Saturday, January 18, 2025
HomeUncategorizedಆಟೋ ಚಾಲಕರ ಪುತ್ರಿ ನಾಪತ್ತೆ ಪ್ರಕರಣ - ವಿಟ್ಲದಲ್ಲಿ ಅಮಾಯಕ ಯುವತಿಯರಿಗೆ ಥಳಿಸಿದ ಯುವಕರ ಗುಂಪು

ಆಟೋ ಚಾಲಕರ ಪುತ್ರಿ ನಾಪತ್ತೆ ಪ್ರಕರಣ – ವಿಟ್ಲದಲ್ಲಿ ಅಮಾಯಕ ಯುವತಿಯರಿಗೆ ಥಳಿಸಿದ ಯುವಕರ ಗುಂಪು

ಕೊಳ್ನಾಡು ಕಾಡುಮಠ ಎಂಬಲ್ಲಿರುವ ಆಟೋ ಚಾಲಕರ ಪುತ್ರಿಯೊಬ್ಬಳು ಕಾಣೆಯಾದ ವಿಚಾರಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆಟೋ ಚಾಲಕರ ಪುತ್ರಿ ಮುಸ್ಲಿಂ ಯುವತಿ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು.

ಆದರೆ  ಕಾಸರಗೋಡಿನ ಸ್ನೇಹಿತೆಯೊಂದಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗುತ್ತಿದ್ದಾಗ ಮನೆಯಲ್ಲಿ ಬೈಗುಳ ಮತ್ತು ಆಕ್ಷೇಪಗಳಿಗೆ ಹೆದರಿ ಪುನಃ ವಿಟ್ಲ ಪೇಟೆಗೆ ಬಂದಿದ್ದಳು.

ಯುವತಿಯರಿಬ್ಬರು ಒಟ್ಟಿಗೆ ಹೋದ ವಿಚಾರವನ್ನು ತಿಳಿದ ಸಾಲೆತ್ತೂರು ಮತ್ತು ಕಾಡುಮಠದ ಮುಸ್ಲಿಂ ಯುವಕರ ಗುಂಪು ಒಟ್ಟು ಸೇರಿ ವಿಟ್ಲಕ್ಕೆ ಧಾವಿಸಿತು. ಅಲ್ಲಿ ಪೇಟೆಯಲ್ಲಿ ಈ ಯುವಕರ ಗುಂಪು ಈ  ಇಬ್ಬರು ಯುವತಿಯರಿಗಾಗಿ ಹುಡುಕಾಡತೊಡಗಿತು.

ಆದರೆ ಅಲ್ಲಿ ಇಬ್ಬರು ಬುರ್ಖಾ ಧರಿಸಿದ ಯುವತಿಯರು ಈ ಗುಂಪಿನ ಕಣ್ಣಿಗೆ ಬಿದ್ದರು. ಆದರೆ ಈ ಯುವತಿಯರು ಕುದ್ದುಪದವಿನವರಾಗಿದ್ದರು. ಕಾಣೆಯಾದ ಯುವತಿಯರೆಂದು ಭಾವಿಸಿ ಮುಸ್ಲಿಂ ಯುವಕರ ಗುಂಪು ಅವರ ಮೇಲೆ ಹಲ್ಲೆ ಮಾಡಿತು.

“ನಾವು ಆಟೋ ಚಾಲಕರ ಪುತ್ರಿಯಲ್ಲ, ನಾವು ಕುದ್ದುಪದವಿನವರು” ಎಂದು ಪರಿಪರಿಯಾಗಿ ಆ ಯುವತಿಯರು ಹೇಳಿದರೂ ಕೇಳದ ಗುಂಪು ಅವರ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿತ್ತು.

ಕೂಡಲೇ ಅಲ್ಲಿಗೆ ಬಂದ ವಿಟ್ಲ ಪೊಲೀಸರು ಮುಸ್ಲಿಂ ಯುವಕರಲ್ಲಿ ಅವರಲ್ಲಿ ಓರ್ವನನ್ನು ವಶಕ್ಕೆ ಪಡೆದು ಕುದ್ದುಪದವಿನ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುದ್ದುಪದವಿನ ಯುವತಿಯರ ಮನೆಯವರು ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments