‘ನಡೆದು ಬಂದ ದಾರಿ’ ಇದು ಡಾ| ಉಪ್ಪಂಗಳ ಶ್ರೀ ಶಂಕರನಾರಾಯಣ ಭಟ್ಟರ ಜೀವನ ಕಥೆಯನ್ನು ತಿಳಿಸುವ ಕೃತಿ. ಶ್ರೀಯುತರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರು.
ಕೇರಳ ರಾಜ್ಯದ ಕಾಲೇಜು ಮಟ್ಟದ ವಿದ್ಯಾಸಂಸ್ಥೆಗಳ ಉಪನಿರ್ದೇಶಕರಾಗಿಯೂ ನಿವೃತ್ತರು. ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಲಾ ಸೇವೆಯನ್ನು ಮಾಡಿರುವವರು. ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಮಂಡಳಿಯಲ್ಲಿ ಇವರು ಸಕ್ರಿಯರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆ ಪ್ರಶಂಸನೀಯವಾದುದು. ಅನೇಕ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುತ್ತಾರೆ. ‘ನಡೆದು ಬಂದ ದಾರಿ’ ಎಂಬ ಪುಸ್ತಕವು 2022ರಲ್ಲಿ ಪ್ರಕಟವಾಗಿತ್ತು. ಈ ಕೃತಿಯ ಪ್ರಕಾಶಕರು ಮಂಗಳೂರಿನ ಆಕೃತಿ ಆಶ್ರಯ ಪಬ್ಲಿಕೇಷನ್ಸ್. ಇದು ನೂರಾ ಹದಿನಾರು ಪುಟಗಳ ಪುಸ್ತಕ. ಬೆಲೆ ರೂಪಾಯಿ ನೂರಾ ಇಪ್ಪತ್ತೈದು ಮಾತ್ರ.
ಪ್ರಕಾಶಕರಾದ ಶ್ರೀ ಕಲ್ಲೂರ ನಾಗೇಶ ಅವರು ‘ದಾರಿ ಮಾಡಿ ಕೊಟ್ಟವರು’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿರುತ್ತಾರೆ. ‘ಓದುವ ಮೊದಲು’ ಎಂಬ ಬರಹದಡಿ ಲೇಖಕರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.
ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರ ಬದುಕಿನ, ಒಡನಾಡಿಗಳ, ಹಿರಿಯರ ಕಪ್ಪು ಬಿಳುಪಿನ ಚಿತ್ರಗಳನ್ನು ನೀಡಿರುತ್ತಾರೆ.
ಬರಹ: ರವಿಶಂಕರ್ ವಳಕ್ಕುಂಜ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ