Friday, November 22, 2024
Homeಸುದ್ದಿಸಿರಿಬಾಗಿಲಿನಲ್ಲಿ ಮಂಜುನಾದ

ಸಿರಿಬಾಗಿಲಿನಲ್ಲಿ ಮಂಜುನಾದ

ಮಣಿಕೃಷ್ಣ ಸ್ವಾಮಿ ಅಕಾಡಮಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಕೃತಿಗಳಾಧರಿತ 14″ನೇ ಸಂಗೀತ ಕಛೇರಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಿತು.

ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಚಾರಿತ್ರಿಕ ಕಾರ್ಯಕ್ರಮ ಆಯೋಜಿಸಿ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಯೋಚನೆ ಅದ್ವಿತೀಯವಾದುದು.

ಸಾಂಸ್ಕೃತಿಕ ಹಾಗು ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ಪ್ರತಿಷ್ಠಾನ ನಡೆಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ಕೃತಿಗಳನ್ನು ಆಧಾರಿಸಿ ಮಣಿಕೃಷ್ಣ ಸ್ವಾಮಿ ಅಕಾಡಮಿಯು ಇಂತಹ ಅಪೂರ್ವವಾದ ಕೊಡುಗೆ ಸಮಾಜಕ್ಕೆ ನೀಡುತ್ತಿದೆ. ಮಂಜುನಾಥ ಸ್ವಾಮಿಯು ಅನುಗ್ರಹಿಸಲಿ ಎಂದು ಹರಸಿದರು.

ಶ್ರೀ ಕಲ್ಮಾಡಿ ಸದಾಶಿವ ಆಚಾರ್ಯರವರು ಅಪಾರ ಶಿಷ್ಯ ವೃಂದವನ್ನು ಹೊಂದಿದ ಸಂಗೀತ ಕ್ಷೇತ್ರದ ಕಾಸರಗೋಡಿನ ಹಿರಿಯ ವಿದ್ವಾಂಸ ರಾಗಿದ್ದಾರೆ.


ಧಾರ್ಮಿಕ ಮುಂದಾಳು ಶ್ರೀ ವೆಂಕಟ್ರಮಣ ಹೊಳ್ಳ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೋ. ಶ್ರೀನಾಥ್, ಶ್ರೀ ಮೋಹನದಾಸ್ ಶೆಟ್ಟಿ ಸಿರಿಬಾಗಿಲು, ಸಂಗೀತ ವಿಧುಷಿ ಶ್ರೀಮತಿ ರಾಧಾ ಮುರಳೀಧರನ್,ಶ್ರೀ ಲಕ್ಷ್ಮೀ ನಾರಾಯಣ ಕಾವುಮಠ ಉಪಸ್ಥಿತರಿದ್ದರು.


ಹಲವು ಕ್ಷೇತ್ರದಲ್ಲಿ ಸಂಗೀತ ಕಾರ್ಯಾಗಾರ ನಡೆಸಿದ್ದೇವೆ. ಯಕ್ಷಗಾನ ಕ್ಷೇತ್ರದ ಪ್ರಧಾನ ಕೇಂದ್ರವಾಗಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ಪ್ರಥಮ. ನಮ್ಮ ಸುಯೋಗವೆಂದು ಮಣಿಕೃಷ್ಣ ಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ರಾವ್ ಪೇಜಾವರ ಹೇಳಿದರು. .


ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಸ್ವಾಗತಿಸಿದರು.
ಆ ಬಳಿಕ ಶ್ರೇಯಾ ಕೊಳತ್ತಾಯ ಸುರತ್ಕಲ್, ಉಷಾ ರಾಮಕೃಷ್ಣ ಭಟ್ ಕಿನ್ನಿಗೊಳಿ, ಶರಣ್ಯಾ ಕೆ.ಯಸ್. ಸುರತ್ಕಲ್, ಸುಮೇಧಾ ಕೆ.ಯನ್.ಮೇಧಾ ಉಡುಪ ಮಂಗಳೂರು ಇವರಿಂದ ಮಂಜುನಾದ ಸಂಗೀತ ಕಛೇರಿ ನಡೆಯಿತು,

ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಕೌಶಿಕ್ ರಾಮಕೃಷ್ಣನ್ ಕಾಸರಗೋಡು ಸಹಕರಿಸಿದರು . .


ಸಿರಿಬಾಗಿಲು ಪ್ರತಿಷ್ಠಾನದ ವರದಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments