Saturday, January 18, 2025
Homeಸುದ್ದಿಕಾನೂನು ವಿದ್ಯಾರ್ಥಿನಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ - ಶೀಲ ಶಂಕಿಸಿ ಆತ್ಮಹತ್ಯೆಗೆ ಪ್ರಚೋದನೆ...

ಕಾನೂನು ವಿದ್ಯಾರ್ಥಿನಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ – ಶೀಲ ಶಂಕಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಭಾವೀ ಪತಿಗಾಗಿ ಹುಡುಕಾಟ

ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆಯ ಬ್ಯಾಗ್‌ನಲ್ಲಿ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ವಾಣಿ (25) ಸೋಮವಾರ ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏಳು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ವಾಣಿ ಸಿ, ಬನಶಂಕರಿ ನಿವಾಸಿಯಾಗಿದ್ದು, ವಿವಿ ಪುರಂ ಕಾನೂನು ಕಾಲೇಜಿನಲ್ಲಿ 1ನೇ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಹೆಜ್ಜೆ ಇಡುವ ಮುನ್ನ ಆಕೆ ಡೆತ್ ನೋಟ್ ಬರೆದಿದ್ದಾಳೆ. ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ವಿಶ್ವೇಶ್ವರಪುರಂ ಪೊಲೀಸರು ಆಕೆಯ ಭಾವಿ ಪತಿ ಚಂದ್ರಶೇಖರ್ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ಬ್ಯಾಗ್‌ನಲ್ಲಿ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್‌ನಲ್ಲಿ ಚಂದ್ರಶೇಖರ್ ಜೊತೆಗಿನ ನಿಶ್ಚಿತಾರ್ಥದ ನಂತರ ತಾನು ಅನುಭವಿಸಿದ ನೋವನ್ನು ಉಲ್ಲೇಖಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಪೊಲೀಸರು ಚಂದ್ರಶೇಖರನನ್ನು ಹುಡುಕುತ್ತಿದ್ದಾರೆ.

ವಿದ್ಯಾರ್ಥಿನಿ ವಾಣಿ ಡೆಟ್ ನೋಟಿನಲ್ಲಿ ಏನು ಬರೆದಿದ್ದಾಳೆ?

ವಿದ್ಯಾರ್ಥಿನಿ ವಾಣಿ ಡೆತ್ ನೋಟಿನಲ್ಲಿ “ಚಂದ್ರಶೇಖರ್ ಎಂಬವನ ಜೊತೆಗೆ ನನಗೆ ನಿಶ್ಚಿತಾರ್ಥವಾಗಿತ್ತು. ಆತ ಪ್ರತಿನಿತ್ಯ ಹೊರಗೆ ಸುತ್ತಾಡಲು ಕರೆಯುತ್ತಿದ್ದ. ಆದರೆ ಮದುವೆಯ ಮೊದಲು ಅಂತದ್ದೆಲ್ಲಾ ನನಗೆ ಇಷ್ಟವಿರಲಿಲ್ಲ. ಬರುವುದಿಲ್ಲ ಎಂದು ಹೇಳಿದ ಕಾರಣ ಒಂದು ದಿನ ಆತ ಮನೆ ಬಳಿಗೆ ಬಂದಿದ್ದ. ನನ್ನ ಜೊತೆಗೆ ಹೊರಗೆ ತಿರುಗಾಡಲು ಬಾರದ ಕಾರಣ  ನಿನಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇರಬಹುದು.   ನೀನು  ನನ್ನ ಜೊತೆಗೆ ಸುತ್ತಾಡಲು ಬರ್ತಿಲ್ಲ ಎಂದು ಬೈಯಲು ತೊಡಗಿದ್ದ. ಇದರಿಂದ ನೆರೆಹೊರೆಯವರ ಎದುರು ಅವಮಾನಕ್ಕೆ ಒಳಗಾಗಬೇಕಾಯಿತು.  ಈ ಪ್ರದೇಶದಲ್ಲಿ ತಲೆ ಒತ್ತಿ ನಡೆಯಲು ಮುಜುಗುರವಾಗುತ್ತಿದೆ. ಎಲ್ಲರೂ ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬರೆದು ವಾಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡು ಚಂದ್ರಶೇಖರ್ ಗಾಗಿ ಹುಡುಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments