Saturday, May 18, 2024
Homeಪುಸ್ತಕ ಮಳಿಗೆಜಾಗರದ ಜೋಷಿ (Jagarada Joshi)

ಜಾಗರದ ಜೋಷಿ (Jagarada Joshi)

‘ಜಾಗರದ ಜೋಷಿ’ ಎಂಬ ಈ ಕೃತಿಯು ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ, ವಿದ್ವಾಂಸ, ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಷಿ ಅವರ ಕುರಿತಾದ ಪೂರ್ವ ಪ್ರಕಟಿತ ನುಡಿಮಾಲೆಯಾಗಿ ಓದುಗರ ಕೈ ಸೇರಿತ್ತು. ಈ ಕೃತಿಯು 2017ರಲ್ಲಿ ಪ್ರಕಟವಾಗಿತ್ತು. ಈ ಹೊತ್ತಗೆಯ ಪ್ರಕಾಶಕರು ‘ಆಕೃತಿ ಆಶಯ ಪಬ್ಲಿಕೇಷನ್ಸ್ ಮಂಗಳೂರು. ಸಂಪಾದಕರು ಶ್ರೀ ನಾ. ಕಾರಂತ ಪೆರಾಜೆಯವರು. ಶ್ರೀ ನಾ . ಕಾರಂತ ಅವರು ‘ಸಪ್ತತಿಯ ಉಪಾಯನ’ ಎಂಬ ತಮ್ಮ ಬರಹದಲ್ಲಿ ‘ಜಾಗರದ ಜೋಷಿ’ ಎಂಬ ಕೃತಿಯ ಬಗೆಗೆ ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರ ಬಗೆಗೆ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಈ ಪುಸ್ತಕವು, ಅಕ್ಷರ ಉಪಾಯನ, ಕೃತಿ ನೋಟ,ಮುನ್ನುಡಿಯ ಮುಡಿ, ಜೋಷಿ ಚಿಂತನೆ, ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಅಕ್ಷರ ಉಪಾಯನ ಎಂಬ ಮೊದಲ ವಿಭಾಗದಲ್ಲಿ ಯೋಗೀಶ್ ರಾವ್ ಚಿಗುರುಪಾದೆ,  ಗ, ನಾ. ಭಟ್ಟ ಮೈಸೂರು, ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀಕರ ಭಟ್, ರಾಧಾಕೃಷ್ಣ ಕಲ್ಚಾರ್, ಎಂ.ಎಲ್.ಸಾಮಗ, ನಾ. ಕಾರಂತ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ರಾಜಕುಮಾರ್ ಪೈವಳಿಕೆ, ಎಂ. ಶಾಂತಾರಾಮ ಕುಡ್ವ, ಕೆನೆಡಾ ಪ್ರತಿನಿಧಿ, ಜಿ.ಎನ್. ಅಶೋಕವರ್ಧನ ಇವುಗಳ ಲೇಖನಗಳಿವೆ. ‘ಕೃತಿನೋಟ’ ಎಂಬ ಭಾಗದಲ್ಲಿ ಪಾದೇಕಲ್ಲು ವಿಷ್ಣು ಭಟ್ಟ, ಕೃಷ್ಣ ಪ್ರಕಾಶ್ ಉಳಿತ್ತಾಯ ಅವರುಗಳು ಬರೆದ ಲೇಖನಗಳನ್ನು ನೀಡಲಾಗಿದೆ. ‘ಮುನ್ನುಡಿಯ ನುಡಿ’ ಎಂಬ ವಿಭಾಗದಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ, ಡಾ. ಕೆ.ಎಂ. ರಾಘವ ನಂಬಿಯಾರ್, ಡಾ.ಬಿ.ಎ. ವಿವೇಕ ರೈ, ಪ್ರೊ| ಎಂ.ಎಲ್.ಸಾಮಗ, ಪ್ರೊ| ಅಮೃತ ಸೋಮೇಶ್ವರ, ಕು.ಶಿ. ಹರಿದಾಸ ಭಟ್, ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ| ಕೆ. ಚಿನ್ನಪ್ಪ ಗೌಡ, ಪ್ರೊ| ಉದ್ಯಾವರ ಮಾಧವ ಆಚಾರ್ಯ, ಇವರುಗಳು ಬರೆದ ಲೇಖನಗಳಿವೆ.

‘ಜೋಶಿ ಚಿಂತನೆ’ ಎಂಬ ವಿಭಾಗದಡಿ ‘ಸ್ಥಿರೀಕರಣ, ಪರಿಷ್ಕರಣ, ವಿಸ್ತರಣ ಎಂಬ ಬರಹವಿದ್ದು ಇದು 2011ರಲ್ಲಿ ಕರ್ನಾಟಕ ಸಾಂಸ್ಕೃತಿಕ ಕಲಾ ಪರಿಷತ್ತು ಬೆಂಗಳೂರಿನಲ್ಲಿ ಸಂಘಟಿಸಿದ ಐದನೆಯ ಯಕ್ಷಗಾನ ಸಮ್ಮೇಳನದಲ್ಲಿ ಡಾ. ಎಂ, ಪ್ರಭಾಕರ ಜೋಶಿಯವರು ಮಾಡಿದ ಅಧ್ಯಕ್ಷೀಯ ಭಾಷಣದ ವಿಷಯಗಳನ್ನು ಒಳಗೊಂಡಿದೆ. ಬಳಿಕ ‘ಅಭಿಮತ’ ಎಂಬ ವಿಚಾರದಡಿ ಶೇಣಿ ಗೋಪಾಲಕೃಷ್ಣ ಭಟ್, ವಿದ್ವಾನ್ ಕೊರ್ಗಿ ವೆಂಕಟೀಶ್ವರ ಉಪಾಧ್ಯಾಯ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಬಸವರಾಜ ಮಲಶೆಟ್ಟಿ, ಪ್ರೊ|ಎಂ.ಎಂ. ಕುಲಬರ್ಗಿ, ಎ. ಈಶ್ವರಯ್ಯ, ಶ್ರೀಮತಿ ಸುಶೀಲಾ ಆರ್. ರಾವ್, ವೆಂಕಟರಾಮ ಭಟ್ಟ ಸುಳ್ಯ, ಡಾ. ಯು. ಪಿ. ಉಪಾಧ್ಯಾಯ, ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ, ಚಂದ್ರಶೇಖರ ಮಂಡೆಕೋಲು, ಉಜಿರೆ ಅಶೋಕ ಭಟ್, ಎಂ. ಶಾಂತಾರಾಮ ಕುಡ್ವ, ಮೂರ್ತಿ ದೇರಾಜೆ, ಪ್ರೊ| ಕೆ. ಇ. ರಾಧಾಕೃಷ್ಣ, ಇವರುಗಳು ಶ್ರೀ ಡಾ. ಪ್ರಭಾಕರ ಜೋಷಿಯವರ ಬಗೆಗೆ ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದ ಮಹನೀಯರುಗಳ ವಾಸ್ತವ್ಯ ವಿಳಾಸಗಳನ್ನೂ ನೀಡಲಾಗಿದ್ದು ಬಳಿಕ ಡಾ. ಪ್ರಭಾಕರ ಜೋಷಿಯವರ ಲೇಖನಿಯಿಂದ ಪ್ರಕಟವಾದ ಕೃತಿಗಳ ವಿವರಗಳನ್ನು ನೀಡಿರುತ್ತಾರೆ. ಈ ಹೊತ್ತಗೆಯು ನೂರಾ ಮೂವತ್ತು ಪುಟಗಳಿಂದ ಕೂಡಿದ್ದು, ಹೊರ ಆವರಣದಲ್ಲಿ ಡಾ.ಬಿ.ಎ. ವಿವೇಕ ರೈಯವರು ಶ್ರೀ ಡಾ. ಪ್ರಭಾಕರ ಜೋಷಿಯವರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments