ತನ್ನನ್ನು ಎಚ್ಚರಿಸಲು ತಡವಾದ ಕಾರಣಕ್ಕೆ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಕೇರಳದ ತ್ರಿಶೂರ್ ಜಿಲ್ಲೆಯ ಕೊಡನ್ನೂರು ಅರಿಯಂಪದಂ ಮೂಲದ ಜಾಯ್ (60) ಎಂದು ಗುರುತಿಸಲಾಗಿದೆ.

ತಂದೆಯನ್ನು ಕೊಂದದ್ದಕ್ಕಾಗಿ ಪೊಲೀಸರು ಜಾಯ್ ಅವರ ಪುತ್ರ ರಿಜೋ(25)ನನ್ನು ವಶಕ್ಕೆ ಪಡೆದಿದ್ದಾರೆ.

ವೆಲ್ಡಿಂಗ್ ಕೆಲಸಗಾರನಾಗಿದ್ದ ರಿಜೋ ಸಂಜೆ 5 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಮನೆಗೆ ಬಂದಿದ್ದಾನೆ. ಮಲಗಲು ತೆರಳುವ ಮುನ್ನ ರಾತ್ರಿ 8.15ಕ್ಕೆ ತನ್ನನ್ನು ಎಬ್ಬಿಸುವಂತೆ ಪೋಷಕರಿಗೆ ಹೇಳಿ ಮಲಗಿದ್ದ.
ಆದರೆ ಸರಿಯಾದ ಸಮಯದ ಹದಿನೈದು ನಿಮಿಷದ ನಂತರ ಅಂದರೆ ರಾತ್ರಿ 8.30ರ ವೇಳೆಗೆ ಆತನನ್ನು ಪೋಷಕರು ಎಬ್ಬಿಸಿದರೂ ತಡವಾದ್ದಕ್ಕೆ ಆತ ಕೂಗಾಡಿದ್ದಾನೆ. ಇದನ್ನು ಜಾಯ್ ಪ್ರಶ್ನಿಸಿದಾಗ, ರಿಜೋ ಅವರನ್ನು ದೂಡಿ ಕೆಳಗೆ ತಳ್ಳಿದ್ದಾನೆ.
ನಂತರ ಆತ ತನ್ನ ತಂದೆ ಜಾಯ್ ಅವರನ್ನು ಕ್ರೂರವಾಗಿ ಹೊಡೆಯಲು ಪ್ರಾರಂಭಿಸಿದ. ಜಾಯ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

