‘ರಂಗಾಂತರಂಗ’ ಇದು ಲಕ್ಷ್ಮೀ ಮಚ್ಚಿನ ಅವರು ಬರೆದ ಕೃತಿ. ಶ್ರೀಯುತರು ಬರೆದ ಹದಿನೇಳನೆಯ ಹೊತ್ತಗೆಯಿದು. ಇವರ ಪೂರ್ಣ ಹೆಸರು ಪಟಿಕ್ಕಲ್ಲು ಲಕ್ಷ್ಮೀನರಸಿಂಹ ಶಾಸ್ತ್ರಿ ಎಂದು. ಲಕ್ಷ್ಮೀ ಮಚ್ಚಿನ ಇವರ ಕಾವ್ಯ ನಾಮ. ಇವರು ಹಿರಿಯ ಖ್ಯಾತ ಸಾಹಿತಿ ಶ್ರೀ ಪ. ರಾಮಕೃಷ್ಣ ಶಾಸ್ತ್ರಿಗಳ ಪುತ್ರರು. ಇವರು ಯರ್ಮುಂಜ ಮನೆತನದವರು. ಲಕ್ಷ್ಮೀ ಮಚ್ಚಿನ ಅವರು ಪತ್ರಕರ್ತರಾಗಿ ಲೇಖಕರಾಗಿ ಪ್ರಸಿದ್ಧರು.
‘ರಂಗಾಂತರಂಗ’ ಎಂಬುದು ತೆಂಕುತಿಟ್ಟಿನ ಹಿರಿಯ, ಪ್ರಸಿದ್ಧ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಕುರಿತಾಗಿ ಬರೆದಿರುವ ಕೃತಿ. ಅವರ ಯಕ್ಷಗಾನ ಕಲಾಬದುಕಿನ ಕುರಿತಾದ ವಿಚಾರಗಳು ಈ ಕೃತಿಯೊಳಗಿವೆ. ಈ ಬಗೆಗೆ ಅತ್ಯಂತ ಸರಳ ಸುಂದರವಾಗಿ ಲಕ್ಷ್ಮೀ ಮಚ್ಚಿನ ಅವರು ವಿಚಾರಗಳನ್ನು ಅಕ್ಷರ ರೂಪದಲ್ಲಿ ನೀಡಿರುತ್ತಾರೆ. ಮೈಸೂರಿನ ‘ಮಡಿಲು ಪ್ರಕಾಶನ’ ಈ ಕೃತಿಯ ಪ್ರಕಾಶಕರು.
ವಿದ್ವಾಂಸ, ವಿಮರ್ಶಕ, ಖ್ಯಾತ ಹಿರಿಯ ತಾಳಮದ್ದಳೆ ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿ ಅವರು ಈ ಕೃತಿಗೆ ‘ಚೊಕ್ಕ ಕಲಾವಿದನ ಸ್ವಚ್ಛ ಕಥನ’ ಎಂಬ ಶೀರ್ಷಿಕೆಯಡಿ ನಲ್ನುಡಿಗಳನ್ನು ಬರೆದಿರುತ್ತಾರೆ. ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಅನುಗ್ರಹ ಸಂದೇಶವನ್ನು ನೀಡಿ ಹರಸಿರುತ್ತಾರೆ.
ಹಿರಿಯ ಸಾಹಿತಿಗಳಾದ ಡಾ| ಎಚ್. ಎಸ್. ವೆಂಕಟೇಶಮೂರ್ತಿ ಬೆನ್ನುಡಿಯನ್ನು ಬರೆದಿರುತ್ತಾರೆ. ಲೇಖಕರಾದ ಲಕ್ಷ್ಮೀ ಮಚ್ಚಿನ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿ ಸಹಕರಿಸಿದ ಮಹನೀಯರಿಗೆಲ್ಲಾ ಕೃತಜ್ಞತೆಗಳನ್ನು ಸೂಚಿಸಿರುತ್ತಾರೆ.
ಈ ಕೃತಿಯು ಓದುಗರ ಕೈಸೇರಿದ್ದು 2021ರಲ್ಲಿ. ಇದು ಒಟ್ಟು 212 ಪುಟಗಳಿಂದ ಕೂಡಿದ ಪುಸ್ತಕ. ಇದರ ಬೆಲೆ ರೂಪಾಯಿ ಇನ್ನೂರು ಮಾತ್ರ.
ರಂಗಾಂತರಂಗ ಎಂಬ ಈ ಕೃತಿಯು ಪೀಠಿಕೆ, ಬೆಂಬಿಡದ ಬಡತನ, ಬಾಲ್ಯದ ಆಟ ತುಂಟಾಟ, ರಂಗಪ್ರವೇಶ, ಮಾರ್ಗದರ್ಶನ ಮಾಡಿದವರು, ಮೇಳ ಬದಲು, ಪುತ್ತೂರು ಮೇಳಕ್ಕೆ, ಕುಂಬಳೆ ಮೇಳದ ಅನುಭವ, ಮೇಳದ ತಿರುಗಾಟದ ಅನುಭವ, ತಿರುಗಾಟಕ್ಕೆ ವಿದಾಯ, ಹಿರಿಯರ ಒಡನಾಟ, ಕಲೆಯನ್ನೇ ಆರಾಧಿಸುವ ಎಡನೀರು ಶ್ರೀಗಳು, ಯಕ್ಷಗಾನ ಎಂಬ ಕಾಮಧೇನು, ರಂಗಾನುಭವ, ಉಪಸಂಹಾರ ಎಂಬ ಹತ್ತೊಂಭತ್ತು ಬರಹಗಳಿಂದ ಕೂಡಿದೆ.
ಈ ಶೀರ್ಷಿಕೆಗಳ ಬರಹಗಳಡಿ ಲಕ್ಷ್ಮೀ ಮಚ್ಚಿನ ಅವರು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಯಕ್ಷಗಾನ ಕಲಾ ಬದುಕನ್ನೂ ವ್ಯಕ್ತಿತ್ವವನ್ನೂ ಸುಂದರವಾಗಿ ಚಿತ್ರಿಸಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಕಲಾವಿದ ಶ್ರೇಷ್ಠರೊಬ್ಬರ ಬಗೆಗೆ ಬರೆದ ಉತ್ತಮವಾದ ಪುಸ್ತಕವಿದು.
ಶ್ರೀ ಲಕ್ಷ್ಮೀ ಮಚ್ಚಿನ ಅವರಿಂದ ಇನ್ನೂ ಇಂತಹ ಕೃತಿಗಳು ರಚಿಸುವಂತಾಗಲಿ. ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರಿಂದ ಇನ್ನಷ್ಟು ಕಲಾಸೇವೆಯು ನಡೆಯುವಂತಾಗಲಿ ಎಂಬ ಹಾರೈಕೆಗಳು.
ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಮೊಬೈಲ್: 9449282876
ರಂಗಾಂತರಂಗ ಪುಸ್ತಕದ ಲೇಖಕರು : ಶ್ರೀ ಲಕ್ಷ್ಮೀ ಮಚ್ಚಿನ, ಮೊಬೈಲ್ 9900474805
ಪುಸ್ತಕ ಪರಿಚಯ – ಶ್ರೀ ರವಿಶಂಕರ್ ವಳಕ್ಕುಂಜ ಮೊಬೈಲ್: 9164487083
ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions