ಮುಂಬೈನ ಆರೆ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಮುಂಜಾನೆ 16 ತಿಂಗಳ ಬಾಲಕಿ ತನ್ನ ತಾಯಿಯ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿರುವಾಗ ಚಿರತೆ ದಾಳಿಗೆ ಬಲಿಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೊಳಗಾದ ಮಗು ಇತಿಕಾ ಅಖಿಲೇಶ್ ಲಾಟ್ ಅವರನ್ನು ಮರೋಲ್‌ನಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.
“ಸಂತ್ರಸ್ತರ ತಾಯಿ ಸೋಮವಾರ ಮುಂಜಾನೆ 5.45 ಕ್ಕೆ ಅವರ ಮನೆಯ ಸಮೀಪವಿರುವ ದೇವಸ್ಥಾನಕ್ಕೆ ಹೋಗಿದ್ದರು ಮತ್ತು ಇತಿಕಾ ಅವರನ್ನು ಹಿಂಬಾಲಿಸಿದರು. ಆಕೆಯ ಮೇಲೆ ಚಿರತೆ ದಾಳಿ ಮಾಡಿದೆ. ಸ್ಥಳೀಯರು ಬೊಬ್ಬೆ ಹೊಡೆದು ಹೆದರಿಸಿದಾಗ ಚಿರತೆ ಓಡಿ ಹೋಗಿದೆ.
ಇತಿಕಾ ಅವರನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಕುತ್ತಿಗೆಯ ಮೇಲೆ ಗಾಯಗಳಾಗಿದ್ದು, ಆಘಾತ ಮತ್ತು ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಜಿ ಮಲ್ಲಿಕಾರ್ಜುನ್ ತಿಳಿಸಿದರು.
ಘಟಕ ಸಂಖ್ಯೆ 15ರ ನಿವಾಸಿಗಳು ಸಾಕಷ್ಟು ಆಘಾತಕ್ಕೊಳಗಾಗಿದ್ದು, ಕೂಡಲೇ ಚಿರತೆಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ. ಆರೆ ಕಾಲೋನಿಯು ಹಸಿರು ವಲಯವಾಗಿದೆ ಮತ್ತು ಇದು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ ಮತ್ತು ಚಿರತೆಗಳು ಹೆಚ್ಚಾಗಿ ಕಾಡಿನಿಂದ ಆರೆಗೆ ವಲಸೆ ಹೋಗುತ್ತವೆ, ಆದರೆ ಕೆಲವು ಚಿರತೆಗಳು ಆರೆಯಲ್ಲಿ ಉಳಿಯುತ್ತವೆ.

ಇತಿಕಾ ಅಂತಿಮ ವಿಧಿವಿಧಾನದ ನಂತರ ಚಿರತೆಗಾಗಿ ಬಲೆ ಬೀಸಲಾಗುವುದು ಎಂದು ಮಲ್ಲಿಕಾರ್ಜುನ್ ತಿಳಿಸಿದರು. “ನಾವು ಸೆವೆನ್ ಹಿಲ್ಸ್‌ನಿಂದ ದೇಹವನ್ನು ತೆಗೆದುಕೊಂಡು ಗೋರೆಗಾಂವ್‌ನ ಸಿದ್ಧಾರ್ಥ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ.
ಶೀಘ್ರದಲ್ಲೇ ಆಕೆಯ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲಿದ್ದೇವೆ ಎಂದು ವೃತ್ತ ಅರಣ್ಯಾಧಿಕಾರಿ ನಾರಾಯಣ ಮಾನೆ ತಿಳಿಸಿದ್ದಾರೆ.