ಪ್ರಸಿದ್ಧ ಕಲಾವಿದರ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮ
ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಚಂದ್ರಶೇಖರ ಉರಾಳರ ಪ್ರಾಯೋಜಕತ್ವದಲ್ಲಿ 28-01-2024ರಂದು ಮಧ್ಯಾಹ್ನ 3ಕ್ಕೆ ಕೋಟ ಹೈಸ್ಕೂಲ್ ಹಿಂಭಾಗ ಅಂಬಲಕೆರೆ ರಸ್ತೆ “ಶ್ರೀ ಪದ್ಮಾಲಯ”ದ ಪ್ರಾಂಗಣದಲ್ಲಿ “ಕರ್ಣಾರ್ಜುನ” ತಾಳಮದ್ದಲೆ ಮತ್ತು ಪ್ರಸಿದ್ಧ ಚಂಡೆವಾದಕರಾದ ಮಂಧಾರ್ತಿ ರಾಮಕೃಷ್ಣರವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ಯಕ್ಷದೇಗುಲ ಸಂಯೋಜನೆಯಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ, ಲಂಬೋದರ ಹೆಗಡೆ, ಗಣೇಶ ನಾವಡ, ಚಂಡೆ-ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಮಂದಾರ್ತಿ ರಾಮಕೃಷ್ಣ, ಶಿವಾನಂದ ಕೋಟ, ಸುದೀಪ ಉರಾಳ
ಮುಮ್ಮೇಳದ ಅರ್ಥಧಾರಿಯಾಗಿ ವಿದ್ವಾನ್ ಉಮಾಕಾಂತ್ ಭಟ್, ಉಜಿರೆ ಅಶೋಕ ಭಟ್, ಸುಜಯೀಂದ್ರ ಹಂದೆ ಮತ್ತು ವೈಕುಂಠ ಹೇರ್ಳೆಯವರು ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ ಸುದರ್ಶನ ಉರಾಳ
ಮೊ: 9448547237
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ