‘ನಿವಾತ’ ಎಂದರೆ ವಾಯು; ಗಾಳಿ. ವಾಯುವೇ ಕವಚವಾಗಿ ಉಳ್ಳವರು ನಿವಾತ ಕವಚರು; ದಾನವರು. ಇವರು ಪ್ರಹ್ಲಾದನ ತಮ್ಮನಾದ ಸಂಹ್ಲಾದನ ಸುತರು. ಹಿರಣ್ಯನಗರಿಯವರು. ಪಾತಾಳವಾಸಿಗಳು. ಪಾರ್ಥನು ಇಂದ್ರಕೀಲ ಪರ್ವತಾಗ್ರದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದ ಮೇಲೆ ಇಂದ್ರನ ಆಹ್ವಾನದ ಮೇರೆಗೆ ದೇವಲೋಕಕ್ಕೆ ಹೋಗುತ್ತಾನೆ.
ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ (ಕು.ವ್ಯಾ ಅ.ಪ 9-1 ಪೂರ್ವಾರ್ಧ)
ಆಗೊಮ್ಮೆ ಇಂದ್ರನು,
ಅರಿಗಳೆವಗೆ ನಿವಾತಕವಚರು ಸುರಪದವಿಸೋಪದ್ರವದ ನಿ ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ (12-2 ಪೂರ್ವಾರ್ಧ)ಎಂಬುದಾಗಿ ಹಿಂದಣ ಘಟನೆಯನ್ನು ಪಾರ್ಥ ಧರ್ಮರಾಯನಿಗೆ ಹೇಳಿದನು.
‘ದಾನವರ ಮರ್ದಿಸಿ ದೇವಲೋಕವನೆವಗೆ ನಿರುಪದ್ರವದಲೆಡೆ ಮಾಡೆಂದನಮರೇಂದ್ರ’ (12-8) ದೇವತೆಗಳೊಂದಿಗೆ ಸೇರಿಕೊಂಡು ಅರ್ಜುನ ನಿವಾತಕವಚರೊಂದಿಗೆ ಯುದ್ಧ ಮಾಡುತ್ತಾನೆ. ಕೊನೆಗೆ,
ತೊಡಚಿದನು ಬೊಮ್ಮಾಸ್ತ್ರವನು ಹುರಿ
ಯೊಡೆದುದಸುರರು ಮರೆತವರನಿ
ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ (ಅರಣ್ಯ ಪರ್ವ – 12-46)
(ನಿವಾತ ಕವಚರ ಉಪಾಖ್ಯಾನ ಗದುಗು ಭಾರತದ ಅರಣ್ಯ ಪರ್ವದ ಹನ್ನೆರಡನೆಯ ಸಂಧಿಯಲ್ಲಿ ವಿಸ್ತಾರವಾಗಿ ಬಂದಿದೆ. ಪೂರ್ವಭಾವಿಯಾಗಿ ಒಂಭತ್ತನೆಯ ಸಂಧಿಯನ್ನು ಓದಿದರೆ ಒಳ್ಳೆಯದು. ವ್ಯಾಸಭಾರತದ ವನಪರ್ವದ ಸಂಧಿ 168-86, 169-24, 170-39, 171-40, 172-35, ಇಲ್ಲಿ ವಿವರವಾಗಿ ಇವೆ)
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ