ಪುತ್ತೂರು ನಗರದ ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಿಂಗಳ ಸರಣಿ ತಾಳಮದ್ದಳೆ ” ಸುದರ್ಶನ ವಿಜಯ” ದಿನಾಂಕ 20.3.2023 ರಂದು ಸಂಜೆ ನಡೆಯಿತು.
ಹಿಮ್ಮೇಳದಲ್ಲಿ ಆನಂದ ಸವಣೂರು , ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ , ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ , ಶ್ರೀಪತಿ ಭಟ್ ಉಪ್ಪಿನಂಗಡಿ , ಅಚ್ಯುತ ಪಾಂಗಣ್ಣಾಯ ಸಹಕರಿಸಿದರು.
ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ಮತ್ತು ದುಗ್ಗಪ್ಪ ಯನ್ (ವಿಷ್ಣು) ಸಂಜೀವ ಪಾರೆಂಕಿ (ಲಕ್ಷ್ಮೀ) ಗುಂಡ್ಯಡ್ಕ ಈಶ್ವರ ಭಟ್ (ಶತ್ರುಪ್ರಸೂದನ) ದಿವಾಕರ ಆಚಾರ್ಯ ಗೇರುಕಟ್ಟೆ (ಸುದರ್ಶನ) ಚಂದ್ರಶೇಖರ್ ಭಟ್ ಬಡೆಕ್ಕಿಲ (ದೇವೇಂದ್ರ) ಭಾಗವಹಿಸಿದ್ದರು.
ಟಿ. ರಂಗನಾಥ ರಾವ್ ಸ್ವಾಗತಿಸಿ ರಾಜಗೋಪಾಲ್ ಭಟ್ ಬನ್ನೂರು ವಂದಿಸಿದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ಮೋಹನ್ ಜೈನ್, ಚಂದ್ರಶೇಖರ್ ಮೊದಲಾದವರು ಸಹಕರಿಸಿದರು. ಶೇಖರ್ ಬಿರ್ವ ಬನ್ನೂರು ತಾಳಮದ್ದಳೆ ಪ್ರಾಯೋಜಿಸಿದ್ದರು.