ಸಾಹಿತಿ, ಕಲಾವಿದ, ಶಿಕ್ಷಕ ಸಾತ್ವಿಕ ಮನೋಭಾವದ ಸಹೃದಯಿ ಅಂಬಾತನಯ ಮುದ್ರಾಡಿ (88) ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ.
ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಶಿಕ್ಷಕ, ಹರಿದಾಸ,ಸಾಹಿತಿ ಮೊದಲಾದ ವಿಭಾಗಗಳಲ್ಲಿ ಜನಪ್ರಿಯರಾದ ಅಂಬಾತನಯ ಮುದ್ರಾಡಿ (ಶ್ರೀ ಕೇಶವ ಶೆಟ್ಟಿಗಾರ್) ಬಹುಮುಖೀ ಸಾಧನೆ ಮತ್ತು ಸಾತ್ವಿಕ ಮನೋಭಾವಕ್ಕೆ ಹೆಸರಾಗಿದ್ದರು.
ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.
ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಅರ್ಹವಾಗಿ ಸಂದಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.
ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ “ಸ್ವಪ್ರಯತ್ನದ ಧೀಮಂತ ಲೇಖಕ – ಅಂಬಾತನಯ ಮುದ್ರಾಡಿ” ಎಂಬ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು.
ಅಂಬಾತನಯ ಮುದ್ರಾಡಿಯವರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

