Saturday, May 18, 2024
Homeಯಕ್ಷಗಾನವಿಶೇಷ ಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಸಿರಿಬಾಗಿಲು ಪ್ರತಿಷ್ಠಾನದಿಂದ 'ಜಡಭರತ' ಯಕ್ಷಗಾನ 

ವಿಶೇಷ ಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಸಿರಿಬಾಗಿಲು ಪ್ರತಿಷ್ಠಾನದಿಂದ ‘ಜಡಭರತ’ ಯಕ್ಷಗಾನ 

ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಅವರ ಬಗ್ಗೆ ಕುತ್ಸಿತ ಭಾವನೆ ತಾಳದೆ ಸಮಾಜದಲ್ಲಿ ಅವರಿಗೂ ಬದುಕಲು ಹಕ್ಕಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನವೆಂಬಂತೆ ಕುತೂಹಲಕಾರೀ ಕಥಾ ಹಂದರವುಳ್ಳ “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಬುದ್ದಿಮಾಂದ್ಯ ಮಕ್ಕಳ ಶಾಲೆಯಾದ ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ 11. 10. 2020 ರ ಆದಿತ್ಯವಾರ ರಾತ್ರಿ 8.30 ಘಂಟೆಗೆ ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಆಗಲಿದೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ.

ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ವೆಂಕಟ್ರಮಣ ಭಟ್ ಚೆಂಡೆ- ಲಕ್ಮೀನಾರಾಯಣ ರಾವ್ ಅಡೂರು
ಮದ್ದಳೆ- ಲಕ್ಮೀಶ ಬೆಂಗ್ರೊಡಿ, ಉದಯ ಕಂಬಾರ್
ಚಕ್ರತಾಳ- ರವಿಶಂಕರ ಶೆಟ್ಟಿ
ಜಡಭರತ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃಷಲ- ರಾಧಾಕೃಷ್ಣ ನಾವಡ.ಮಧೂರು
ರಹೂಗಣ- ರವಿರಾಜ ಪನೆಯಾಲ
ದೂತ- ಪೆರುವೊಡಿ ಸುಬ್ರಹ್ಮಣ್ಯ ಭಟ್
ಚಂಡಿ- ಬಾಲಕೃಷ್ಣ ಸೀತಾಂಗೊಳಿ
ಭರತ ಸಹೊದರರು- ಪ್ರಕಾಶ್ ನಾಯಕ್ ನೀರ್ಚಾಲ್,  ಶಿವಾನಂದ ಪೆರ್ಲ,
ಬೊವಿಗಳು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ, ಶ್ರೀಗಿರಿ ಅನಂತಪುರ.
ವೇಷಭೂಷಣ- ಕೊಲ್ಲಂಗಾನ ಮೇಳ
ವಿಡಿಯೋ ಚಿತ್ರೀಕರಣ- ಉದಯ ಕಂಬಾರ್, ವರ್ಣ ಸ್ಟಡಿಯೋ, ನೀರ್ಚಾಲ್ ಮತ್ತು
ಶ್ರೀವತ್ಸ ಕುಂಚಿನಡ್ಕ
ಛಾಯಾಗ್ರಹಣ- ಶ್ಯಾಮ್ ಕುಂಚಿನಡ್ಕ
ಇಂಗ್ಲಿಷ್ ಸಬ್ ಟೈಟಲ್- ಸುಮನ್ ರಾಜ್ ನೀಲಂಗಳ
ಎಡಿಟಿಂಗ್- ಶ್ರೀಮುಖ ಯಸ್. ಆರ್.ಮಯ್ಯ, ಸಿರಿಬಾಗಿಲು  

ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.  

Channel Link
youtube.com/c/svvision

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments