ಪ್ರಸಂಗಕರ್ತ ಅಗರಿ ಭಾಸ್ಕರ ರಾವ್ ನಿಧನ.
ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದು ಕಲೆ-ಸಾಹಿತ್ಯಾಸಕ್ತಿಯಿಂದ 30ಕ್ಕೂ ಹೆಚ್ಚು ಪ್ರಸಂಗಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಗರಿ ಭಾಸ್ಕರ ರಾವ್(76)ಇಂದು ಬೆಂಗಳೂರಿನಲ್ಲಿ ನಿಧನರಾದರು.
ಯಕ್ಷಗಾನದ ಪ್ರಸಿದ್ಧ ಭಾಗವತರಾಗಿದ್ದ ಅಗರಿ ಶ್ರೀನಿವಾಸ ಭಾಗವತರ ಸುಪುತ್ರರಲ್ಲಿ ಹಿರಿಯರಾದ ರಘುರಾಮರು ಪ್ರಸಿದ್ಧ ಭಾಗವತರಾದರೆ ತಂದೆಯ ಇನ್ನೊಂದು ಪ್ರವೃತ್ತಿಯಾದ ಪ್ರಸಂಗ ರಚನೆಯನ್ನು ಇವರು ಮುಂದುವರಿಸಿ ಹಲವು ಪ್ರಸಂಗಗಳನ್ನು ಬರೆದಿದ್ದರು.
ಕ್ಷೇತ್ರ ಮಹಾತ್ಮೆಯನ್ನು ಬರೆಯುವಲ್ಲಿ ಸಿದ್ಧಹಸ್ತರಾಗಿದ್ದರು. ಶ್ರೀ ವಿಶ್ವಕರ್ಮ ಮಹಾತ್ಮೆ,ಶ್ರೀಹರಿ ಲೀಲಾರ್ಣವ,ಶ್ರೀದೇವಿ ತ್ರಿಕರ್ಣೇಶ್ವರೀ ಮಹಾತ್ಮೆ, ಶ್ರೀ ಗುಂಡುಬಾಳ ಕ್ಷೇತ್ರ ಮಹಾತ್ಮೆ,ರಾಣೀ ಅಪ್ರಮೇಯಿ ಸೇರಿದಂತೆ ಅವರ ಹಲವು ಪ್ರಸಂಗಗಳು ರಂಗದಲ್ಲಿ ವಿಜೃಂಭಿಸಿವೆ.
ತುಳು ಭಾಷೆಯಲ್ಲೂ ಪ್ರಸಂಗ ರಚಿಸಿದ್ದಾರೆ. 2018ರಲ್ಲಿ ‘ಯಕ್ಷಗಾನ ಪ್ರಸಂಗ ದಶಕ’ ಶೀರ್ಷಿಕೆಯಲ್ಲಿ ಡಾ. ಪಾದೆಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ಉಡುಪಿಯ ಶೇವಧಿ ಪ್ರಕಾಶನದಿಂದ ಹತ್ತು ಪ್ರಸಂಗಗಳಗುಚ್ಛ ಪ್ರಕಟವಾಗಿತ್ತು. ಅದರ ಮಾರಾಟದಿಂದ ಬಂದ ಹಣವನ್ನು ಕಲಾವಿದರ ಕ್ಷೇಮ ಚಿಂತನೆಗೆ ಕೆಲಸ ಮಾಡುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ಸಮರ್ಪಿಸಿದ್ದರು.
ಅವರು ಪತ್ನಿ ,ಪುತ್ರ,ಪುತ್ರಿಯನ್ನು ಅಗಲಿದ್ದಾರೆ.ಸಂಸ್ಥೆಯ ಆಜೀವ ಸದಸ್ಯರಾದ,ಯಕ್ಷಗಾನದ ಕುರಿತು ಸದಾ ಚಿಂತಿಸುತ್ತಿದ್ದ, ಭಾಸ್ಕರ್ ರಾವ್ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

