Saturday, January 18, 2025
Homeಸುದ್ದಿಬಹುಮಹಡಿ ಕಟ್ಟಡದ 29ನೇ ಮಹಡಿಯಿಂದ ಜಿಗಿದು 12 ವರ್ಷದ ಬೆಂಗಳೂರಿನ ಹುಡುಗಿ ಸಾವು

ಬಹುಮಹಡಿ ಕಟ್ಟಡದ 29ನೇ ಮಹಡಿಯಿಂದ ಜಿಗಿದು 12 ವರ್ಷದ ಬೆಂಗಳೂರಿನ ಹುಡುಗಿ ಸಾವು

(ಪ್ರಾತಿನಿಧಿಕ ಚಿತ್ರ)
ದಕ್ಷಿಣ ಬೆಂಗಳೂರಿನ ಹುಳಿಮಾವುನಲ್ಲಿರುವ ವಸತಿ ಸಮುಚ್ಚಯದ 29ನೇ ಮಹಡಿಯಿಂದ ಹಾರಿ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದೆ.

ಬಾಲಕಿಯ ಮನೆಯವರು ಹೇಳುವ ಪ್ರಕಾರ ಮುಂಜಾನೆ 4.30ಕ್ಕೆ ಎದ್ದು ಹಾಲ್ ಗೆ ಹೋಗಿದ್ದಾಳೆ. ಇಷ್ಟು ಬೇಗ ಏಳಲು ಕಾರಣವೇನು ಎಂದು ಆಕೆಯ ತಾಯಿ ಕೇಳಿದಾಗ, ಹುಡುಗಿ ಮತ್ತೆ ಮಲಗಲು ತನ್ನ ಕೋಣೆಗೆ ಮರಳಿದಳು


ಮುಂಜಾನೆ 5 ಗಂಟೆ ಸುಮಾರಿಗೆ ಬಾಲಕಿ ಕಟ್ಟಡದಿಂದ ಜಿಗಿದಿದ್ದಾಳೆ. ಭದ್ರತಾ ಸಿಬ್ಬಂದಿ ಆಕೆಯ ಪೋಷಕರಿಗೆ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯ ಕೃತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಆದರೆ ಕೌಟುಂಬಿಕ ಸಮಸ್ಯೆಗಳಿಂದ ಬಾಲಕಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿ ಓದುತ್ತಿದ್ದಳು. ಆಕೆಯ ತಂದೆ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ತಾಯಿ ಗೃಹಿಣಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments