ಬದಿಯಡ್ಕದ ಡಾ. ಕೃಷ್ಣಮೂರ್ತಿ ಮೃತ್ಯು ಪ್ರಕರಣದಲ್ಲಿ ವ್ಯವಸ್ಥಿತ ಲ್ಯಾಂಡ್ ಜಿಹಾದ್ ಲಕ್ಷಣಗಳು ಕಾಣಿಸುತ್ತವೆ. ಇದು ಮೇಲ್ನೋಟಕ್ಕೆ ಪೋಲೀಸರಿಗೆ ಕಗ್ಗಂಟಾದ ಪ್ರಕರಣ ಎಂದು ಭಾವಿಸಲಾಗಿದೆ. ಆದರೂ ಇದರ ಪ್ರಕರಣವನ್ನು ಪರಿಶೀಲಿಸಿದಾಗ ಇದರಲ್ಲಿ ಹಲವಾರು ನಿಗೂಢ ಅನುಮಾನದ ಛಾಯೆ ಕಾಣಿಸುತ್ತದೆ. ಪೋಲೀಸರು ಆತ್ಮಹತ್ಯೆ ಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಿಸಿದ್ದರು. ಆದ ಇದು ನಿಜವಾಗಿಯೂ ಆತ್ಮಹತ್ಯೆಯೇ ಅಥವಾ ಇನ್ನೇನಾದರೂ ಕಾರಣದಿಂದ ಅವರು ಸಾವನ್ನಪ್ಪಿದರೇ?

ಆಸ್ಪತ್ರೆಗೆ ಬಂದು ಗೂಂಡಾಗಿರಿ ನಡೆಸಿದ ಐವರು ಮುಖಂಡರ ಬಂಧನವಾಗಿದೆ..ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತು ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್,ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಎಂಬವರ ಬಂದನವಾಗಿದೆ. ಪೋಲೀಸರು ಬಂಧಿಸಿದ ಐವರೂ ವ್ಯಕ್ತಿಗಳು ಬದಿಯಡ್ಕ ಆಸುಪಾಸಿನ ಪ್ರಭಾವಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಇದೊಂದು ಸುವ್ಯವಸ್ಥಿತ ರೀತಿಯ ಲ್ಯಾಂಡ್ ಜಿಹಾದ್ ಎಂದು ಶಂಕ ವ್ಯಕ್ತಪಡಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಅಷ್ಟು ದೂರದ ನಿರ್ಜನ ಪ್ರದೇಶಕ್ಕೆ ಹೇಗೆ ಹೋದರು? ಎಂಬುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ನವಂಬರ್ ಎಂಟು ಡಾಕ್ಟರ್ ಪಾಲಿಗೆ ಕರಾಳದಿನವಾಗಿತ್ತು. ಆ ದಿನ ಮುಸ್ಲಿಂ ಮಹಿಳೆ ಹಲ್ಲು ಕೀಳಲು ಬಂದಾಗ ಡಾಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮುಸ್ಲಿಮ್ ಕುಟುಂಬದ ಆರೋಪ. ಮರುದಿನ ಗೂಂಡಾಗಳ ಗುಂಪು ಕಟ್ಟಿ ಕೊಂಡು ಬಂದ ಅವರು ಡಾಕ್ಟರರ ಬಳಿ 10 ಲಕ್ಷದ ಹಣದ ಬೇಡಿಕೆಯನ್ನು ಇರಿಸಿತು ಎಂದು ಹೇಳಲಾಗುತ್ತಿದೆ. ಅದಕ್ಕೆ ಡಾಕ್ಟರ್ ಸಮ್ಮತಿಯನ್ನು ನೀಡಲಿಲ್ಲ. ಆಗ ಆ ಗುಂಪು ಪೋಲಿಸ್ ದೂರು ನೀಡುವ ಬೆದರಿಕೆ ಹಾಕಿತು. ಮತ್ತು ಡಾಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಸ್ಥಳೀಯರು ತಡೆದರು ಎಂದು ವರದಿಗಳು ಹೇಳುತ್ತವೆ.
ಈ ಘಟನೆಗಳಿಂದ ತೀವ್ರ ಮನನೊಂದ ದಂತವೈದ್ಯರು ತನ್ನ ಬೈಕನ್ನೇರಿ ಹೊರಟಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂದಿ ತಿಳಿದುಕೊಂಡಂತೆ ಅವರು ಮನೆಗೆ ಹೋಗಿರಲಿಲ್ಲ. ಡಾಕ್ಟರ್ ಪತ್ನಿ ಬದಿಯಡ್ಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ಮುಸ್ಲಿಂ ಮಹಿಳೆಯ ಗುಂಪಿನವರು ಕೂಡಾ ಡಾಕ್ಟರ್ ಮೇಲೆ ದೂರ. ನೀಡಿದ್ದರು. ಅದರ ಪ್ರಕಾರ ಪೋಲೀಸರು ಡಾಕ್ಟರ್ ಮೇಲೆಯೇ ಪ್ರಕರಣ ದಾಖಲಿಸಿದ್ದರು!
ಆಮೇಲೆ ಡಾಕ್ಟರ್ ಮೃತದೇಹ ಕುಂದಾಪುರ ಸಮೀಪದ ಹಟ್ಟಿಯಂಗಡಿ ತಲ್ಲೂರು ಕಾಡು ಅಜ್ಜಿಮನೆ ಎಂಬಲ್ಲಿ ದೊರಕಿತು. ಮೃತದೇಹವನ್ನು ಮೃತರ ಪತ್ನಿ, ಮಗಳು, ಕಾಂಪೌಂಡರ್ ಪರಮೇಶ್ವರ್, ಮೃತರ ಸಹೋದರ ಪುತ್ತೂರಿನ ಡಾ.ರಾಮಮೋಹನ್ ಮೊದಲಾದವರು ಗುರುತಿಸಿದರು. ಅದೆಲ್ಲವೂ ಈಗ ಇತಿಹಾಸ.
ಡಾಕ್ಟರರ ಅಂತ್ಯಕ್ರಿಯೆ ಇಂದು ನಡೆದಿದೆ. ಬದಿಯಡ್ಕದಲ್ಲಿ ಹರತಾಳ, ಪ್ರತಿಭಟನೆಗಳು ನಡೆದವು. ಆದರೆ ಇಲ್ಲಿ ತಾರ್ಕಿಕವಾದ ಈಗ ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ.
ಮುಸ್ಲಿಂ ಗುಂಪಿನ ಒಂದು ಹೇಳಿಕೆಯನ್ನು ಆಧರಿಸಿ ಬದಿಯಡ್ಕ ಪೋಲೀಸರು ಡಾಕ್ಟರರ ಮೇಲೆಯೇ ಕೇಸು ದಾಖಲಿಸಿದ್ದು ಯಾಕೆ? ಯಾರ ಒತ್ತಡದಿಂದ?
ಪೋಲೀಸರು ಲ್ಯಾಂಡ್ ಜಿಹಾದ್ ಮಾಫಿಯಾ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ? ಡಾಕ್ಟರ್ ಅವರ ಜಾಗದ ಬಗ್ಗೆ ಅವರಿಗೆ ಬರುತ್ತಿದ್ದ ನಿರಂತರ ಕರೆಗಳು ಮತ್ತು ಕಿರುಕುಳ ಪೋಲೀಸರ ಗಮನಕ್ಕೆ ಬಂದಿದೆಯೇ? ಅದಕ್ಕೆ ಅವರು ಕೈಗೊಳ್ಳುವ ಕ್ರಮಗಳೇನು?
ಮುಸ್ಲಿಮರು ದೂರು ನೀಡುವ ಮೊದಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ನೋಡಿದರೆ ಇದು ಒಂದು ಹನಿಟ್ರಾಪ್ ಮಾಡುವ ಯತ್ಮವೇ?

ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಿಂದ ಮೃತದೇಹ ಸಿಕ್ಕಿದ ಸ್ಥಳಕ್ಕೆ 10-12 ಕಿಲೋಮೀಟರ್ ದೂರವಿದೆ. ಅಲ್ಲಿಯವರೆಗೆ ರಾತ್ರಿ ಸಮಯದಲ್ಲಿ ಡಾಕ್ಟರ್ ರೈಲು ಹಳಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವೇ?
ಬಸ್ಸಿನಲ್ಲಿ ಬಂದು ತಲ್ಲೂರಿನಲ್ಲಿ ಇಳಿದರೂ ತನಗೆ ಅಪರಿಚಿತವಾದ ಈ ಜಾಗಕ್ಲೆ ರೈಲು ಹಳಿಯಲ್ಲಿಯೇ 3 ಕಿಲೋಮೀಟರ್ ನಡೆದುಕೊಂಡು ಬಂದರೇ?
ಹಾಗಾದರೆ ಡಾಕ್ಟರ್ ತಾವೇ ರೈಲಿನಡಿಗೇ ಬಿದ್ದರೇ ಅಥವಾ ಅವರನ್ನು ಕೊಂದು ರೈಲು ಹಳಿಗೆ ಎಸೆಯಲಾಯಿತೇ ಎಂದು ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕ ತಿಳಿಯಲಿದೆ.
ಕಾಣೆಯಾಗಿ ಕೇಸು ದಾಖಲಿಸಿದ್ದು ಕೇರಳದಲ್ಲಿ. ಮೃತದೇಹ ಸಿಕ್ಲಿದ್ದು ಕರ್ನಾಟಕದಲ್ಲಿ. ಹಾಗಾದರೆ ಇದು ತನಿಖೆಗೆ ತೊಡಕಾಗಿ ಪರಿಣಮಿಸಲಿದೆಯೇ? ಉದ್ದೇಶಪೂರ್ವಕವಾಗಿ ಈ ರೀತಿ ಯಾರಾದರೂ ಮಾಡಿರಬಹುದೇ?
ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಹಿಂದೂ ಸಂಘಟನೆಗಳು ಇದೊಂದು ವ್ಯವಸ್ಥಿತ ಲ್ಯಾಂಡ್ ಜಿಹಾದ್ ಮಾಫಿಯಾ ಎಂದು ಆರೋಪಿಸಿವೆ. ಡಾಕ್ಟರ್ ನ್ಮು ಸಮಸ್ಯೆಯಲ್ಲಿ ಸಿಲುಕಿಸಲೆಂದೇ ಮುಸ್ಲಿಂ ಮಹಿಳೆಯನ್ನು ಕಳುಹಿಸಿ ದೂರು ಕೊಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಪೋಲೀಸರು ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸುತ್ತಾರೆಯೇ ಎಂದ ಕಾದುನೋಡಬೇಕಾಗಿದೆ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

