ಮಂಗಳೂರು ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಪುರುಷನ ಶವ ಬೆತ್ತಲೆ ಸ್ಥಿತಿಯಲ್ಲಿ ಕಂಡುಬಂದಿದೆ. ಸಾವಿಗೂ ಸ್ವಲ್ಪ ಸಮಯದ ಮೊದಲು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕೊಠಡಿಗೆ ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ನಲ್ಲಿ ಮಂಗಳವಾರ ಡಿ.13ರಂದು ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಾಸರಗೋಡು ಮೂಲದ ಅಬ್ದುಲ್ ಕರೀಂ (56) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪಂಪ್‌ವೆಲ್‌ನಲ್ಲಿರುವ ಪದ್ಮಶ್ರೀ ಲಾಡ್ಜ್‌ನಲ್ಲಿ ಅಬ್ದುಲ್ ಕರೀಂ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ಕೆಲವು ಮಾತ್ರೆಗಳೂ ಪತ್ತೆಯಾಗಿವೆ.
ಸಾವಿಗೂ ಮೊದಲು ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.
ಮಹಿಳೆ ಜೊತೆಗಿರುವಾಗ ಸಾವು ಸಂಭವಿಸಿದೆಯೇ ಅಥವಾ ಆಮೇಲೆ ಸಾವು ಸಂಭವಿಸಿದೆಯೇ ಎಂದು ತನಿಖೆಯಿಂದ ತಿಳಿಯಲಿದೆ.