Sunday, September 29, 2024
Homeಸುದ್ದಿಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ
ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಚಟುವಟಿಕೆ ಯ ಮೂಲಕ ಜನಪ್ರಿಯವಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ತಿಂಗಳ 11 ನೇ ತಾರೀಕಿನಿಂದ 17 ರ ವರೇಗೆ ರಾಮಾಯಣ ಮಾಸಾಚರಣೆ ಪ್ರಯುಕ್ತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನವೂ ಮಧ್ಯಾಹ್ನ 2-30 , ಕ್ಕೆ ರಾಮಾಯಣ ಕೃತಿಯ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಭಜನೆ, 7 ರಿಂದ ಪ್ರವಚನ- ರಾಮನಾಮ ಜಪಯಜ್ನ ನಡೆಯಲಿದೆ.

ಪ್ರತಿದಿನ ಶ್ರೀ ಪುಂಡರೀಕಾಕ್ಷ ಬೆಳ್ಳೂರು, ಯೋಗಾಚಾರ್ಯ ಇವರಿಂದ ಪ್ರವಚನ ನಡೆಯಲಿದೆ. 11 ರಂದು ಹಾಗು 17 ರಂದು ಪ್ರಸಿದ್ದ ಕಲಾವಿದರಿಂದ, ಹಾಗುಉಳಿದ ದಿನಗಳಲ್ಲಿ ಸಂಘ ಸಂಸ್ಥೆಗಳ ತಾಳಮದ್ಲೆ ನಡೆಯಲಿರುವುದು.


ಈ ಕಾರ್ಯಕ್ರಮದ ಉಧ್ಘಾಟನೆಯ ನ್ನು ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಧರ್ಮದರ್ಶಿ
ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು
ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ ಇವರು ನೆರವೇರಿಸಲಿರುವರು.


ಅದ್ಯಕ್ಷತೆ : ಡಾ.ಶಿವರಾಮ ಶೆಟ್ಟಿ ತಲ್ಲೂರು, ಅಧ್ಯಕ್ಷರು, ತಲ್ಲೂರು ಫೇಮಿಲಿ ಟ್ರಸ್ಟ್, ಉಡುಪಿ
ಅತಿಥಿಗಳು: ಶ್ರೀ ದಿವಾಣ ಗೋವಿಂದ ಭಟ್, ನಿರ್ದೇಶಕರು,ಅನನ್ಯ ಫೀಡ್ಸ್, ತಾರಿಹಳ್ಳ, ಹುಬ್ಬಳ್ಳಿ
ಶ್ರೀ ಅವಿನಾಶ್ ರಾವ್ ಬರಂಗಾಯಿ, ಧರ್ಮಸ್ಥಳ.
ಕಲಾಪೋಷಕರು.


ತದನಂತರ ಪ್ರಸಿದ್ದ ಕಲಾವಿದರಿಂದ

ಪಾರ್ತಿಸುಬ್ಬ ವಿರಚಿತ
ಪಟ್ಟಾಭಿಷೇಕ
ಭಾಗವತರು: ಶ್ರೀ ರಮೇಶ್ ಭಟ್ ಪುತ್ತೂರು
ಚೆಂಡೆ: ಮದ್ದಲೆ; ಶ್ರೀ ಮುರಾರಿ ಕಡಂಬಳಿತ್ತಾಯ,ಶ್ರೀ ಲಕ್ಷ್ಮೀಶ ಬೆಂಗ್ರೋಡಿ
ದಶರಥ:ಶ್ರೀ ರಾಧಾಕೃಷ್ಣ ಕಲ್ಚಾರ್
ಕೈಕೇಯಿ:ಶ್ರೀ ಹರೀಶ್ ಬಳಂತಿಮೊಗರು
ಮಂಥರೆ:ಶ್ರೀ ವೈಕುಂಠ ಹೇರ್ಳೆ ಸಾಸ್ತಾನ
ಶ್ರೀರಾಮ: ಡಾ.ಶ್ರುತಕೀರ್ತಿರಾಜ್ ಉಜಿರೆ
ಲಕ್ಷ್ಮಣ ;ಶ್ರೀ ಲಕ್ಷ್ಮಣ ಕುಮಾರ್ ಮರಕಡ

ಪ್ರತಿ ದಿನವೂ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಎಂದು ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments