Sunday, January 19, 2025
Homeಸುದ್ದಿಸಹೋದರ ಮೊಬೈಲ್‌ ಪಾಸ್ ವರ್ಡ್ ಬದಲಿಸಿದ್ದಕ್ಕಾಗಿ 19ರ ಯುವತಿ ಆತ್ಮಹತ್ಯೆ

ಸಹೋದರ ಮೊಬೈಲ್‌ ಪಾಸ್ ವರ್ಡ್ ಬದಲಿಸಿದ್ದಕ್ಕಾಗಿ 19ರ ಯುವತಿ ಆತ್ಮಹತ್ಯೆ


ಒಮ್ಮೊಮ್ಮೆ ಮೊಬೈಲ್‌ ಎಂಬ ಗೀಳಿಗೆ ಅಂಟಿಕೊಳ್ಳುವ ಈಗಿನ ಯುವಕ ಯುವತಿಯರು ಆ ‌ಚಟದಿಂದ ಹೊರಬರಲಾರದೆ ಚಡಪಡಿಸುತ್ತಿರುವುದನ್ನು ಕಾಣಬಹುದು.

ಇಲ್ಲೊಂದು ಪ್ರಕರಣ ಅದೇ ರೀತಿ ನಡೆದಿದೆ. ಮಾತ್ತವಲ್ಲದೆ ಈ ಮೊಬೈಲ್‌ ಚಟ ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಯುವತಿ ತನ್ನ ತಮ್ಮ (ಕಿರಿಯ ಸಹೋದರ) ಮೊಬೈಲ್ ಓಪನ್ ಮಾಡುವ ಪಾಸ್ ವರ್ಡ್ ಬರಲಿಸಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆ ನಡೆದದ್ದು ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ. ಇಲ್ಲಿಯ ನಿವಾಸಿ 19 ವರ್ಷದ ಯುವತಿ ರುಚಿತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಹುಡುಗಿ.

ಆಕೆಗೆ ಅತಿಯಾಗಿ ಮೊಬೈಲ್‌ ಬಳಸುವ ಚಾಳಿ ಅಂಟಿಕೊಂಡಿತ್ತು. ಅದನ್ಮು ಬಿಡಿಸಲು ಆಕೆಯ ತಮ್ಮ ಆಕೆಗೆ ಪ್ರತಿದಿನ ಬುದ್ಧಿ ಹೇಳುತ್ತಿದ್ದ. ಆದರೆ ಆಕೆ ಕೇಳಿರಲಿಲ್ಲ.

ಕೊನೆಗೆ ಆಕೆಯ ಅಭ್ಯಾಸವನ್ನು ಬಿಡಿಸಲು ಮೊಬೈಲ್ ತೆರೆಯುವ ಪಾಸ್ ವರ್ಡ್ ಕೋಡನ್ನು ಬದಲಾವಣೆ ಮಾಡಿದ್ದ. ಇದನ್ನು ತಿಳಿದ ಆಕೆ ಹೊಸ ಪಾಸ್ ವರ್ಡ್ ಹೇಳುವಂತೆ ತಮ್ಮನನ್ನು ಒತ್ತಾಯಿಸಿದಳು. ಆದರೆ ಆತ ಹೇಳಿರಲಿಲ್ಲ.

ಇದರಿಂದ ಜಗಳ ಮಾಡಿಕೊಂಡ ಆಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments