ಲ ಎರಡಲ್ಲ ಹಲವಾರು ಜಾಗದಲಿ
ಜನರೊಡನೆ ಒಡನಾಡಿ ಲಘುಹಾಸ್ಯದ ಮಾತು
ಮರೆಯಲಾರದ ಸತ್ಯ ಜೀವಂತವಾಗಿ.
ಖಾಲಿ ಮಾಡಿದಿರಲ್ಲ ನೀವಿದ್ದ ಜಾಗವನು
ಸರಿಸಾಟಿ ನಿಮಗ್ಯಾರು ನೀವೇ ಸಾಟಿ
ಸದ್ಗತಿಯು ನಿಮಗಿರಲಿ ದುಃಖ ಭರಿಸುವ ಶಕ್ತಿ
ಬಂಧುಗಳಿಗೆ ಮಿತ್ರರಿಗೆಲ್ಲ ಪ್ರಾಪ್ತವಾಗಿ.
ನಮನವಿದು ಅಗಲಿರುವ ನಿಮ್ಮ ದಿವ್ಯಾತ್ಮಕ್ಕೆ
ಸೇರಿದಿರಿ ಶಿವಪಾದ ಜಗವ ತೊರೆದಿಲ್ಲಿ
ನಮನವಿದೊ ಮತ್ತೊಮ್ಮೆ ನಿಮ್ಮ ವ್ಯಕ್ತಿತ್ವಕ್ಕೆ
ಬರೆದಿಹೆನು ಸಾಲುಗಳ ಅಕ್ಷರದ ರೂಪದಲ್ಲಿ.

ಕವಿ: ಗೋಪಾಲಕೃಷ್ಣ ಭಟ್, ಮನವಳಿಕೆ.12.10.2021
(ನಮ್ಮನ್ನಗಲಿದ ಯಕ್ಷಲೋಕದ ಧ್ರುವತಾರೆ ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ).
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

