ಸಾಮಾಜಿಕ ತಾಲತಾಣದಲ್ಲಿ ಈಗೀಗ ಬಹಳಷ್ಟು ಮಾಡುತ್ತಿರುವ ಹೆಸರು ಧನಶ್ರೀ ವರ್ಮಾ ಅವರದು. ಭಾರತದ ಖ್ಯಾತ ಕ್ರಿಕೆಟರ್ ಯಜುವೇಂದ್ರ ಚಾಹಲ್ ಅವರ ಭಾವೀ ಪತ್ನಿ ಧನಶ್ರೀ ತನ್ನ ನೃತ್ಯಗಳಿಗೆ ಹೆಸರುವಾಸಿ. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನಶ್ರೀ ನೃತ್ಯ ಕಲಾವಿದೆಯೂ ಹೌದು.

ತನ್ನ ಬಹಳಷ್ಟು ನೃತ್ಯಗಳ ವೀಡಿಯೋಗಳನ್ನು ಯೂಟ್ಯೂಬ್ ಇನ್ಸ್ಟಾ ಗ್ರಾಂ ಗಳಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಐಪಿಎಲ್ ಕ್ರಿಕೆಟ್ ಪಂದ್ಯಗಳು ದುಬೈಯಲ್ಲಿ ನಡೆಯುತ್ತಾ ಇದೆ. ಹಾಗಾಗಿ ಯಜುವೇಂದ್ರ ಚಾಹಲ್ ಐಪಿಎಲ್ ಕ್ರಿಕೆಟ್ ಆಡುತ್ತಾ ಇದ್ದಾರೆ. ಜೊತೆಗೆ ಧನಶ್ರೀ ವರ್ಮಾ ಕೂಡಾ ಇದ್ದಾರೆ.

ಧನಶ್ರೀ ದುಬೈಯ ವಿಶ್ವ ವಿಖ್ಯಾತ ಭುರ್ಜ್ ಖಲೀಫಾ ಕಟ್ಟಡದ ಮೇಲೆ ಮಾಡಿದ ಡಾನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಾ ಇದೆ.