ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ತೆಂಕುತಿಟ್ಟಿನ ಯುವ, ಅನುಭವೀ ಮದ್ದಳೆಗಾರರಲ್ಲೊಬ್ಬರು. ಹೆಜ್ಜೆಗಾರಿಕೆಯನ್ನು ಕಲಿತು ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಶ್ರೀಯುತರು, ಛಲದಿಂದ ಹಿಮ್ಮೇಳ ವಿದ್ಯೆಯನ್ನು ಕಲಿತು ಎಲ್ಲರೂ ಅಚ್ಚರಿ ಪಡುವಂತೆ ಇಂದು ಒಳ್ಳೆಯ ಮದ್ದಳೆಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ.
ಉತ್ತಮ ಸಂಘಟಕರಾಗಿಯೂ, ಲೇಖಕರಾಗಿಯೂ ಇವರು ಎಲ್ಲರಿಗೂ ಪರಿಚಿತರು. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕಂಬಳಿಮೂಲೆ ಉಪಾಧ್ಯಾಯ ಮನೆತನ. 1975 ಏಪ್ರಿಲ್ 18ರಂದು ಶ್ರೀ ಎಲ್.ಸುಬ್ರಾಯ ಭಟ್ ಮತ್ತು ಶ್ರೀಮತಿ ದುರ್ಗಾಪರಮೇಶ್ವರಿ ದಂಪತಿಗಳಿಗೆ ಮಗನಾಗಿ ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮದ ಕೊಂಕಣಾಜೆ ಎಂಬಲ್ಲಿ ಜನನ. ವಿದ್ಯಾಭ್ಯಾಸ ಪಿಯುಸಿ ವರೆಗೆ. ಏಳನೇ ತರಗತಿ ವರೆಗೆ ವೇಣೂರು ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಎಡನೀರು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ. (ಬದಿಯಡ್ಕ ಸಮೀಪದ ಕಜೆಹಿತ್ತಿಲು ಎಂಬಲ್ಲಿ ಚಿಕ್ಕಮ್ಮನ ಮನೆಯಲ್ಲಿದ್ದು ಹೈಸ್ಕೂಲ್ ವಿದ್ಯಾರ್ಜನೆ ಪೂರೈಸಿದ್ದರು.)
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಶೀಘ್ರದಲ್ಲಿಯೇ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿ? ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಕೆ
- 18 ವರ್ಷಗಳ ಕಾಲ ನಿರಂತರ ನೋವು ಅನುಭವಿಸಿದ ಮಹಿಳೆ : ಕೊನೆಗೂ ಆಕೆಯ ಯೋನಿಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸಾ ಸೂಜಿಯನ್ನು ಕಂಡುಕೊಂಡ ವೈದ್ಯರು – ಶಸ್ತ್ರಚಿಕಿತ್ಸೆ ಮತ್ತಷ್ಟು ವಿಳಂಬ
- ಪುರುಷರ ಜೊತೆಗೆ ಸೆಕ್ಸ್ ಇಲ್ಲ, ಮದುವೆ ಇಲ್ಲ, ಡೇಟಿಂಗ್ ಇಲ್ಲ, ಮಕ್ಕಳೂ ಇಲ್ಲ: ಟ್ರಂಪ್ ಗೆಲುವಿನ ನಂತರ ಅಮೆರಿಕಾದಲ್ಲಿ ಮಹಿಳೆಯರ 4ಬಿ ಚಳುವಳಿ ಆರಂಭ
- ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ ಆರ್ಯನ್ ಲಿಂಗ ಪರಿವರ್ತನೆ – ಅನಾಯಾ (ಹುಡುಗಿ) ಆಗಿ ಮರು ನಾಮಕರಣ
- ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ
ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದರು. ಅಲ್ಲದೆ ಖ್ಯಾತ ಹಾಸ್ಯಗಾರರಾದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಯಿಸರು ಬಂಧುಗಳೇ ಆಗಿದ್ದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಪೆರ್ಲದಲ್ಲಿ ಶ್ರೀ ಸಬ್ಬಣಕೋಡಿ ರಾಮ ಭಟ್ಟರಿಂದ ನಾಟ್ಯ ಕಲಿತು ಕೊಂಕಣಾಜೆ ಚಂದ್ರಶೇಖರ ಭಟ್ಟರು ರಾಮಾಶ್ವಮೇಧ ಪ್ರಸಂಗದಲ್ಲಿ ಶತ್ರುಘ್ನನಾಗಿ ರಂಗಪ್ರವೇಶ ಮಾಡಿದ್ದರು (ಪೆರ್ಲದಲ್ಲಿ). ಬಳಿಕ ನಿರಂತರ ಐದಾರು ವರ್ಷಗಳ ಕಾಲ ವೇಷಗಳನ್ನು ಮಾಡಿದ್ದರು.
(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಜನೆ. ಇಂಟರ್ ಕಾಲೇಜು ಸ್ಪರ್ಧೆಯಲ್ಲಿ ಕಿರೀಟ ವೇಷಧಾರಿಯಾಗಿ ಪ್ರಥಮ ಬಹುಮಾನ ಪಡೆದಿದ್ದರು (ವಿದ್ಯುನ್ಮತಿ ಕಲ್ಯಾಣ ಪ್ರಸಂಗದ ಕುಶ). ಯಕ್ಷಕೂಟ ಪುತ್ತೂರು ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ವಿದ್ಯಾರ್ಥಿಯಾಗಿರುವಾಗಲೇ ವೇಷ ಮಾಡುತ್ತಾ ಬಂದಿದ್ದರು. ಆಗಲೇ ಹಿಮ್ಮೇಳ ಕಲಿಯುವ ಆಸಕ್ತಿ ಇತ್ತು. ಆದರೆ ಅನುಕೂಲವಾಗಿರಲಿಲ್ಲ. ಪಿಯುಸಿ ವಿದ್ಯಾರ್ಜನೆಯ ಬಳಿಕ ಮುಳಿಯ ಜ್ಯುವೆಲ್ಸ್ ಸಂಸ್ಥೆಯಲ್ಲಿ ಒಂದು ವರ್ಷ ಉದ್ಯೋಗಿಯಾಗಿದ್ದರು. ಈ ಸಮಯದಲ್ಲಿ ಕೇಳ ಕಾಶಿಪಟ್ನದಲ್ಲಿ ನಾಟ್ಯ ತರಗತಿಯನ್ನೂ ನಡೆಸಿದ್ದರು.
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಶೀಘ್ರದಲ್ಲಿಯೇ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿ? ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಕೆ
- 18 ವರ್ಷಗಳ ಕಾಲ ನಿರಂತರ ನೋವು ಅನುಭವಿಸಿದ ಮಹಿಳೆ : ಕೊನೆಗೂ ಆಕೆಯ ಯೋನಿಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸಾ ಸೂಜಿಯನ್ನು ಕಂಡುಕೊಂಡ ವೈದ್ಯರು – ಶಸ್ತ್ರಚಿಕಿತ್ಸೆ ಮತ್ತಷ್ಟು ವಿಳಂಬ
- ಪುರುಷರ ಜೊತೆಗೆ ಸೆಕ್ಸ್ ಇಲ್ಲ, ಮದುವೆ ಇಲ್ಲ, ಡೇಟಿಂಗ್ ಇಲ್ಲ, ಮಕ್ಕಳೂ ಇಲ್ಲ: ಟ್ರಂಪ್ ಗೆಲುವಿನ ನಂತರ ಅಮೆರಿಕಾದಲ್ಲಿ ಮಹಿಳೆಯರ 4ಬಿ ಚಳುವಳಿ ಆರಂಭ
- ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ ಆರ್ಯನ್ ಲಿಂಗ ಪರಿವರ್ತನೆ – ಅನಾಯಾ (ಹುಡುಗಿ) ಆಗಿ ಮರು ನಾಮಕರಣ
- ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ
ಹಿಮ್ಮೇಳ ಕಲಿಯಲೇ ಬೇಕೆಂಬ ನಿರ್ಣಯವನ್ನು ಮಾಡಿ 1996ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದ್ದರು. ಧರ್ಮಸ್ಥಳ ತರಬೇತಿ ಕೇಂದ್ರದಲ್ಲಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳಿಂದ ಮದ್ದಳೆವಾದನದ ಅಭ್ಯಾಸ. ಕೇಂದ್ರದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ದಿನೇಶ ಕೋಡಪದವು, ಬಾಲಕೃಷ್ಣ ಮಿಜಾರು, ಕೂರಿಯಾಳ ಶ್ರೀನಿವಾಸ ಇವರು ಸಹಪಾಠಿಗಳಾಗಿದ್ದರು. ರವಿಚಂದ್ರ ಕನ್ನಡಿಕಟ್ಟೆ ಅವರು ನಾಟ್ಯ ಕಲಿತು ಮೇಳದಲ್ಲಿ ವೇಷ ಮಾಡುತ್ತಿದ್ದವರು ಅಚ್ಚರಿಯ ಬೆಳವಣಿಗೆಯಲ್ಲೇ ಭಾಗವತರಾದುದು.
(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )
ಲಲಿತ ಕಲಾ ಕೇಂದ್ರದಲ್ಲಿ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ತರಬೇತಿ ಪಡೆದು ಕೊಂಕಣಾಜೆ ಚಂದ್ರಶೇಖರ ಭಟ್ಟರು 1996-97ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಯಾಗಿದ್ದರು. 1ನೇ ಮೇಳದಲ್ಲಿ 1 ವರ್ಷ ಮದ್ದಳೆಗಾರರಾಗಿ ತಿರುಗಾಟ (ಬೊಟ್ಟೆಕೆರೆ ಪುರುಷೋತ್ತಮ ಪೂಂಜರು ಪ್ರಧಾನ ಭಾಗವತರು). ಬಳಿಕ 8 ವರ್ಷ ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ (ಕುಬಣೂರು ಶ್ರೀಧರ ರಾಯರ ಭಾಗವತಿಕೆಯಡಿ). ಬಳಿಕ ಪ್ರಧಾನ ಮದ್ದಳೆಗಾರರಾಗಿ ಭಡ್ತಿ ಹೊಂದಿ ಮತ್ತೆ ಒಂದನೇ ಮೇಳದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆಯಲ್ಲಿ ಮೂರು ವರ್ಷಗಳ ತಿರುಗಾಟ.
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಶೀಘ್ರದಲ್ಲಿಯೇ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿ? ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಕೆ
- 18 ವರ್ಷಗಳ ಕಾಲ ನಿರಂತರ ನೋವು ಅನುಭವಿಸಿದ ಮಹಿಳೆ : ಕೊನೆಗೂ ಆಕೆಯ ಯೋನಿಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸಾ ಸೂಜಿಯನ್ನು ಕಂಡುಕೊಂಡ ವೈದ್ಯರು – ಶಸ್ತ್ರಚಿಕಿತ್ಸೆ ಮತ್ತಷ್ಟು ವಿಳಂಬ
- ಪುರುಷರ ಜೊತೆಗೆ ಸೆಕ್ಸ್ ಇಲ್ಲ, ಮದುವೆ ಇಲ್ಲ, ಡೇಟಿಂಗ್ ಇಲ್ಲ, ಮಕ್ಕಳೂ ಇಲ್ಲ: ಟ್ರಂಪ್ ಗೆಲುವಿನ ನಂತರ ಅಮೆರಿಕಾದಲ್ಲಿ ಮಹಿಳೆಯರ 4ಬಿ ಚಳುವಳಿ ಆರಂಭ
- ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ ಆರ್ಯನ್ ಲಿಂಗ ಪರಿವರ್ತನೆ – ಅನಾಯಾ (ಹುಡುಗಿ) ಆಗಿ ಮರು ನಾಮಕರಣ
- ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ
ಬಳಿಕ ವೈಯುಕ್ತಿಕ ಸಮಸ್ಯೆಗಳಿಂದಾಗಿ ಮೇಳದ ತಿರುಗಾಟ ನಿಲ್ಲಿಸಿದ್ದರು. ಆದರೂ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಅನಿವಾರ್ಯವಾದಾಗ ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ ಗಾನ ವೈಭವ, ನಾಟ್ಯ ವೈಭವಗಳಲ್ಲಿ ತಮ್ಮ ಕೈಚಳಕವನ್ನು ಪ್ರದರ್ಶಿಸಿರುತ್ತಾರೆ. ತನ್ಮಧ್ಯೆ ಪೂಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಟ್ಯ ತರಗತಿಯನ್ನೂ ಪೂಂಜ ಮತ್ತು ಮೂಡಬಿದಿರೆಗಳಲ್ಲಿ ಹಿಮ್ಮೇಳ ತರಗತಿಗಳನ್ನೂ ನಡೆಸಿದ್ದರು.
(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)
ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರು ಉತ್ತಮ ಕೃಷಿಕರೂ ಆಗಿರುತ್ತಾರೆ. ಪ್ರಸ್ತುತ ಕೃಷಿಯ ಜತೆ ಕಾರಿಂಜ ಮತ್ತು ವಾಮದಪದವು ಎಂಬಲ್ಲಿ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ. ಅಲ್ಲದೆ ಕಲಿಕಾಸಕ್ತರು ಮನೆಗೆ ಬಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿ ನೀಡುತ್ತಾರೆ. ಕೊಂಕಣಾಜೆಯವರು ಪ್ರಸ್ತುತ ಬಹು ಬೇಡಿಕೆಯ ಯುವ ಮದ್ದಳೆಗಾರರು. ಪ್ರಸಂಗ ಜ್ಞಾನ, ರಂಗ ನಡೆ, ಮುಮ್ಮೇಳದ ಜ್ಞಾನವನ್ನೂ ಹೊಂದಿದ ಮದ್ದಳೆಗಾರರಿವರು.
ಯಕ್ಷಗಾನ ಪ್ರದರ್ಶನ, ತಾಳಮದ್ದಳೆ, ಗಾನ ವೈಭವ ಕಾರ್ಯಕ್ರಮಗಳ ಸಂಘಟಕರಾಗಿಯೂ ಕೊಂಕಣಾಜೆಯವರು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಬಲಿಪ ಗಾನ-ಯಾನ, ಯಕ್ಷ ಪರಂಪರೆಯ ನಿರಂತರ ಪಯಣ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಯಕ್ಷ ಪರಂಪರೆಯ ಹಾಡುಗಳನ್ನು ದಾಖಲೀಕರಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶವನ್ನು ಇದು ಹೊಂದಿದೆ.
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಶೀಘ್ರದಲ್ಲಿಯೇ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿ? ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಕೆ
- 18 ವರ್ಷಗಳ ಕಾಲ ನಿರಂತರ ನೋವು ಅನುಭವಿಸಿದ ಮಹಿಳೆ : ಕೊನೆಗೂ ಆಕೆಯ ಯೋನಿಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸಾ ಸೂಜಿಯನ್ನು ಕಂಡುಕೊಂಡ ವೈದ್ಯರು – ಶಸ್ತ್ರಚಿಕಿತ್ಸೆ ಮತ್ತಷ್ಟು ವಿಳಂಬ
- ಪುರುಷರ ಜೊತೆಗೆ ಸೆಕ್ಸ್ ಇಲ್ಲ, ಮದುವೆ ಇಲ್ಲ, ಡೇಟಿಂಗ್ ಇಲ್ಲ, ಮಕ್ಕಳೂ ಇಲ್ಲ: ಟ್ರಂಪ್ ಗೆಲುವಿನ ನಂತರ ಅಮೆರಿಕಾದಲ್ಲಿ ಮಹಿಳೆಯರ 4ಬಿ ಚಳುವಳಿ ಆರಂಭ
- ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಮಗ ಆರ್ಯನ್ ಲಿಂಗ ಪರಿವರ್ತನೆ – ಅನಾಯಾ (ಹುಡುಗಿ) ಆಗಿ ಮರು ನಾಮಕರಣ
- ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಹಾಗೂ ಬೆಳ್ತಂಗಡಿಯ SDMC ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಕೊಂಕಣಾಜೆ ಚಂದ್ರಶೇಖರ ಭಟ್ಟರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಉತ್ತಮ ಲೇಖಕರೂ ಹೌದು. ಇವರ ಅಣ್ಣ ಕೊಂಕಣಾಜೆ ರಮೇಶ ಭಟ್ಟರು ಉತ್ತಮ ಕ್ರಷಿಕರು ಮತ್ತು ಕಾಷ್ಠ ಶಿಲ್ಪಿ ಕಲಾವಿದರು.
(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )
ಕೊಂಕಣಾಜೆ ಚಂದ್ರಶೇಖರ ಭಟ್ಟರ ಪತ್ನಿ ಶ್ರೀಮತಿ ಸರೋಜ (೨೦೦೯ರಲ್ಲಿ ವಿವಾಹ) ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ರಂಜಿನಿ ೫ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುತ್ರ ಮಾ| ಸುಷೇಣ. ಯುವ ಮದ್ದಳೆಗಾರರಾದ ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್ಟರಿಂದ ಯಕ್ಷಗಾನ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಶುಭ ಹಾರೈಕೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ (ಫೋಟೋ: ರಾಮ್ ನರೇಶ್ ಮಂಚಿ, ಅಕ್ಷಯ್ ಕೃಷ್ಣ, ಚಂದ್ರಿಕಾ ಭಟ್ ಮವ್ವಾರು)