ಒಮ್ಮೊಮ್ಮೆ ಮೊಬೈಲ್ ಎಂಬ ಗೀಳಿಗೆ ಅಂಟಿಕೊಳ್ಳುವ ಈಗಿನ ಯುವಕ ಯುವತಿಯರು ಆ ಚಟದಿಂದ ಹೊರಬರಲಾರದೆ ಚಡಪಡಿಸುತ್ತಿರುವುದನ್ನು ಕಾಣಬಹುದು.

ಇಲ್ಲೊಂದು ಪ್ರಕರಣ ಅದೇ ರೀತಿ ನಡೆದಿದೆ. ಮಾತ್ತವಲ್ಲದೆ ಈ ಮೊಬೈಲ್ ಚಟ ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಯುವತಿ ತನ್ನ ತಮ್ಮ (ಕಿರಿಯ ಸಹೋದರ) ಮೊಬೈಲ್ ಓಪನ್ ಮಾಡುವ ಪಾಸ್ ವರ್ಡ್ ಬರಲಿಸಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ನಡೆದದ್ದು ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ. ಇಲ್ಲಿಯ ನಿವಾಸಿ 19 ವರ್ಷದ ಯುವತಿ ರುಚಿತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಹುಡುಗಿ.
ಆಕೆಗೆ ಅತಿಯಾಗಿ ಮೊಬೈಲ್ ಬಳಸುವ ಚಾಳಿ ಅಂಟಿಕೊಂಡಿತ್ತು. ಅದನ್ಮು ಬಿಡಿಸಲು ಆಕೆಯ ತಮ್ಮ ಆಕೆಗೆ ಪ್ರತಿದಿನ ಬುದ್ಧಿ ಹೇಳುತ್ತಿದ್ದ. ಆದರೆ ಆಕೆ ಕೇಳಿರಲಿಲ್ಲ.
ಕೊನೆಗೆ ಆಕೆಯ ಅಭ್ಯಾಸವನ್ನು ಬಿಡಿಸಲು ಮೊಬೈಲ್ ತೆರೆಯುವ ಪಾಸ್ ವರ್ಡ್ ಕೋಡನ್ನು ಬದಲಾವಣೆ ಮಾಡಿದ್ದ. ಇದನ್ನು ತಿಳಿದ ಆಕೆ ಹೊಸ ಪಾಸ್ ವರ್ಡ್ ಹೇಳುವಂತೆ ತಮ್ಮನನ್ನು ಒತ್ತಾಯಿಸಿದಳು. ಆದರೆ ಆತ ಹೇಳಿರಲಿಲ್ಲ.
ಇದರಿಂದ ಜಗಳ ಮಾಡಿಕೊಂಡ ಆಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!

