ಮೂಡಬಿದಿರೆಯಲ್ಲಿ ಇಂದು ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಮಳೆಗಾಲದ ಅಮೋಘ ತಾಳಮದ್ದಳೆ ಪ್ರದರ್ಶನ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ತಾಳಮದ್ದಳೆ ಕ್ಷೇತ್ರದ ಪ್ರಸಿದ್ಧ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಯಕ್ಷಸಂಗಮ ಮೂಡಿಬಿದಿರೆ ಇವರು ಸಮಾಜ ಮಂದಿರ ಸಭಾ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇಂದು ದಿನಾಂಕ 23.07.2022ನೇ ಶನಿವಾರ ರಾತ್ರಿ ಘಂಟೆ 9ಕ್ಕೆ ಸರಿಯಾಗಿ ತಾಳಮದ್ದಳೆ ಆರಂಭವಾಗಲಿದೆ.
ದಮಯಂತಿ ಪುನಃ ಸ್ವಯಂವರ, ರಾವಣ ವಧೆ ಎಂಬ ಪ್ರಸಂಗದಲ್ಲಿ ಪ್ರಸಿದ್ಧ ಕಲಾವಿದರೇ ಅರ್ಥಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ತಾರಾನಾಥ ವರ್ಕಾಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಪ್ರದರ್ಶನದ ಮೊದಲು ಗಣ್ಯ ಅತಿಥಿಗಳ ಭಾಗವಹಿಸುವಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಚಿತ್ರ ನೋಡಿ.


- ಇಮ್ರಾನ್ ಖಾನ್ ಜೀವಂತವಾಗಿದ್ದಾರೆಯೇ? ಜೈಲಿನಲ್ಲಿಯೇ ಸಾವಿನ ಸಂದೇಹ
- ನೆಟ್ಫ್ಲಿಕ್ಸ್ನ ‘ಲವ್ ಈಸ್ ಬ್ಲೈಂಡ್’ (Love Is Blind) ಈಗ ಬಹು ಜನಪ್ರಿಯ
- 3.7 ಮಿಲಿಯನ್ ಪೌಂಡ್ (47 ಕೋಟಿ ರೂಪಾಯಿ) ಮೌಲ್ಯದ ಫೆರಾರಿ ಕಾರು ಪೊಲೀಸ್ ಕಾರ್ಯಾಚರಣೆಯಲ್ಲಿ ವಶಕ್ಕೆ
- ಉಜಿರೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಢಿಕ್ಕಿ – ಯುವಕ ಸಾವು: UJIRE
- ಒಂದೇ ದೋಣಿಯಲ್ಲಿ ಕುಳಿತು ಇಂಗ್ಲಿಷ್ ಕಾಲುವೆಯನ್ನು ದಾಟಿದ 230 ಜನರು!

