ಕಾಸರಗೋಡು: ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ರಾಮಾಯಣ ಮಹಾಸಾಚರಣೆಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ- ಭಜನೆ -ಪ್ರವಚನ ಕಾರ್ಯಕ್ರಮಕ್ಕೆ ಡಾ. ಲಕ್ಷ್ಮೀನಾರಾಯಣ ಹಾದಿಗಲ್ಲು ,ಧರ್ಮದರ್ಶಿಗಳು, ಶ್ರೀ ಅಭಯನೃ ಸಿಂಹ ದೇವಸ್ಥಾನ , ಹಾದಿಗಲ್ಲು ತೀರ್ಥಹಳ್ಳಿ ತಾಲೂಕು ಇವರು ಚಾಲನೆ ನೀಡಿದರು.
ಕಾಸರಗೋಡು ಪ್ರದೇಶವು ಕರ್ನಾಟಕದ ಅವಿಭಾಜ್ಯ ಅಂಗ ಯಾವುದೋ ಕಾರಣದಿಂದ ಕೇರಳ ಪಾಲಾಯಿತು. ಆದರೂ ನಮ್ಮ ಭಾವನೆಗಳಲ್ಲಿ ಕಾಸರಗೋಡು ನಮ್ಮದೇ, ಕರ್ನಾಟಕದ್ದೇ ಎಂಬುದಾಗಿ. ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಮರೆಯಲಸದಳ. ಕೈಯಾರರಂತಹ ಕವಿ ಶ್ರೇಷ್ಠರು ಮೆರೆದ ನಾಡು.
ಯಾವುದೇ ವಿಚಾರಕ್ಕೂ ಹಿನ್ನಡೆ ಎಂಬುದೇ ಇಲ್ಲ. ಯಾಕೆಂದರೆ ಸಿರಿಬಾಗಿಲು ಪ್ರತಿಷ್ಠಾನದಂತಹ ಸಾಂಸ್ಕೃತಿಕ ಕನ್ನಡಪರ ಸಂಸ್ಥೆಗಳು ಹತ್ತು ಹಲವು ಚಟುವಟಿಕೆಗಳ ಮೂಲಕ ಸಂಸ್ಕೃತಿಯನ್ನು ಮೆರೆಸುವಂತೆ ಮಾಡುತ್ತಿದೆ.
ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದಂತಹ ಶ್ರೀ ರಾಮಕೃಷ್ಣ ಮಯ್ಯ ಇವರ ನೇತೃತ್ವದ ಪ್ರತಿಷ್ಠಾನ ಈಗಾಗಲೇ ವಿಶ್ವ ವ್ಯಾಪಕವಾಗಿದೆ. ಇಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು. ರಾಮಾಯಣ ಮಾಸ ಆಚರಣೆಯ ರಾಮನ ಆದರ್ಶ ಬಗ್ಗೆ ಮನ ಮುಟ್ಟುವಂತೆ ವಿಸ್ತರಿಸಿ ಮಹಾಭಾರತ ಹಾಗೂ ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ ಅಂದರು.ಅಯೋಧ್ಯೆಯಲ್ಲಿ ಹಿಂದೆ ಪೇಜಾವರ ಶ್ರೀಗಳ ಜತೆ ಕರಸೇವೆಯಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಯನ್ನು ಪ್ರತಿಷ್ಠಾಪಿಸಿದ ಸುದಿನ ನೆನಪಿಸಿದರು.
ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಭಾರತೀಯರ ನಮಗೆಲ್ಲಾ ಸಂತಸ ವಿಚಾರ ಅಂದರು.
ದಿವಾಣ ಗೋವಿಂದ ಭಟ್
ಮುಖ್ಯ ಅತಿಥಿಗಳಾಗಿದ್ದ ಶ್ರೀ ಗೋವಿಂದ ಭಟ್ ದಿವಾಣ ಶ್ರೀ ಅನನ್ಯ ಸೀಡ್ಸ್ ತಾರಿಹಾಳ ಹುಬ್ಬಳ್ಳಿ ಇದರ ವ್ಯವಸ್ಥಾಪಕನಾಗಿದ್ದು ಯಕ್ಷಗಾನದ ದಿಗ್ಗಜ ಮೇರು ಕಲಾವಿದ ದಿವಂಗತ ಲಯಬ್ರಹ್ಮ ಬಿರುದಾಂಕಿತ ಭೀಮ ಭಟ್ಟ ಇವರ ಸುಪುತ್ರರಾಗಿದ್ದಾರೆ.
ಹಿರಿಯರು ಹಿಂದಿನ ಕಾಲದಲ್ಲಿ ಕಷ್ಟದಿಂದ ಉಳಿಸಿ ಬೆಳೆಸಿದ ಪವಿತ್ರ ಕಲೆ ಯಕ್ಷಗಾನ. ಅದನ್ನು ಉಳಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಹಿರಿಯರಾದ ದಿವಾಣ ಭಿಮ ಭಟ್ಟರು ಮಾರ್ಗದರ್ಶನದಲ್ಲಿ ಬೆಳೆದು ಬಂದವನು. ಉಧ್ಯಮಿಯಾಗಿದ್ದರೂ ಯಕ್ಷಗಾನಕ್ಕಾಗಿ, ಕಲಾವಿದರಿಗಾಗಿ ಸದಾ ಸಿದ್ದ ಹಸ್ತನಾಗಿದ್ದೇನೆ ಎಂದು ಹೇಳಿದರು.
ಡಾ.ತಲ್ಲೂರು ಶಿವರಾಮ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಡಾಕ್ಟರ್ ತಲ್ಲೂರು ಶಿವರಾಮ ಶೆಟ್ಟಿ ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸಿದರು. ಇದೊಂದು ಅಧ್ಯಯನ ಯೋಗ್ಯ ಭವನ -ಮ್ಯೂಸಿಯಂ ಅಂತೂ ಅತ್ಯದ್ಭುತವಾಗಿದೆ. ಕಾಸರಗೋಡಿನಲ್ಲಿ ಇಂತಹ ಪ್ರಯತ್ನಗಳಿಂದ ಸಿರಿಬಾಗಲು ಪ್ರತಿಷ್ಠಾನದ ಯೋಜನೆ ಚಾರಿತ್ರಿಕವಾಗಿರಲಿ ಅಂದರು.
ಡಾಕ್ಟರ್ ಶ್ರುತಕೀರ್ತಿರಾಜ್ ಉಜಿರೆಯವರು ನಿರೂಪಿಸಿದರು ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ ಉಪಸ್ಥಿತರಿದ್ದರು ಆ ಬಳಿಕ ಪ್ರಸಿದ್ಧ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ಲೆ ಜರಗಿತು.
ಹಿಮ್ಮೇಳ ದಲ್ಲಿ ರಮೇಶ್ ಭಟ್ ಪುತ್ತೂರು, ಮುರಾರಿ ಕಡಂಬಳಿತ್ತಾಯ, ಲಕ್ಮೀಶ ಬೆಂಗ್ರೋಡಿ ಸಹಕರಿಸಿದರೆ,ದಶರಥನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಕೈಕೇಯಿಯಾಗಿ ಹರೀಶ್ ಬಳಂತಿಮೊಗರು, ಮಂಥರೆಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು, ಶ್ರೀರಾಮನಾಗಿ ಶ್ರುತಕೀರ್ತಿರಾಜ್, ಲಕ್ಷ್ಮಣನಾಗಿ ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಿದರು.
ಇದಕ್ಕೆ ಮೊದಲು ಕೆನರಾ ಬೇಂಕ್ ನವರು ಪ್ರತಿಷ್ಠಾನಕ್ಕೆ ನೀಡಿದ ಮಹೇಂದ್ರ ಕಂಪೆನಿಯ ಜನರೇಟರ್ ನ್ನು ಕಂಪೆನಿಯ ಸದಸ್ಯರು ಉಪಸ್ಥಿತಿಯಲ್ಲಿ ಶ್ರೀ ಮಧುಕರ ಭಾಗವತರು ಚಾಲನೆ ನೀಡಿದರು.

ಸಂಜೆ 7 ರಿಂದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು.





