Friday, September 20, 2024
Homeಸಂಗೀತಭಜನಾ ಸಂಕೀರ್ತನೆಯಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದ 'ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್'

ಭಜನಾ ಸಂಕೀರ್ತನೆಯಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದ ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’

ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್(ರಿ) ಎಂಬುದು ಆಸ್ತಿಕ ಬಾಂಧವರೆಲ್ಲರಿಗೂ ಪರಿಚಿತವಾದ ಹೆಸರು. ದೇವರ ಭಜನೆ ಹಾಡುಗಳ ಗಾಯನ ಪ್ರಪಂಚದಲ್ಲಿ ಈ ಟ್ರಸ್ಟ್ ಕ್ರಾಂತಿಯನ್ನೇ ಎಬ್ಬಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. 

ಕಾಟುಕುಕ್ಕೆ ಎಂದ ಕೂಡಲೇ ನಮಗೆ ನೆನಪಾಗುವುದು ಅಪ್ರತಿಮ ಗಾಯಕ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಹೆಸರು. ಅವರ ಹಾಡುಗಳನ್ನು ಕೇಳದ ಕನ್ನಡಿಗ ಸಂಗೀತ ಪ್ರೇಮಿಗಳಿರಲಿಕ್ಕಿಲ್ಲ. ಅಂತಹ ಗಾಯಕರೊಬ್ಬರು ತಮ್ಮ ಭಜನಾ ಸಂಕೀರ್ತನೆಗಳಿಗೂ ನಾಡಿನಾದ್ಯಂತ ಹೆಸರನ್ನು ಗಳಿಸಿದ್ದಾರೆ.  

ಮಧ್ವಾಧೀಶ ಶ್ರೀ ವಿಠಲ ದಾಸ ನಾಮಾಂಕಿತ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಮಾರ್ಗದರ್ಶನದೊಂದಿಗೆ ಇಂದು ಹಲವಾರು ಭಜನಾ ಸಂಘಗಳು ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್ ನ ತಂಡಗಳ ಭಜನಾ  ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.  ‘ಕಾಟುಕುಕ್ಕೆ ಭಜನಾ ಚಾರಿಟೆಬಲ್ ಟ್ರಸ್ಟ್’ ನ  ಸುಮಾರು 130ಕ್ಕೂ ಹೆಚ್ಚು ಭಜನಾ ತಂಡಗಳು ಭಜನಾ ಗಾಯನದ ಪ್ರಸ್ತುತಿಯನ್ನು ಮಾಡುತ್ತಿವೆ. 

ಇತ್ತೀಚೆಗೆ ಅಂದರೆ  ಜ.14ರಿಂದ ಜ.17ರ ತನಕ ಸಿದ್ಧಾಪುರ ಬಾನ್ಕುಳಿಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಗೋವುಗಳ ವಿಹಂಗಮ ತಾಣ ಗೋಸ್ವರ್ಗದಲ್ಲಿ ನಡೆದ ‘ಗೋದಿನ’ ಮತ್ತು ‘ಆಲೆಮನೆ ಹಬ್ಬ’ದ ಸಂದರ್ಭದಲ್ಲಿ ಕಾಟುಕುಕ್ಕೆ ಭಜನಾ ಚ್ಯಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಗೋಸಂಕೀರ್ತನ ಕಾರ್ಯಕ್ರಮ ವಿಶಿಷ್ಟವಾಗಿ ಜರಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments