ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಡಿತದ ಅಮಲಿನಲ್ಲಿ ವ್ಯಕ್ತಿ ಪತ್ನಿಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ತನ್ನ ಪತ್ನಿಯ ಶವದೊಂದಿಗೆ 4 ದಿನಗಳ ಕಾಲ ವಾಸವಾಗಿದ್ದ. ಅವರ ಮಲಗುವ ಕೋಣೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಗಾಜಿಯಾಬಾದ್‌ನಲ್ಲಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಆಕೆಯ ಮೃತದೇಹವನ್ನು ನಾಲ್ಕು ದಿನಗಳ ಕಾಲ ತಮ್ಮ ನಿವಾಸದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಭರತ್ ಸಿಂಗ್ ಮದ್ಯದ ಅಮಲಿನಲ್ಲಿ ನೆರೆಹೊರೆಯವರ ಬಳಿ ನಡೆದ ಘಟನೆಯನ್ನು ತಿಳಿಸಿದ್ದ ಎನ್ನಲಾಗಿದೆ.
ಅವರ ಅಪಾರ್ಟ್‌ಮೆಂಟ್‌ನಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೌಟುಂಬಿಕ ಕಲಹದ ವೇಳೆ 51 ವರ್ಷದ ಪತ್ನಿ ಸುನೀತಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 3 ರಿಂದ 4 ದಿನಗಳ ಹಳೆಯದಾದ ಮಹಿಳೆಯ ಮೃತದೇಹ ಕೊಳೆಯಲು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸುನೀತಾ ಅವರ ಮೊದಲ ಪತಿ ನಿಧನರಾಗಿದ್ದರು ಮತ್ತು ಭರತ್ ಮೊದಲ ಹೆಂಡತಿಯಿಂದ ದೂರವಾಗಿದ್ದರು. ಹಾಗಾಗಿ ಇಬ್ಬರಿಗೂ ಇದು ಎರಡನೇ ಮದುವೆ.
ಭರತ್ ತನ್ನ ಎರಡನೇ ಪತ್ನಿಯನ್ನು ಮದ್ಯದ ಅಮಲಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಭರತ್ ಮದ್ಯದಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ.
ಮಹಿಳೆಯ ಪುತ್ರನ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಭರತ್ ನನ್ನು ಬಂಧಿಸಲಾಗಿದೆ.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ