ದಿನಾಂಕ 13-11-2022ರಂದು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ವಿಶ್ವವಿನೋದ ಬನಾರಿಯವರ 75ನೇ ಅಭಿನಂದನಾ ಸಮಾರಂಭದ ಎರಡನೆಯ ಅಂಗವಾಗಿ ಯಕ್ಷಗಾನ ಹಾಡುಗಾರಿಕೆಯ ಸಾಂಪ್ರಾದಾಯಿಕ ಮಟ್ಟುಗಳು – ಒಂದು ಪ್ರಾತ್ಯಕ್ಷಿಕೆ ಎಂಬ ವಿಚಾರವಾಗಿ ಯಕ್ಷಗಾನ ಗೋಷ್ಠಿ ಜರಗಿತು.

ಸುಬ್ರಾಯ ಸಂಪಾಜೆ, ಡಾ. ಪುರುಷೋತ್ತಮ ಭಟ್ ನಿಡುವಾಜೆ, ಭವ್ಯಶ್ರೀ ಕುಲ್ಕುಂದ, ಅವರು ಯಕ್ಷಗಾನದ ವಿವಿಧ ರಾಗ, ತಾಳಗಳಲ್ಲಿ ಪ್ರಸಂಗ ಪದ್ಯಗಳನ್ನು ಪ್ರಸ್ತುತಪಡಿಸಿದರು. ಡಾ. ಶ್ರೀಕೃಷ್ಣ ಸುಣ್ಣಂಗುಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಚಂದ್ರಶೇಖರ ಗುರುವಾಯನಕೆರೆ ಭಾಗವಹಿಸಿದರು.
ಬೆಳ್ಳಿಗೆ ನಾರಾಯಣ ಮಣಿಯಾಣಿ, ನಾ. ಕಾರಂತ ಪೆರಾಜೆ, ದಿವಾಣ ಶಂಕರ ಭಟ್, ಎಸ್.ಎನ್.ಪಂಜಾಜೆ, ಡಾ. ವೀಣಾ ಪಾಲಚಂದ್ರ ಸುಳ್ಯ, ಎಸ್.ಎನ್.ಭಟ್ ಬಾಯಾರು, ರಾಜಗೋಪಾಲ ಕನ್ಯಾನ, ಬೆಳ್ಳಿಪ್ಪಾದಿ ಸದಾಶಿವ ರೈ, ಜಯರಾಮ ಭಟ್ ದೇವಸ್ಯ, ಕೋಡ್ಲ ಗಣಪತಿ ಭಟ್, ಸಬ್ಬಣಕೋಡಿ ರಾಮ ಭಟ್, ಹರೀಶ್ ಕುಲ್ಕುಂದ, ಪ್ರಶಾಂತ್ ರೈ, ಸುನಂದಾ ಶೆಟ್ಟಿ ಸುಳ್ಯ, ರಾಜಶ್ರೀ ಟಿ.ರೈ ಪೆರ್ಲ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಮೊದಲಾದವರು ಗೋಷ್ಟಿಯ ಸಂವಾದದಲ್ಲಿ ಪಾಲ್ಗೊಂಡರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಕಾರದಲ್ಲಿ ನಡೆದ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ವಹಿಸಿಕೊಂಡಿದ್ದರು. “ಅಡಿಕೆಯಲ್ಲಿ ವಿವಿಧ ಪ್ರಕಾರಗಳಿದ್ದಂತೆ ಯಕ್ಷಗಾನದಲ್ಲೂ ವಿವಿಧ ಶೈಲಿಗಳಿವೆ . ಬಲಿಪರು, ಅಗರಿಯವರು, ಮಾಂಬಾಡಿಯವರ ವಿಭಿನ್ನ ಶೈಲಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಪದ್ಯದಲ್ಲಿ ಅಕಾರವಿದ್ದರೆ ಆಲಾಪನೆಯೂ ಅಕಾರದಲ್ಲಿ ಇರಬೇಕು. ಉಕಾರವಾದರೆ ಉಕಾರ ಹೀಗೆ….” ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದರು. ಕಾಲಧರ್ಮಕ್ಕನುಗುಣವಾಗಿ ಕಲೆಯಲ್ಲಿ ಮಾರ್ಪಾಡು ಅಗತ್ಯ. ಆದರೆ ಅದರ ಮೂಲಸತ್ತ್ವ ಕಳೆದುಹೋಗಬಾರದು ಎಂಬುದಾಗಿಯೂ ತಿಳಿಸಿದರು.
ಪ್ರಭಾಕರ ಶಿಶಿಲ, ರಾಜಗೋಪಾಲ ಕನ್ಯಾನ, ರಾಜಶ್ರೀ ಟಿ.ರೈ ಪೆರ್ಲ, ಸದಾಶಿವ ರೈ ಬೆಳ್ಳಿಪ್ಪಾಡಿ, ಸುಂದರ ಕೇನಾಜೆ, ಜಯರಾಮ ಭಟ್ ದೇವಸ್ಯ ಮೊದಲಾದವರು ಗೋಷ್ಠಿಯಲ್ಲಿ ಮಾತನಾಡುತ್ತ ಹಾಡುಗಳು ಹೇಗಿತ್ತು ಹೇಗಾಗಬೇಕು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಕೇಶ್ ರೈ ಶೇಣಿ ಸ್ವಾಗತಿಸಿ ಜಲಜಾಕ್ಷಿ ರೈ ಬೆಳ್ಳಿಪ್ಪಾಡಿ ವಂದಿಸಿದರು.
