
ಪುತ್ತೂರು, ಡಿ 19 : ರಾಜಸ್ತಾನದ ಉದಯಪುರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಾಗರಿ ಎನ್ ರೈ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ಯೋಗ ಸ್ಫರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಈಕೆ ಮೈಸೂರಿನ ನೂತನ್ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ.
ಬಾಲಕರ ವಿಭಾಗದ ಆರ್ಟಿಸ್ಟಿಕ್ ವಿಭಾಗದ ಯೋಗ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ ಜೆ (ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ) ದ್ವಿತೀಯ ಸ್ಥಾನ ಗಳಿಸಿದ್ದಾರೆ.
ರಿಧಮಿಕ್ ವಿಭಾಗದ ಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮನ್ನಿತ್ ಎನ್ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ) ತೃತೀಯ ಸ್ಥಾನ ಗಳಿಸಿದ್ದಾರೆ.
ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

