Sunday, June 2, 2024
Homeಲೇಖನಕವಿ, ಸಾಹಿತಿ 'ಮುನಿಸು ತರವೆ' ಖ್ಯಾತಿಯ ಸುಬ್ರಾಯ ಚೊಕ್ಕಾಡಿ ಅವರಿಗೆ ಈ ಬಾರಿಯ 'ಮಾಸ್ತಿ ಪ್ರಶಸ್ತಿ'

ಕವಿ, ಸಾಹಿತಿ ‘ಮುನಿಸು ತರವೆ’ ಖ್ಯಾತಿಯ ಸುಬ್ರಾಯ ಚೊಕ್ಕಾಡಿ ಅವರಿಗೆ ಈ ಬಾರಿಯ ‘ಮಾಸ್ತಿ ಪ್ರಶಸ್ತಿ’

ಪ್ರಸಿದ್ಧ ಸಾಹಿತಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ನೀಡಲಾಗುವ ‘ಮಾಸ್ತಿ ಪ್ರಶಸ್ತಿ’ಗೆ ಕನ್ನಡದ ಪ್ರಸಿದ್ಧ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಸುಬ್ರಾಯ ಚೊಕ್ಕಾಡಿ ಅವರು ತನ್ನ ನವಿರಾದ ಕಾವ್ಯ ಶೈಲಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಮನೆಮಾತಾಗಿದ್ದರೂ ಅವರ ಹೆಸರು ಕೇಳಿದೊಡನೆ ಜನರಿಗೆ ಫಕ್ಕನೆ ನೆನಪಾಗುವುದು ಅವರ ‘ಮುನಿಸು ತರವೆ ಮುಗುದೆ, ಹಿತವಾಗಿ ನಗಲು ಬಾರದೆ’ ಎಂಬ ಜನಪ್ರಿಯ ಕವನ. 

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯು ಈ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಮಂದಿ ಗಣ್ಯರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಲ್ಲಿ ಸುಬ್ರಾಯ ಚೊಕ್ಕಾಡಿ (ಕಾವ್ಯ), ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ), ಎಸ್.ಆರ್.ವಿಜಯಶಂಕರ (ವಿಮರ್ಶೆ), ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಕೇಶವರೆಡ್ಡಿ ಹಂದ್ರಾಳ (ಕಥೆ), ಸ.ರಘುನಾಥ (ಸೃಜನಶೀಲ) ಒಳಗೊಂಡಿದ್ದಾರೆ. ಪ್ರಶಸ್ತಿಯು ತಲಾ ರೂ. 25,000/- ನಗದು, ಮಾಸ್ತಿ ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿದೆ.

ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಮಾರ್ಚ್ 27ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು  ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments