ಶಾರೀಕ್ ತನ್ನ ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಮಂಗಳೂರು ಸ್ಪೋಟದ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಅದೂ ಅಲ್ಲದೆ ಈ ಮೂವರೂ ಸೇರಿ ಭಾರತವನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡಿದ್ದರು ಎಂದು ಆ ಗುರಿಯನ್ನು ಹೊಂದಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.
ತನಿಖೆಯ ವೇಳೆಯಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುತ್ತಾ ಇದೆ. ಪೊಲೀಸ್ ತನಿಖೆಯಲ್ಲಿ ಮಹತ್ವದ ವಿಚಾರವೊಂದು ತಿಳಿದುಬಂದಿದೆ. ಶಾರೀಕ್ ತನ್ನ ಸಹೋದರಿಯರ ಅಕೌಂಟ್ ಗೆ ಲಕ್ಷಗಟ್ಟಲೆ ಹಣವನ್ನು ವರ್ಗಾಯಿಸಿರುವುದು ಗೋಚರಿಸಿದೆ.
ಇಷ್ಟೆಲ್ಲಾ ಅಗಾಧ ಪ್ರಮಾಣದ ಮೊತ್ತ ಶಾರೀಕ್ ಗೆ ಎಲ್ಲಿಂದ ಬರುತ್ತಿತ್ತು? ವಿದೇಶಿ ಮೂಲಗಳಿಂದ ಭಾರತದ ವಿರುದ್ಧ ಕಾರಸ್ಥಾನ ನಡೆಸಲು ಈ ಮೊತ್ತ ಬರುತ್ತಿದೆಯಾ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.
ಪೊಲೀಸರು ಈ ಬಗ್ಗೆ ಇನ್ನಷ್ಟು ಚುರುಕಿನ ತನಿಖೆಯನ್ನು ಕೈಗೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ.
