9-12-2022 ರಂದು ಸೀಮಾ ಶುಲ್ಕ, ಬೆಂಗಳೂರು ವಲಯ (customs, bangalore zone) ಸೀಮಾ ಶುಲ್ಕ ಕಾಯಿದೆ 1962, 60 ರ ಸಂಭ್ರಮಾಚರಣೆಯಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿಂದ ಬಹು ಜನರ ಅಪೇಕ್ಷೆ ಮೇರೆಗೆ 1500ಕ್ಕೂ ಹೆಚ್ಚು ಪ್ರದರ್ಶನ ಕಂಡ “ಇಳೆಯಣ್ಣನ ಕತೆ” ಯಕ್ಷಗಾನ ಪ್ರದರ್ಶನ ನಡೆಯಿತು.
ಹಿರಿಯ ರಂಗಕರ್ಮಿ ಗೋಪಾಲ ಕೃಷ್ಣ ನಾಯರಿ ಯವರು ಹಿಂದಿಯ “ಏಕ್ ಚಿಟ್ಟಿ” ಕಿರು ನಾಟಕವನ್ನು ಕನ್ನಡಕ್ಕೆ ಇಳೆಯಣ್ಣನ ಕತೆ ಎನ್ನುವ ಯಕ್ಷಗಾನ ಪ್ರಸಂಗವಾಗಿ ರಚಿಸಿದರು.
ಪ್ರಸಂಗವನ್ನು ಕೆ.ಮೋಹನ್ ನಿರ್ದೇಶಿಸಿ ಈಗ 1500 ಕ್ಕೂ ಹೆಚ್ಚು ಪ್ರದರ್ಶನ ಕಂಡು ನೂರಾರು ಕಲಾವಿದರು ಈ ಪ್ರಸಂಗದಲ್ಲಿ ವೇಷ ಮಾಡಿರುವುದು ಹೆಮ್ಮೇಯ ವಿಚಾರ. ನಿನ್ನೆಯ ಕಾರ್ಯಕ್ರಮ customs ವಿಚಾರದ ಬಗ್ಗೆ ನಡೆದಿದ್ದು, ಪ್ರಿಯಾಂಕ ಕೆ ಮೋಹನ್ ನಿರ್ದೇಶನ ನೀಡಿ,ಸುದರ್ಶನ ಉರಾಳರು ಸಂಯೋಜನೆ ಮಾಡಿದರು.
ಕಲಾವಿದರಾಗಿ ಸುಬ್ರಹ್ಮಣ್ಯ ಹೊಳ್ಳ, ಕಾರ್ತಿಕ ದಾರೇಶ್ವರ, ಶ್ರೀಧರ,ವಿಶ್ವನಾಥ ಶೆಟ್ಟಿ, ಶಶಾಂಕ ಕಾಶಿ, ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ಶ್ರೀವತ್ಸ ಇನ್ನೀತರು ಭಾಗವಹಿಸಿದರು.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

