ಇಂದು (5-10-2022) ಮಧ್ಯರಾತ್ರಿ 12 ಘಂಟೆಯಿಂದ ನಾಳೆ ಬೆಳಗ್ಗೆ 10 ಘಂಟೆಯವರೆಗೆ ಕೊಲ್ಲಂಗಾನ ಕ್ಷೇತ್ರದಲ್ಲಿ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರಾಮಾಂಜನೇಯ, ವಿಶ್ವಾಮಿತ್ರ ಮೇನಕೆ, ಭಾರ್ಗವ ಪ್ರಪಂಚ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕೊಲ್ಲಂಗಾನ ದಶಮಿ ಯಕ್ಷೋತ್ಸವ – 2022 ರ ಅಂಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಮೊದಲಿಗೆ ರಾಮಾಂಜನೇಯ ಪ್ರಸಂಗವು ರಾತ್ರಿ 12 ಘಂಟೆಯಿಂದ ಮುಂಜಾನೆ 4 ಘಂಟೆಯವರೆಗೆ ನಡೆಯಲಿದೆ. ಆಮೇಲೆ ವಿಶ್ವಾಮಿತ್ರ ಮೇನಕೆ ಪ್ರಸಂಗವು ಮುಂಜಾನೆ 4 ಘಂಟೆಯಿಂದ ಬೆಳಗ್ಗೆ 6.30 ರ ವರೆಗೆ ನಡೆಯಲಿದೆ.
ಬಳಿಕ ಭಾರ್ಗವ ಪ್ರಪಂಚ ಪ್ರಸಂಗವು ಬೆಳಗ್ಗೆ 6.30 ರಿಂದ ನಾಳೆ (6.10.2022) ಬೆಳಗ್ಗೆ 10 ಘಂಟೆಯ ವರೆಗೆ ನಡೆಯಲಿದೆ. ಸಂಘಟಕರು ಮತ್ತು ಶ್ರೀ ಕ್ಷೇತ್ರ ಕೊಲ್ಲಂಗಾನ ದಶಮಿ ಯಕ್ಷೋತ್ಸವ ಸಮಿತಿಯವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions