ಶ್ರೀ ಇಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿಯು ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ಯೋಜನೆ ಕಳೆದ ಏಳು ವರ್ಷದಿಂದ ನಡೆದುಕೊಂಡು ಬಂದಿದ್ದು ಕಲಾಪೋಷಕರ ನೆರವಿನಿಂದ ನಡೆಯುವ ಈ ಪ್ರದರ್ಶನ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿದೆ. ನಿರಂತರವಾಗಿ ಯಕ್ಷಾಂಗಣದಲ್ಲಿ ಪ್ರತೀ ಮಾಸವೂ ವಿವಿಧ ಪೌರಾಣಿಕ ಪ್ರಸಂಗವನ್ನು ಪ್ರದಶಿ೯ಸಲಾಗುವುದು.
ದಿನಾಂಕ 31.07.2024 ಬುಧವಾರ ಕೆರಮನೆ ಶಿವರಾಮ ಹೆಗಡೆ ರಂಗಮಂದಿರ ಗುಣವಂತೆಯಲ್ಲಿ ಮಾಸದ ಆಟ ನಡೆಯಿತು. ಶ್ರೀ ಐ.ಆರ್ ಭಟ್ಟ ಮುರುಡೇಶ್ವರ ಯಕ್ಷಗಾನ ಪ್ರೇಮಿಗಳು ಪ್ರಾಯೋಜಕತ್ವ ವಹಿಸಿದ್ದರು.

ಮಾರುತಿ ಪ್ರತಾಪ ಯಕ್ಷಗಾನ ಏರ್ಪಡಿಸಿದ್ದು ಕಲಾವಿದರಾಗಿ ಶ್ರೀ ಕೆರಮನೆ ಶಿವಾನಂದ ಹೆಗಡೆ ಕೃಷ್ಣನಾಗಿ, ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ ನಾರದನಾಗಿ, ಶ್ರೀ ಈಶ್ವರ ಭಟ್ಟ ಅಂಸಳ್ಳಿ ಹನುಮಂತನಾಗಿ, ಶ್ರೀ ಸದಾಶಿವ ಭಟ್ಟ ಸತ್ಯಭಾಮೆಯಾಗಿ, ಶ್ರೀ ವಿಘ್ನೇಶ್ವರ ಹಾವಗೋಡಿ ಬಲರಾಮನಾಗಿ,
ಕೆರೆಮನೆ ಶ್ರೀಧರ ಹೆಗಡೆ ಕೃಷ್ಣನಾಗಿ, ಶ್ರೀ ಚಂದ್ರಶೇಖರ್ ಎನ್. ಮಹಾವೀರ ಜೈನ್ ಬಾಲಗೋಪಾಲನಾಗಿ, ಶ್ರೀ ವಿನಾಯಕ ನಾಯ್ಕ್ ಗರುಡನಾಗಿ, ಶ್ರೀ ಗಣಪತಿ ಕುಣಬಿ ರುಕ್ಮಿಣಿ ಹಾಗೂ ಸಖಿಯಾಗಿ, ಶ್ರೀ ಕೃಷ್ಣ ಮರಾಠಿ ಬಾಲಗೋಪಾಲ ಹಾಗೂ ಶ್ರೀ ಸೀತಾರಾಮ ಮುಡಾರೆ ವನಪಾಲಕನಾಗಿ ಪಾತ್ರ ನಿರ್ವಹಿಸಿದ್ದರು.


ಹಿಮೇಳದಲ್ಲಿ ಭಾಗವತರಾಗಿ ಶ್ರೀ ಅನಂತ ಹೆಗಡೆ ದಂತಳಿಗೆ ಮದ್ದಲೆ ಶ್ರೀ ನರಸಿಂಹ ಹೆಗಡೆ, ಹಾಗೂ ಚಂಡೆ ಶ್ರೀ ರಾಮನ್ ಹೆಗಡೆ ಇವರು ನಿರ್ವಹಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಮಾರುತಿ ಪ್ರತಾಪ ಯಕ್ಷಗಾನ ಕಾರ್ಯಕ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಮಂಡಳಿಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆಯವರಿಂದ ಮಾಸದಾಟದ ಪ್ರಾಯೋಜಕರಿಗೆ ವೇದಿಕೆಯಲ್ಲಿ ಗೌರವ ಮತ್ತು ಕೃತಜ್ಞತೆಯ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.