ಮಗಳಿಗೆ ಕಿರುಕುಳ ನೀಡಿದ್ದಕ್ಕೆ ಪ್ರಶ್ನಿಸಿದ್ದಕ್ಕೆ ಹಾವನ್ನು ಕೋಣೆಯೊಳಗೆ ಎಸೆದು ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ ಯುವಕನ ಬಂಧನ
ತಿರುವನಂತಪುರ: ಹಾವು ಬಳಸಿ ವ್ಯಕ್ತಿಯೊಬ್ಬನನ್ನು ಕೊಲ್ಲಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಟ್ಟಕ್ಕಡದಲ್ಲಿ ನಡೆದ ಘಟನೆಯಲ್ಲಿ ಗುಂಡುರಾವ್ ಅಲಿಯಾಸ್ ಕಿಚ್ಚು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಅಂಬಲತಿಂಕಲ ಮೂಲದ ರಾಜು ಎಂಬಾತನನ್ನು ಕಿಚ್ಚು ಕೊಲೆಗೆ ಯತ್ನಿಸಿದ್ದ.
ಕಿಚ್ಚು ತನ್ನ ಮಗಳಿಗೆ ಕಿರುಕುಳ ನೀಡಿದ್ದಕ್ಕೆ ರಾಜು ಪ್ರಶ್ನಿಸಿದ್ದ. ಇದಕ್ಕೆ ಪ್ರತೀಕಾರವಾಗಿ ಕಿಚ್ಚು ರಾಜು ಕೊಲೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹಾವನ್ನು ಕಿಟಕಿಯ ಮೂಲಕ ರಾಜು ಅವರ ಕೋಣೆಗೆ ಎಸೆದಿದ್ದಾರೆ.
ಆರೋಪಿ ಪೊಲೀಸರ ಬಳಿ ಅಪರಾಧ ಒಪ್ಪಿಕೊಂಡಿದ್ದಾನೆ. ತದನಂತರ ಅವನನ್ನು ಬಂಧಿಸಲಾಯಿತು.