ಉತ್ಥಾನ ದ್ವಾದಶಿ ತುಳಸಿ ಪೂಜೆಯ ಮಹತ್ವವನ್ನು ತಿಳಿಸುವ ಪೌರಾಣಿಕ ಕಥಾನಕ ‘ತುಳಸಿ ಜಲಂಧರ’ ಪ್ರಸಂಗದ ತಾಳಮದ್ದಳೆ ಉಪ್ಪಿನಂಗಡಿ ನಟ್ಟಿಬೈಲಿನ ಶ್ರೀರಾಮ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿತು.
ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಕು.ಶ್ರೇಯಾ ಆಲಂಕಾರು, ಕುಮಾರಿ ಪ್ರಜ್ಞಾ ಆಚಾರ್ಯ ಉಪ್ಪಿನಂಗಡಿ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರ್,ಶ್ರೀಪತಿ ಭಟ್ ಉಪ್ಪಿನಂಗಡಿ
ಅರ್ಥಧಾರಿಗಳಾಗಿ ಸತೀಶ ಆಚಾರ್ಯ ಮಾಣಿ, ಕುಮಾರಿ ಹರ್ಷಿತಾ, ದಿವಾಕರ ಆಚಾರ್ಯ ಗೇರುಕಟ್ಟೆ, ನಾರಾಯಣ ಭಟ್ ಅಲಂಕಾರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಕುಮಾರಿ ವರಲಕ್ಷ್ಮಿ, ಬಾಲಕೃಷ್ಣ ಕೇಪುಳು ಮತ್ತು ಹರೀಶ್ ಆಚಾರ್ಯ ಉಪ್ಪಿನಂಗಡಿ ಭಾಗವಹಿಸಿದ್ದರು.


