ತೆಂಕುತಿಟ್ಟಿನ ಪ್ರತಿಭಾನ್ವಿತ ಕಲಾವಿದರಾದ ಜಗದೀಶ ನಲ್ಕ (46) ಅವರು 06-04-2023ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳೆದ 21 ವರುಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಗವತಿ ಮಹಾತ್ಮೈಯಲ್ಲಿ ಈಶ್ವರನ ಪಾತ್ರ, ದೇವಿ ಮಹಾತ್ಮೈಯಲ್ಲಿ ವಿಷ್ಣು, ರಕ್ತಬೀಜನ ಪಾತ್ರ ಹೀಗೆ ಎಲ್ಲ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದರು.

ಪತ್ನಿ, ಪುತ್ರಿ, ಪುಟಾಣಿ ಗಂಡು ಮಗುವನ್ನು ಅಗಲಿದ್ದಾರೆ.
ಯಕ್ಷನಿಧಿಯ ಸದಸ್ಯರಾಗಿರುವ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.