ಇಂದು ದಿನಾಂಕ 05.10.2022ರ ಬುಧವಾರ ಸಂಜೆ 6 ಘಂಟೆಯಿಂದ ಕಟೀಲು ಕ್ಷೇತ್ರದಲ್ಲಿ ವಿಜಯದಶಮಿ ಪ್ರಯುಕ್ತ ಭರ್ಜರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿಜಯದಶಮಿಯ ಪ್ರಯುಕ್ತ ಹತ್ತು ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಮೊದಲಿಗೆ ಒಂಭತ್ತು ಪ್ರಸಂಗಗಳನ್ನೊಳಗೊಂಡ ಸಂಪೂರ್ಣ ಕುರುಕ್ಷೇತ್ರ ಪ್ರದರ್ಶನ ನಡೆಯಲಿದೆ. ಆಮೇಲೆ ಕೊನೆಯಲ್ಲಿ ಲಕ್ಷ್ಮೀಸ್ವಯಂವರ ಪ್ರಸಂಗದ ಯಕ್ಷಗಾನ ಪ್ರದರ್ಶನ ಜರಗಲಿರುವುದು.
ಸಂಪೂರ್ಣ ಕುರುಕ್ಷೇತ್ರ, ಲಕ್ಷ್ಮೀಸ್ವಯಂವರ (ಭೀಷ್ಮಪರ್ವ, ಅಭಿಮನ್ಯು ಕಾಳಗ, ಸೈ೦ಧವ ವಧೆ, ಘಟೋತ್ಕಜ ವಧೆ, ದ್ರೋಣಪರ್ವ, ದುಶ್ಶಾಸನ ವಧೆ, ಕರ್ಣ ಪರ್ವ, ಶಲ್ಯ ಪರ್ವ, ಗದಾಪರ್ವ, ಲಕ್ಷ್ಮೀಸ್ವಯಂವರ ) ಎಂಬ ಪ್ರಸಂಗಗಳ ಅಭೂತಪೂರ್ವ ಪ್ರದರ್ಶನ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.